ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಇದೀಗ ಅವಶೇಷಗಳಡಿ ಸಿಲುಕಿದ್ದ ದಂಪತಿಯನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.
ಸಾವು ಗೆದ್ದು ಹೊರಬರುತ್ತಿದ್ದಂತೆಯೇ ಪತಿ ದಿಲೀಪ್ ಎಲ್ಲರಿಗೂ ಕೈಮುಗಿಯುತ್ತಾ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ನೆರೆದಿದ್ದವರು ಚಪ್ಪಾಳೆ ತಟ್ಟಿದ್ದಾರೆ. ಪತಿ ದಿಲೀಪ್ ಜೊತೆ ಪತ್ನಿ ಸಂಗೀತಾ ಕೂಡ ಬದುಕುಳಿದಿದ್ದಾರೆ. ಅವಶೇಷಗಳಡಿ ಸಿಲುಕಿದ್ದಾಗ ಸ್ವತಃ ತಾನೇ ಒಳಗೆ ರಾಡ್ ಕಟ್ ಮಾಡಿ ಹೊರ ಬರಲು ಪ್ರಯತ್ನಿಸಿರುವುದಾಗಿ ದಿಲೀಪ್ ಮಾಹಿತಿ ನೀಡಿದ್ದಾರೆ.
Advertisement
Advertisement
ಸಿಬ್ಬಂದಿ ದುರಂತ ನಡೆದ ದಿನದಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂದೂ ಕೂಡ ಮುಂದುವರಿಸಿದ ಸಂದರ್ಭದಲ್ಲಿ ಸಿಬ್ಬಂದಿಗೆ ಕಟ್ಟಡ ಕುಸಿದ ಜಾಗದಲ್ಲಿ ಒಳಗಡೆ ದಂಪತಿ ಸಿಲುಕಿರುವುದು ತಿಳಿದುಬಂದಿದೆ. ಕಳೆದ 4 ದಿನಗಳಿಂದ ಅನ್ನ, ನೀರು ಇಲ್ಲದೆ ಪರದಾಡುತ್ತಿದ್ದ ದಂಪತಿಗೆ ಸಣ್ಣ ಪೈಪ್ ಕಳುಹಿಸಿ ಅದರ ಮೂಲಕ ಅವರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು.
Advertisement
ದೀಲಿಪ್ ಹಾಗೂ ಸಂಗೀತಾ ಧಾರವಾಡ ತಾಲೂಕಿನ ಟಿ ಆರ್ ನಗರದವರಾಗಿದ್ದಾರೆ. ಸದ್ಯ ದಂಪತಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಧಾರವಾಡ ದುರಂತ: 4 ದಿನಗಳ ಬಳಿಕ ಬದುಕಿಬಂದ ಯುವಕ – ಸಾವಿನ ಸಂಖ್ಯೆ 15ಕ್ಕೆ ಏರಿಕೆ
Advertisement
ಈ ಮೊದಲು ಸಿಬ್ಬಂದಿ ಸಂಗನಗೌಡ ರಾಮನಗೌಡ (24) ಅವರನ್ನು ರಕ್ಷಿಸಿದ್ದರು. ರಾಮನಗೌಡ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಉಳಿಗೇರಿ ನಿವಾಸಿಯಾಗಿರುವ ಸಂಗನಗೌಡ ಅವರು ಜೆಡಿಎಸ್ ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.
ಕಟ್ಟಡ ಕೆಳಗೆ ಊಟ ನೀರು ಇಲ್ಲದೆ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಬಳಿಕ ಸ್ಥಳದಿಂದ ನಡೆದುಕೊಂಡು ಹೋಗಿದ್ದಾರೆ. ಸದ್ಯ ಅವರಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಕಟ್ಟದ ಕೆಳಗೆ ಸಿಲುಕಿದ ದಿನದಿಂದ ನೀರು, ಅನ್ನ ಇಲ್ಲದೆ ಮಲಗಿದ್ದಲ್ಲೇ ಮಲಗಿದ್ದೆ. ಬದುಕಿ ಬರುತ್ತೇನೆ ಎಂಬ ಆಸೆ ಇರಲಿಲ್ಲ. ಆದರೆ ಈಗ ಮರು ಜನ್ಮ ಪಡೆದಿದ್ದೇನೆ. ನನ್ನ ಜೊತೆಗೆ ಇಬ್ಬರು ಇದ್ದರು, ಎರಡು ದಿನ ನನ್ನ ಜೊತೆಗೆ ಮಾತನಾಡುತ್ತಿದ್ದರು. ಆದರೆ ಮತ್ತೆ ಅವರ ಧ್ವನಿ ಕೇಳಿಸಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಎನ್‍ಡಿಆರ್ ಎಫ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಘಟನೆ ನಡೆದ ದಿನವೇ ಯಾಕೆ ಬರಲಿಲ್ಲ ಅಂತ ನನಗೆ ಈಗ ನೋವಾಗಿದೆ: ಸಿಎಂ ಎಚ್‍ಡಿಕೆ