ನವದೆಹಲಿ: ಉತ್ತರ ಪ್ರದೇಶ ಸರ್ಕಾರವು ಸಂವಿಧಾನವನ್ನು ಅಪಹಾಸ್ಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರ ವಿರುದ್ಧ ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶರು ನ್ಯಾಯಾಲಯಕ್ಕೆ ಪತ್ರ ಬರೆದು ವಿಚಾರಣೆಗೆ ಒತ್ತಾಯಿಸಿದ್ದಾರೆ.
ಮುಸ್ಲಿಂ ನಾಗರಿಕ ವಿರುದ್ಧ ರಾಜ್ಯ ಅಧಿಕಾರಿಗಳು ಹಿಂಸಾಚಾರ ಹಾಗೂ ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆಗಳನ್ನು ವಿರೋಧಿಸಿ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು 12 ಪ್ರಮುಖ ವ್ಯಕ್ತಿಗಳು ಒತ್ತಾಯಿಸಿದ್ದಾರೆ. ಇದರಲ್ಲಿ 3 ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶರಿದ್ದಾರೆ.
Advertisement
Advertisement
ನ್ಯಾಯಾಲಯಕ್ಕೆ ನಿರ್ದಿಷ್ಟವಾಗಿ ಪತ್ರ ಬರೆದ ಪ್ರತಿಭಟನಾಕಾರರು ಮನೆಗಳನ್ನು ಬುಲ್ಡೋಜರ್‍ಗಳ ಮೂಲಕ ತೆರವುಗೊಳಿಸುತ್ತಿರುವುದು ಕಾನೂನು ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ. ಈ ಬಗ್ಗೆ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಮೂರ್ತಿಗಳಾದ ಬಿ ಸುದರ್ಶನ್ ರೆಡ್ಡಿ, ವಿ ಗೋಪಾಲ ಗೌಡ ಮತ್ತು ಎಕೆ ಗಂಗೂಲಿ ಒತ್ತಾಯಿಸಿದ್ದಾರೆ. ಈ ಪತ್ರಕ್ಕೆ ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಹಾಗೂ 6 ವಕೀಲರು ಸಹಿ ಹಾಕಿದ್ದಾರೆ. ಇದನ್ನೂ ಓದಿ: ಚಾಮುಲ್ ಚುನಾವಣೆ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ತೀವ್ರ ಮುಖಭಂಗ
Advertisement
Advertisement
ಅಷ್ಟೇ ಅಲ್ಲದೇ ಇದೀಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿಂದ ಪ್ರಚೋದಿಸಲ್ಪಟ್ಟ ಜೂ. 10ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ಜಾವೇದ್ ಅಹ್ಮದ್ ಅವರ ಮನೆಯನ್ನು ಬುಲ್ಡೋಜರ್‍ರಿಂದ ತೆರವು ಗೊಳಿಸಿತ್ತು. ಸಹರನ್‍ಪುರದಲ್ಲಿ ಗಲಭೆಯ ಆರೋಪ ಹೊತ್ತಿರುವ ಇಬ್ಬರು ವ್ಯಕ್ತಿಗಳ ಅಕ್ರಮ ಆಸ್ತಿಗಳನ್ನು ಬುಲ್ಡೋಜರ್‍ನಲ್ಲಿ ತೆರವುಗೊಳಿಸಲಾಗಿತ್ತು. ಇಂತಹ ಸಂದಿಗ್ಧ ಕಾಲದಲ್ಲಿ ನ್ಯಾಯಾಂಗದ ಸ್ಥೈರ್ಯವನ್ನು ಪರೀಕ್ಷಿಸಲಾಗುತ್ತದೆ ಎಂದು ಪತ್ರದಲ್ಲಿ ಸುಪ್ರೀಂಕೋರ್ಟ್‍ಗೆ ತಿಳಿಸಲಾಗಿದೆ. ಇದನ್ನೂ ಓದಿ: ಕೋವಿಡ್‌ನಿಂದ ಹಳೆಯದೆಲ್ಲಾ ಮರೆತುಹೋಗಿದೆ ಎಂದ ದಿಲ್ಲಿ ಆರೋಗ್ಯ ಸಚಿವ – ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್