ರಾಯಚೂರು: ದೀಪಾವಳಿ ಹಿನ್ನಲೆಯಲ್ಲಿ ರಾಯಚೂರಿನ ಬಂಗೀಕುಂಟದಲ್ಲಿ ಗೌಳಿ ಸಮಾಜದವರು ಏರ್ಪಡಿಸಿದ್ದ ಎಮ್ಮೆಗಳ ಓಟದ ಸ್ಪರ್ಧೆ ಮೈ ಝುಮ್ಮೆನಿಸುವಂತಿತ್ತು.
ಉದ್ದನೆಯ ಕೋಡುಗಳ ಬಲಿಷ್ಠ ಎಮ್ಮೆಗಳ ಓಟದ ಸ್ಪರ್ಧೆ ನೋಡುಗರನ್ನ ರೋಮಾಂಚನಗೊಳಿಸಿತು. ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ಎಮ್ಮೆಗಳು ಭಾಗವಹಿಸಿದ್ದವು. ಕಿರಿದಾದ ರಸ್ತೆಯಲ್ಲಿ ಒಂದೇ ಬಾರಿಗೆ ಎಲ್ಲಾ ಎಮ್ಮೆಗಳನ್ನ ಓಡಿಸಿ, ಆಯಾ ಎಮ್ಮೆ ಗಳ ಮಾಲೀಕರು ಸಹ ಓಡಿ ಸಂಭ್ರಮಿಸುತ್ತಾರೆ.
Advertisement
ಎಮ್ಮೆಗಳನ್ನ ಸುಂದರವಾಗಿ ಅಲಂಕಾರ ಮಾಡಿ, ಬಣ್ಣಗಳಿಂದ ಕಂಗೊಳಿಸುವಂತೆ ಮಾಡಿರುತ್ತಾರೆ. ಪ್ರತೀವರ್ಷ ಇಲ್ಲಿನ ಬಂಗೀಕುಂಟ ಹಾಗೂ ಕಿಲ್ಲೆ ಬೃಹನ್ ಮಠದ ಬಳಿ ಓಟದ ಸ್ಪರ್ಧೆಗಳು ನಡೆಯುತ್ತವೆ. ನೋಡಲು ತುಂಬಾ ಅಪಾಯಕಾರಿಯಾಗಿ ಕಂಡರೂ ಸ್ಪರ್ಧೆಯಲ್ಲಿ ಇದೂವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.