ಮುಂಬೈ: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಐವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಪುಣೆಯ ಯೆರವಾಡ ಪ್ರದೇಶದಲ್ಲಿ ನಡೆದಿದೆ.
ಗುರುವಾರ ತಡರಾತ್ರಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪುಣೆಯ ಟ್ರಾಫಿಕ್ ಪೊಲೀಸ್ ಕಮಿಷನರ್ ರಾಹುಲ್ ಶ್ರೀರಾಮೆ ತಿಳಿಸಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ನಿಂದ ಕಾರು ಗ್ಯಾರೇಜ್ ಧಗಧಗ – 3 ಬೈಕ್, 2 ಕಾರು ಸುಟ್ಟು ಕರಕಲು
ಕಟ್ಟಡ ಮಾಲ್ಗಾಗಿ ನಿರ್ಮಾಣವಾಗುತ್ತಿದ್ದು, ಅದರ ನೆಲಮಾಳಿಗೆಯ ಪಾರ್ಕಿಂಗ್ ಮಹಡಿಯಲ್ಲಿ ಚಪ್ಪಡಿಗಳನ್ನು ಹಾಕಲು ಕಬ್ಬಿಣದ ಸರಳುಗಳನ್ನು ತರಿಸಲಾಗಿತ್ತು. 16 ಎಂಎಂ ಗಾತ್ರದ ಸರಳುಗಳು ಕುಸಿತದ ಸಂದರ್ಭದಲ್ಲಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರ ಮೇಲೆ ಬಿದ್ದಿದೆ. ಇದನ್ನೂ ಓದಿ: ಮನೆಯ ಮೇಲೆ ಲ್ಯಾಂಡಿಂಗ್ – ಅಮೆರಿಕ ಸೇನೆಗೆ ಹೆದರಿ ಐಸಿಸ್ ಮುಖ್ಯಸ್ಥ ಆತ್ಮಾಹುತಿ
ಅಪಘಾತದ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಕಾರ್ಮಿಕರ ದೇಹಕ್ಕೆ ಚುಚ್ಚಿದ್ದ ಕಬ್ಬಿಣದ ಸರಳುಗಳನ್ನು ಕಟರ್ ಸಹಾಯದಿಂದ ತೆಗೆಯಲಾಗಿದೆ. ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪದ್ದಾರೆ ಎಂದು ಶ್ರೀರಾಮೆ ತಿಳಿಸಿದರು.