ಕಲಬುರಗಿ: ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ 31 ಮನೆಗಳನ್ನು, ಟಿನ್ ಶೆಡ್ ಒಳಗೊಂಡಂತೆ ತೆರವು ಕಾರ್ಯಾಚರಣೆ ಜಿಲ್ಲಾಡಳಿತವತಿಯಿಂದ ನಡೆದಿದೆ.
Advertisement
ನಗರದ ಜಾಫರಾಬಾದ್‍ನಲ್ಲಿರುವ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆಯೂ ಕಲಬುರಗಿ ಎಡಿಸಿ ಭೀಮಾಶಂಕರ್ ತೆಗ್ಗಳ್ಳಿ ನೇತೃತ್ವದಲ್ಲಿ ನಡೆಸಲಾಗಿದೆ. ಸರ್ವೇ ನಂಬರ್ 21/1,22 ಎಕರೆಯಲ್ಲಿ ಮೂರುವರೆ ಎಕರೆ ಅನಧಿಕೃತ ಒತ್ತುವರಿ ಮಾಡಲಾಗಿತ್ತು. ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಂತಹ 31 ಮನೆಗಳ 17 ಟಿನ್ ಶೆಡ್ ಸೇರಿದಂತೆ ಮನೆಗಳ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ತೆರವುಗೊಳಿಸಿದೆ. ಇದನ್ನೂ ಓದಿ: ಪಾಕಿಸ್ತಾನಿ ಎಲ್‍ಇಟಿ ಉಗ್ರ ಎನ್‍ಕೌಂಟರ್ – ಮೂವರು ಅರೆಸ್ಟ್
Advertisement
Advertisement
ಬೆಳಗ್ಗೆ ನಾಲ್ಕು ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಎರಡು ತಿಂಗಳು ಹಿಂದೆಯಷ್ಟೇ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಜಾರಿ ಮಾಡಿದರೂ, ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೂ ಮುನ್ನ ಪೊಲೀಸ್ ಬಂದೋಬಸ್ತ್ ಜೊತೆಗೆ ಮನೆಗಳ ತೆರವು ಕಾರ್ಯಾಚರಣೆ ನಡೆದಿದೆ.