ಚಂಡೀಗಢ: ಎಮ್ಮೆ ದಿನಕ್ಕೆ 10 ರಿಂದ 16 ಲೀಟರ್ ಹಾಲು ಕೊಡುವುದನ್ನು ನಾವು ಕೇಳಿದ್ದೇವೆ. ಆದರೆ ಮುರ್ರಾ ತಳಿಯ (Murrah breed) ಎಮ್ಮೆಯೊಂದು ಬರೋಬ್ಬರಿ 33.8 ಲೀಟರ್ ಹಾಲು ಕೊಡುವ ಮೂಲಕವಾಗಿ ಸುದ್ದಿಯಾಗಿದೆ.
ಹರಿಯಾಣದಲ್ಲಿ ಕೈತಾಲ್‍ನ ಬುಧಖೇಡ ನಿವಾಸಿ ನರೇಶ್ ಅವರು ಮುರ್ರಾ ತಳಿಯ ಎಮ್ಮೆಯನ್ನು ಸಾಕಿದ್ದಾರೆ. ಈ ಎಮ್ಮೆ 33.8 ಲೀಟರ್ ಹಾಲು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದೆ. ದೇಶದ ಯಾವುದೇ ಎಮ್ಮೆ ಈ ಎಮ್ಮೆಯಷ್ಟು ಹಾಲು ನೀಡುವುದಿಲ್ಲ. ಹೀಗಾಗಿ ಈ ಎಮ್ಮೆಗೆ ಭಾರೀ ಬೇಡಿಕೆ ಇದೆ.
Advertisement
Advertisement
ಮುರ್ರಾ ತಳಿಯ ಎಮ್ಮೆ 33.8 ಲೀಟರ್ ಹಾಲು ಕೊಡುತ್ತದೆ. ಮೊದಲು ಎಮ್ಮೆ ಮರಿ ಜನಿಸಿದಾಗ 19-20 ಲೀಟರ್ ಹಾಲು ನೀಡುತ್ತಿತ್ತು. ಎರಡನೇ ಬಾರಿ 30 ಲೀಟರ್ ಹಾಗೂ ಈಗ ಮೂರನೇ ಬಾರಿ 33.8 ಲೀಟರ್ ಹಾಲು ನೀಡುತ್ತಿದೆ. 24 ಗಂಟೆಗಳಲ್ಲಿ 33.8 ಲೀಟರ್ ಹಾಲು ನೀಡುವ ಮೂಲಕ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಿಂದ ಹೊಸ ದಾಖಲೆ ನಿರ್ಮಿಸಿದೆ. ಇದು ಭಾರತದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ಎಮ್ಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಎಂದು ಎಮ್ಮೆ ಮಾಲೀಕ ನರೇಶ್ ಅವರು ಹೇಳಿದ್ದಾರೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ
Advertisement
Advertisement
ಮುರ್ರಾ ಎಮ್ಮೆಗಳು ಕರು ಹಾಕಿದ ಎಂಟು ತಿಂಗಳುಗಳವರೆಗೆ ಹಾಲು ಕೊಡುತ್ತವೆ. ಎಮ್ಮೆಗೆ ಕಡಲೆ ಚಿನ್ನಿ, ಶೇಂಗಾ ಹಿಂಡಿ, ಗೋಧಿ ತೌಡು ಮಿಶ್ರಿತ ಆಹಾರವನ್ನು ರಾತ್ರಿ ವೇಳೆಯಲ್ಲಿ ನನೆಯಲು ಇಟ್ಟು ಬೆಳಗ್ಗೆ ತಿನ್ನಲು ಕೊಡುತ್ತೇವೆ. ಹಸಿ ಮೇವು ಹಾಗೂ ಒಣ ಮೇವು ಮಿಶ್ರಣ ಮಾಡಿದ ಮೇವು ಹಾಕಲಾಗುತ್ತದೆ ಎಂದಿದ್ದಾರೆ.
ಈ ಎಮ್ಮೆಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‍ಡಿಬಿಬಿ) 33.8 ಲೀಟರ್ ಹಾಲು ನೀಡುವ ದಾಖಲೆಯ ಪ್ರಮಾಣ ಪತ್ರದೊಂದಿಗೆ ಸುಧಾರಿತ ತಳಿ ಸ್ಥಾನಮಾನವನ್ನು ನೀಡಿದೆ. ಅಧಿಕಾರಿಗಳು ಅದರ ಹಾಲಿನ ಕೊಬ್ಬಿನ ಗುಣಮಟ್ಟವನ್ನು 10 ರಲ್ಲಿ 9.31 ಎಂದು ಹೇಳಿದ್ದಾರೆ. ಹೀಗಾಗಿ ಈ ತಳಿಯ ಪೋಷಣೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕ್ಷೇತ್ರದಲ್ಲಿ ಡೈರಿ ರೈತರ ಸಂಘ ಆಯೋಜಿಸಿದ್ದ 3ನೇ ಡಿಎಫ್‍ಎ ಇಂಟರ್‍ನ್ಯಾಶನಲ್ ಡೈರಿ ಮತ್ತು ಅಗ್ರಿ ಎಕ್ಸ್‌ಪೋ ಮಿಲ್ಕಿಂಗ್ ಶಿಬಿರದಲ್ಲಿ ಎಮ್ಮೆ ಮಾಲೀಕರನ್ನು ಸನ್ಮಾನಿಸಿದ್ದಾರೆ. ಈ ಎಮ್ಮೆ ದೇಶಾದ್ಯಂತ ಖ್ಯಾತಿಯನ್ನು ಪಡೆದಿದೆ. ಕೋಟಿ ರೂಪಾಯಿ ಕೊಡುತ್ತೆವೆ ಎಂದರು ಎಮ್ಮೆ ಮಾರಾಟ ಮಾಡುವುದಿಲ್ಲ ಎಂದು ಹೇಳುತ್ತಾರೆ.