ಧಾರವಾಡ: ಜಿಲ್ಲೆಯಲ್ಲಿ ನಡೆದ ಕಟ್ಟಡ ಕುಸಿತಕ್ಕೆ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಗುರುವಾರ ರಾತ್ರಿಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, 4ನೇ ದಿನಕ್ಕೆ ಕಾಲಿಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಬಿಲ್ಡಿಂಗ್ ನ ನಾಲ್ವರು ಪಾಲುದಾರರಾದ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾವ ಗಂಗಪ್ಪ ಶಿತ್ರೆ, ರವಿ ಸಬರದ, ಬಸವರಾಜ್ ನಿಗದಿ, ರಾಜುಘಾಟಿನ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಇದನ್ನೂ ಓದಿ: ಧಾರವಾಡ ದುರಂತ – ಮಾಜಿ ಸಚಿವ ವಿನಯ್ ಕುಲಕರ್ಣಿ ಮಾವ ಅರೆಸ್ಟ್
Advertisement
Advertisement
ಬಳಿಕ ಮಾತನಾಡಿದ ಬಂಧಿತ ಆರೋಪಿ ಬಸವರಾಜ್ ನಿಗದಿ, ನಮ್ಮನ್ನು ಯಾರೂ ಅರೆಸ್ಟ್ ಮಾಡಿಲ್ಲ. ಸಾವು- ನೋವುಗಳನ್ನು ನೋಡಿ ನಮಗೂ ಬೇಸರವಾಗಿದೆ. ಹೀಗಾಗಿ ನಾವೇ ಸರೆಂಡರ್ ಆಗಿದ್ದೇವೆ. ನಾವೇನು ಟೆಕ್ನಿಷಿಯನ್ ಅಲ್ಲ. ಎಂಜಿನಿಯರ್ ತಪ್ಪಿನಿಂದ ಈ ಅಚಾತುರ್ಯ ಆಗಿದೆ ಅಂದ್ರು. ಇದನ್ನೂ ಓದಿ: ಘಟನೆ ನಡೆದ ದಿನವೇ ಯಾಕೆ ಬರಲಿಲ್ಲ ಅಂತ ನನಗೆ ಈಗ ನೋವಾಗಿದೆ: ಸಿಎಂ ಎಚ್‍ಡಿಕೆ
Advertisement
ಇದನ್ನು ಗಮನಿಸಿದ್ರೆ ಪೊಲೀಸರು ಸುಳ್ಳು ಹೇಳಿದ್ರಾ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಆರೋಪಿಗಳ ಪತ್ತೆಗೆ 6 ತಂಡ ರಚಿಸಿ ಮುಂಬೈ, ಗೋವಾಗೆ ಕಳುಹಿಸಿದ್ದೇವೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ನಾಗರಾಜ್ ಹೇಳಿದ್ದರು.
Advertisement