ನವದೆಹಲಿ: ಜ.31ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮೊದಲೆರಡು ದಿನ ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನ ಕಲಾಪಗಳಲ್ಲಿ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರ ಅವಧಿ ಇರುವುದಿಲ್ಲ ಎಂದು ಸಂಸತ್ ಬುಲೆಟಿನ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
Advertisement
ಮೊದಲ ದಿನ ಬಜೆಟ್ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಫೆ.1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡು ದಿನಗಳು ಉಭಯ ಸದನಗಳಿಗೆ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರ ಅವಧಿ ಇರುವುದಿಲ್ಲ ಎಂದು ಬುಲೆಟಿನ್ ತಿಳಿಸಿದೆ. ಇದನ್ನೂ ಓದಿ: ಪೆಗಾಸಸ್ ಖರೀದಿಸಿ ಮೋದಿ ಸರ್ಕಾರ ದೇಶದ್ರೋಹ ಮಾಡಿದೆ: ರಾಹುಲ್ ಗಾಂಧಿ
Advertisement
ಸದಸ್ಯರಿಂದ ಸಾರ್ವಜನಿಕ ತುರ್ತು ಪ್ರಶ್ನೆಗಳು ಇದ್ದಲ್ಲಿ ಅವುಗಳನ್ನು ಫೆ.2ರಂದು ನಡೆಯಲಿರುವ ಕಲಾಪಕ್ಕೆ ಪರಿಗಣಿಸಲಾಗುತ್ತದೆ. ಈ ಸಂಬಂಧ ಫೆ.1ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯೊಳಗೆ ಆನ್‌ಲೈನ್ ಇ-ಪೋರ್ಟಲ್ ಅಥವಾ ನೇರವಾಗಿ ಸಂಸತ್ ನೋಟಿಸ್ ಕಚೇರಿಗೆ ತಿಳಿಸಬೇಕೆಂದು ಸೂಚಿಸಲಾಗಿದೆ.
Advertisement
Advertisement
ಸಂಸತ್ ನಿಯಮದ ಪ್ರಕಾರ, ಲೋಕಸಭೆ ಅಧಿವೇಶನದಲ್ಲಿ ಪ್ರತಿದಿನ 60 ನಿಮಿಷ ಪ್ರಶ್ನಾವಳಿ ಹಾಗೂ ಶೂನ್ಯ ಅವಧಿ ಇರುತ್ತದೆ. ರಾಜ್ಯಸಭೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಶೂನ್ಯ ವೇಳೆ ಆರಂಭವಾದರೆ ಮಧ್ಯಾಹ್ನಕ್ಕೆ ಪ್ರಶ್ನೋತ್ತರ ಸಮಯ ಇರುತ್ತದೆ. ಇದನ್ನೂ ಓದಿ: ಮತ ಎಣಿಕೆಯವರೆಗೆ ಮಾತ್ರ ಸಮಾಜವಾದಿ, ರಾಷ್ಟ್ರೀಯ ಲೋಕದಳದ ಮೈತ್ರಿ: ಅಮಿತ್ ಶಾ