ಬೆಂಗಳೂರು: ಇದ್ದಕ್ಕಿಂದಂತೆ ಮನೆ ಕುಸಿದಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‍ನಲ್ಲಿ ನಡೆದಿದೆ. ಇದನ್ನೂ ಓದಿ: ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ
Advertisement
ಈ ಕಟ್ಟಡ ಮಾಲೀಕ ಸುರೇಶ್‍ರವರಿಗೆ ಸೇರಿದ್ದಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಮನೆ ಬಾಗಿತ್ತು. ಅಲ್ಲದೇ ಎರಡು ವಾರದ ಹಿಂದೆ ಕಟ್ಟದಲ್ಲಿ ವಾಸವಾಗಿದ್ದ ಎಲ್ಲರನ್ನು ಖಾಲಿ ಮಾಡಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಮನೆ ವಾಲುವುದಕ್ಕೆ ಪ್ರಾರಂಭವಾಗಿದೆ. ವಿಚಾರ ತಿಳಿದು ಸ್ಥಳೀಯ ನಿವಾಸಿಗಳು ಕೂಡಲೇ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಮನೆ ಕುಸಿದು ಬಿದ್ದಿದೆ.
Advertisement
Advertisement
ಈ ಕಟ್ಟಡದಲ್ಲಿ ಸುಮಾರು 70 ಮಂದಿ ವಾಸವಾಗಿದ್ದು, ಎಲ್ಲರೂ ಮೆಟ್ರೋ ಕಾಮಗಾರಿ ಮಾಡುವ ಕಾರ್ಮಿಕರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ನಗರದ ವಿಲ್ಸನ್ ಗಾರ್ಡನ್‍ನ ಲಕ್ಕ ಸಂದ್ರದ 14ನೇ ಕ್ರಾಸ್ ಬಳಿ ನಡೆದಿದೆ. ಇದನ್ನೂ ಓದಿ: ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ
Advertisement
ಸದ್ಯ ಸ್ಥಳಕ್ಕೆ ಬಿಬಿಎಂಪಿ ಜಂಟಿ ಆಯುಕ್ತ ವೀರಭದ್ರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಬಿಲ್ಡಿಂಗ್ ಗೆ ಎಲ್ಲೂ ಡ್ಯಾಮೇಜ್ ಆಗಿಲ್ಲ. ಇದು ಕೇವಲ ಹಳೇ ಬಿಲ್ಡಿಂಗ್ ಎಂದು ರಿಪೋರ್ಟ್‍ನಲ್ಲಿ ತಿಳಿಸಿರುವುದಾಗಿ ಹೇಳಿದ್ದಾರೆ.