ದ್ರೌಪದಿ ಮುರ್ಮುಗೆ Poor Lady ಎಂದ ಸೋನಿಯಾ – ಮುಗಿಬಿದ್ದ ಬಿಜೆಪಿ ನಾಯಕರು

Public TV
2 Min Read
SONIA GANDHI

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ (Sonia Gandhi) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಬಗ್ಗೆ ಮಾತನಾಡಿದ ಒಂದು ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಬಜೆಟ್‌ ಅಧಿವೇಶನದ (Union Budget Session) ಮುನ್ನ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರಪತಿಗಳ ಭಾಷಣ ಮುಕ್ತಾಯದ ಬಳಿಕ ಸಂಸತ್‌ ಹೊರಗಡೆ ಬಂದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಮಾಧ್ಯಮಗಳು ಮಾತನಾಡಿಸಿವೆ. ಇದನ್ನೂ ಓದಿ: Economic Survey 2025| ಜಿಡಿಪಿ 6.3-6.8% ನಿರೀಕ್ಷೆ – ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ? ಯಾವ ವಲಯದ ಸಾಧನೆ ಎಷ್ಟಿದೆ?

ಈ ವೇಳೆ ಸೋನಿಯಾ ಗಾಂಧಿ, Poor Lady, ಭಾಷಣ ಮುಗಿಸುವ ಹೊತ್ತಿಗೆ ರಾಷ್ಟ್ರಪತಿಗಳು ಸುಸ್ತಾಗಿ ಹೋಗಿದ್ದರು. ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಭಾಷಣ ತುಂಬಾ ಬೋರ್‌ ಆಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಸೋನಿಯಾ ಗಾಂಧಿ ದ್ರೌಪತಿ ಮುರ್ಮು ಅವರನ್ನು Poor Lady ಎಂದು ಕರೆದಿದ್ದಕ್ಕೆ ಬಿಜೆಪಿ (BJP) ನಾಯಕರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದಾರೆ. ಬುಡಕಟ್ಟು ಮಹಿಳೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದನ್ನು ಸಹಿಸಲು ಕಾಂಗ್ರೆಸ್‌ಗೆ ಆಗುತ್ತಿಲ್ಲ. ಕೂಡಲೇ ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

Share This Article