ತುಮಕೂರು: ಬಿಡಾಡಿ ಗೂಳಿಯೊಂದು ತುಮಕೂರು ನಾಗರೀಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ನಗರದ ಹನುಮಂತಪುರದಲ್ಲಿರುವ ಗೂಳಿ, ಕಂಡ ಕಂಡವರ ಮೇಲೆ ಮನಸೋ ಇಚ್ಛೆ ದಾಳಿ ನಡೆಸುತ್ತಿದೆ. ಈಗಾಗ್ಲೇ ಮೂರ್ನಾಲ್ಕು ಜನರನ್ನು ಗುದ್ದಿ ಗಾಯಗೊಳಿಸಿರುವ ಗೂಳಿ, ಹನುಂತಪುರದ ರೌಡಿ ಎಂದೇ ಖ್ಯಾತಿ ಗಳಿಸಿದೆ. ಗೂಳಿಯ ಹಾವಳಿ ತಪ್ಪಿಸಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಕೆಲಸಕ್ಕೆಂದು ಹೋಗುತ್ತಿದ್ದಾಗ ಎದುರಿಗೆ ಗೂಳಿ ಬಂದರೆ ರಸ್ತೆ ಬದಲಿಸಿ ಪ್ರಯಣಿಸಬೇಕಾಗಿದೆ. ಅಷ್ಟರ ಮಟ್ಟಿಗೆ ಈ ಗೂಳಿ ಹನುಮಂತಪುರ ನಾಗರೀಕರಿಗೆ ಉಪಟಳ ನೀಡಿದೆ.
ಇನ್ನು ಈ ಗೂಳಿಯ ಕಾಟದಿಂದ ಮಕ್ಕಳು ಸಂಜೆ, ಮುಂಜಾನೆ ವೇಳೆ ಆಟವಾಡುವುದನ್ನೇ ತೊರೆದಿದ್ದಾರೆ. ಶಾಲಾ ಮಕ್ಕಳ ವಾಹನವನ್ನು ಎತ್ತಿ ಬಿಸಾಡಲು ಪ್ರಯತ್ನಿಸಿತ್ತು ಈ ಗೂಳಿ. ಅಲ್ಲದೆ ಗೂಳಿಯ ತಿವಿತಕ್ಕೊಳಗಾದ ಶ್ರೀರಂಗ ಹಾಗೂ ನಾಗರಾಜ ದೀಕ್ಷಿತ ಎನ್ನುವವರು ಎರಡು ತಿಂಗಳ ಕಾಲ ಆಸ್ಪತ್ರೆಯಲಿದ್ದು ಚಿಕಿತ್ಸೆ ಪಡೆದಿದ್ದಾರೆ.
ಅಪ್ಪಿತಪ್ಪಿ ಯಾರಾದ್ರೂ ಗೂಳಿ ಹತ್ತಿರ ಹೊದ್ರೆ ಅವರ ಕಥೆ ಮುಗಿದಂತೆ. ಇಂತಹ ಪುಂಡ ಗೂಳಿಯನ್ನು ಪಾಲಿಕೆಯವರು ಹಿಡಿದರೆ ಹನುಮಂತಪುರ ನಾಗರೀಕರು ನೆಮ್ಮದಿಯಾಗಿ ಜೀವಿಸಬಹುದು ಗೂಳಿಯಿಂದ ಹಲ್ಲೆಗೊಳಗಾದವರು ವಿನಂತಿ ಮಾಡಿದ್ದಾರೆ.