Connect with us

ಬಜೆಟ್ ಅಧಿವೇಶನಕ್ಕಿಂದು ತೆರೆ – ಕಲಾಪಕ್ಕೆ ಬರಲು ಕೈ ಶಾಸಕರಿಗೂ ವಿಪ್

ಬಜೆಟ್ ಅಧಿವೇಶನಕ್ಕಿಂದು ತೆರೆ – ಕಲಾಪಕ್ಕೆ ಬರಲು ಕೈ ಶಾಸಕರಿಗೂ ವಿಪ್

– ರೈತರ ಸಾಲಮನ್ನಾಗೆ ಸಿಎಂ ಕೊಡ್ತಾರ ಸಮಯ

ಬೆಂಗಳೂರು: ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿದ್ದಾರೆ.

ಒಂಭತ್ತು ದಿನಗಳ ಅಧಿವೇಶನದಲ್ಲಿ ಬಜೆಟ್ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಇಂದು ಕಲಾಪ ಆರಂಭವಾಗುತ್ತಿದಂತೆ ಚರ್ಚೆಗೆ ಸಿಎಂ ಸಿದ್ಧರಾಮಯ್ಯ ಉತ್ತರಿಸಲಿದ್ದಾರೆ. ಬಳಿಕ ಧನವಿನಿಯೋಗವನ್ನ ಮತಕ್ಕೆ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ಬಜೆಟ್‍ಗೆ ಅಂಗೀಕಾರ ಪಡೆಯಲಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಎಲ್ಲಾ ಕೈ ಶಾಸಕರು ಇಂದು ಸದನದಲ್ಲಿ ಕಡ್ಡಾಯವಾಗಿ ಇರುವಂತೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ವಿಪ್ ಜಾರಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕುತೂಹಲ ಮೂಡಿಸಿದ್ದು, ಸಹಕಾರಿ ಬ್ಯಾಂಕುಗಳಲ್ಲಿ ಬಡ್ಡಿ ಮನ್ನಾ ಸಹಿತ ರೈತರ ಸಾಲ ಮರುಪಾವತಿಗೆ ಅವಧಿ ವಿಸ್ತರಿಸಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ವಿಧಾನಪರಿಷತ್ ಕಲಾಪ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು ಮೊದಲು ಪ್ರಶ್ನೋತ್ತರ ಅವಧಿ ನಡೆಯಲಿದೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಉತ್ತರ ನೀಡಿದ ಬಳಿಕ ಮಧ್ಯಾಹ್ನದ ನಂತ್ರ ವಿಧಾನ ಪರಿಷತ್ ನಲ್ಲಿ ಸಿಎಂ ಉತ್ತರ ನೀಡಿಲಿದ್ದಾರೆ. ಉತ್ತರದ ಬಳಿಕ ಬಜೆಟ್ ಗೆ ಅನುಮೋದನೆ ಸಿಗಲಿದೆ.

Advertisement
Advertisement