ಬೆಂಗಳೂರು: ರಾಗಿ ಖರೀದಿ ಸಮಸ್ಯೆ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು ಎಂದು ಆಗ್ರಹಿಸಿ ಕುಣಿಗಲ್ ಶಾಸಕ ರಂಗನಾಥ್ ಅವರು ವಿಧಾನ ಸಭೆಗೆ ರಾಗಿಯನ್ನೇ ತಂದಿದ್ದರು.
ಈ ಕುರಿತು ವಿಧಾನ ಸಭೆಯಲ್ಲಿ ಮಾತನಾಡಿದ ಅವರು, ರಾಗಿ ಸಮಸ್ಯೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ರಂಗನಾಥ್ ಅವರು ರಾಗಿ ಎಂಬ ಭಿತ್ತಿಪತ್ರ ತೋರಿಸಿದರು. ಬಳಿಕ ಕವರ್‌ನಲ್ಲಿ ಇದ್ದ ರಾಗಿಯನ್ನು ಹೊರ ತೆಗೆದು ಕೈಯಲ್ಲಿ ಹಿಡಿದು ರಾಗಿ ರಾಗಿ ಎಂದು ಕೂಗಿ ಪ್ರತಿಭಟಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ: ಡಿಕೆಶಿ
Advertisement
Advertisement
ಈ ವೇಳೆ ಸಿಎಂ ಬಂದ ಬಳಿಕ ಮಾತುಕತೆ ನಡೆಸುತ್ತೇನೆ. ನಂತರ ರಾಗಿ ಖರೀದಿ ಸಮಸ್ಯೆ ಬಗ್ಗೆ ಸ್ಪಷ್ಟವಾದ ಉತ್ತರ ಕೊಡಿಸುತ್ತೇನೆ ಎಂದು ಸ್ಪೀಕರ್ ಭರವಸೆ ನೀಡಿದ ಬಳಿಕ ಧರಣಿ ವಾಪಸ್ ಪಡೆದರು. ಇದನ್ನೂ ಓದಿ: ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಮುಂದಾಗಿ: ಮಂಜಮ್ಮ ಜೋಗತಿ
Advertisement
Advertisement
ಇನ್ನೊಂದೆಡೆ ವಿಧಾನಸಭೆಯ ಮೊಗಸಾಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇಬ್ರಾಹಿಂ ಮುಖಾಮುಖಿಯಾಗಿದ್ದರು. ಈ ವೇಳೆ ಸಿದ್ಧರಾಮಯ್ಯ, ಇಬ್ರಾಹಿಂ ನೋಡಿ ಹಾಸ್ಯ ರೂಪದಲ್ಲಿ ಕಿಚಾಯಿಸಿದ್ದಾರೆ. ಏನ್ ಈ ಕಡೆ ಬಂದಿದ್ದೀಯಾ. ಗುಟುರು ಹಾಕುತ್ತಾ ಇದ್ದೀಯಾ ಅಂತಾ ಇಬ್ರಾಹಿಂ ಕಾಲೆಳೆದರು. ಅಲ್ಲಿ ಏನು ಇರಲಿಲ್ಲ. ಅದಕ್ಕೆ ಈ ಕಡೆ ಬಂದೆ ಎಂದು ಇಬ್ರಾಹಿಂ ಹೇಳಿದರು. ಓಹೋ ಅಲ್ಲಿ ಏನೂ ಇಲ್ಲವಾ ಎಂದು ಸಿದ್ದರಾಮಯ್ಯ ನಕ್ಕು ಹೊರನಡೆದರು.