ನವದೆಹಲಿ: ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ (Central Budget Session) ಆರಂಭವಾದ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಜಂಟಿ ಅಧಿವೇಶನ ಉದ್ದೇಶಿಸಿ ಮೊದಲ ಬಾರಿಗೆ ಮಾತನಾಡಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಎರಡು ಅವಧಿಯ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದರು.
About 11 crore families have been connected with piped water supply in three years under the Jal Jeevan Mission. Poor families are getting the maximum benefit from this: President Murmu to the joint sitting of Parliament pic.twitter.com/afMopApsvV
— ANI (@ANI) January 31, 2023
Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಹಿಡಿದು ತ್ರಿವಳಿ ತಲಾಖ್ (Talaq) ರದ್ದುಗೊಳಿಸುವವರೆಗೆ, ನನ್ನ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಮ್ಮ ಸರ್ಕಾರ ಭಯೋತ್ಪಾದನೆಯನ್ನು ಹತ್ತಿಕ್ಕಿದೆ, ಎಲ್‍ಒಸಿ ಮತ್ತು ಎಲ್‍ಎಸಿಯಲ್ಲಿ ಸೂಕ್ತ ಪ್ರತಿಕ್ರಿಯೆಯನ್ನು ನೀಡಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು.
Advertisement
My government has worked for every section of society without any discrimination. As a result of the efforts of my government in the last few years, many basic facilities have either reached 100% population or are very close to that target: President Murmu pic.twitter.com/MP6qp0R7kW
— ANI (@ANI) January 31, 2023
Advertisement
ಬಡತನದ ವಿಷಯದ ಕುರಿತು ಮಾತನಾಡಿದ ರಾಷ್ಟ್ರಪತಿ ಮುರ್ಮು, ‘ಗರೀಬೋ ಹಠಾವೋ’ ಇನ್ನು ಮುಂದೆ ಘೋಷಣೆಯಲ್ಲ, ನನ್ನ ಸರ್ಕಾರ ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮತ್ತು ಅವರನ್ನು ಸಬಲೀಕರಣಗೊಳಿಸಲು ಕೆಲಸ ಮಾಡುತ್ತಿದೆ. ಸೂಪರ್ ಸ್ಪೀಡ್ ಸ್ಕಿಲ್ ವರ್ಕ್, ಹೊಸ ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡುವ ಸರ್ಕಾರ ಸಿಕ್ಕಿದೆ. ಎರಡು ಬಾರಿ ಸ್ಥಿರ ಸರ್ಕಾರ ಆಯ್ಕೆ ಮಾಡಿದ ಜನರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.
Advertisement
Wherever there is political instability anywhere in the world, those countries are surrounded by a massive crisis. But due to the decisions my govt took in the national interest, India is in a better position as compared to other countries: President Draupadi Murmu pic.twitter.com/UlpcZXqC2m
— ANI (@ANI) January 31, 2023
ಭ್ರಷ್ಟಾಚಾರವು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ದೊಡ್ಡ ಶತ್ರು, ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಆಸ್ತಿಯನ್ನು ವಶಪಡಿಸಿಕೊಳ್ಳಲು ನನ್ನ ಸರ್ಕಾರವು ಪ್ಯುಗಿಟಿವ್ ಆರ್ಥಿಕ ಅಪರಾಧಿಗಳ ಕಾಯಿದೆಯನ್ನು ಜಾರಿಗೆ ತಂದಿದೆ. ಬೇನಾಮಿ ಆಸ್ತಿಗಳನ್ನು ಗುರುತಿಸಿ ವಶಪಡಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ ಬಲಿಯಾಗಿದ್ದಾರೆ: ರೇಣುಕಾಚಾರ್ಯ
The benefit of a stable and decisive govt is being reaped by us against the biggest crisis in 100 years and in tackling the situation that arose after it: President Droupadi Murmu to the joint session of Parliament as #BudgetSession commences pic.twitter.com/Y9F9xVTI0j
— ANI (@ANI) January 31, 2023
ಈ ಮೊದಲು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ವಿಶ್ವದ ನೆರವು ಕೇಳುತ್ತಿತ್ತು, ಈಗ ಜಾಗತಿಕ ಸಮಸ್ಯೆಗಳ ಇತ್ಯರ್ಥಕ್ಕೆ ವಿಶ್ವ ಭಾರತದತ್ತ ನೋಡುತ್ತಿದೆ. ದೇಶದಲ್ಲಿ ಮೂಲಸೌಕರ್ಯಗಳು ಹೆಚ್ಚುತ್ತಿದೆ. ಬಸವೇಶ್ವರರ ಕಾಯಕವೇ ಕೈಲಾಸ ಮಾತಿನಂತೆ ನನ್ನ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅಭಿನಂದಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k