– ಮುಟ್ಟಲು ಹೋದಾಗ ಮೇಲೆರಗಿ ಬಂದ ಹೋರಿ
ದಾವಣಗೆರೆ: ಹೊನ್ನಾಳ್ಳಿ ಕ್ಷೇತ್ರದ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತೊಮ್ಮೆ ಹೋರಿಯಿಂದ ತಪ್ಪಿಸಿಕೊಂಡಿದ್ದಾರೆ.
ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ಹೊನ್ನಾಳ್ಳಿಯಲ್ಲಿ ಹೋರಿ ಬೆದರಿಸುವ ಹಬ್ಬ ಆಯೋಜಿಸಲಾಗಿತ್ತು. ಹಬ್ಬಕ್ಕೆ ಸ್ಥಳೀಯ ಶಾಸಕರಾಗಿರುವ ರೇಣುಕಾಚಾರ್ಯರನ್ನು ಆಹ್ವಾನಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಗಳ ಬಳಿ ರೇಣುಕಾಚಾರ್ಯರರು ತೆರಳಿದ್ದರು. ರೇಣುಕಾಚಾರ್ಯರು ಹೋರಿಯನ್ನು ಮುಟ್ಟಲು ಹೋಗುತ್ತಿದ್ದಂತೆ ಅವರ ಮೇಲೆಯೇ ಎರಗಿ ಬಂದಿದೆ. ಹೋರಿ ಎರಗಿ ಬರುತ್ತಿದ್ದಂತೆ ಎಚ್ಚೆತ್ತ ಅಂಗರಕ್ಷಕರು ರೇಣುಕಾಚಾರ್ಯರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಬರೀ ಕೋಣ, ಎಮ್ಮೆ ಹತ್ರ ಗುದ್ದಿಸ್ಕೋ: ರೇಣುಕಾಚಾರ್ಯ ವಿರುದ್ಧ ಬಿಎಸ್‌ವೈ ಗರಂ
Advertisement
Advertisement
ಅಕ್ಟೋಬರ್ 31ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ರೇಣುಕಾಚಾರ್ಯರಿಗೆ ಹೋರಿಯೊಂದು ಡಿಚ್ಚಿ ಹೊಡೆದಿತ್ತು. ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಕಾರ್ಯಕ್ರಮವನ್ನು ದೊಡ್ಡೇರಿ ಗ್ರಾಮಸ್ಥರು ಆಯೋಜನೆ ಮಾಡಿದ್ದರು. ಇದಕ್ಕೆ ಮುಖ್ಯ ಅತಿಥಿಯಾಗಿ ಶಾಸಕ ರೇಣುಕಾಚಾರ್ಯ ಅವರನ್ನು ಕರೆಯಾಲಾಗಿತ್ತು. ಈ ಕಾರ್ಯಕ್ರಮಕ್ಕೆ ಹೋಗಿದ್ದ ರೇಣುಕಾಚಾರ್ಯ ಅವರಿಗೆ ಹೋರಿಯೊಂದು ವೇಗವಾಗಿ ಓಡಿಬಂದು ಡಿಚ್ಚಿ ಹೊಡೆದಿತ್ತು. ಇದನ್ನೂ ಓದಿ: ರೇಣುಕಾಚಾರ್ಯ ಕಚೇರಿಗೆ ಬಂದ್ರೆ ಹೆದರಿಕೆಯಾಗುತ್ತೆ – ಈಶ್ವರಪ್ಪ ಹಾಸ್ಯ ಚಟಾಕಿ
Advertisement
Advertisement
ತಮ್ಮ ನೆಚ್ಚಿನ ನಾಯಕ ಊರ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ರೇಣುಕಾಚಾರ್ಯ ಅವರ ಅಭಿಮಾನಿಗಳು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಿದ್ದರು. ಈ ಸಮಯದಲ್ಲಿ ಜನರ ಕಿರುಚಾಟಕ್ಕೆ ಹೆದರಿ ಓಡಿಬಂದ ಹೋರಿ ಶಾಸಕ ರೇಣುಕಾಚಾರ್ಯ ಅವರಿಗೆ ಗುದ್ದಿತ್ತು. ಹೋರಿ ಹೊಡೆದ ರಭಸಕ್ಕೆ ರೇಣುಕಾಚಾರ್ಯ ಅವರು ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿದೇ ಸಣ್ಣ ಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದರು. ಇದನ್ನೂ ಓದಿ: ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಡಿಚ್ಚಿ ಹೊಡೆದ ರಿಯಲ್ ಹೋರಿ