ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ರಸ್ತೆಗಳು ಸಂಚಾರ ಮಾಡಲು ಯೋಗ್ಯ ಅಲ್ಲ ಎಂದು ಮಹಾಲೇಖಪಾಲರ(ಸಿಎಜಿ) ವರದಿ ತಿಳಿಸಿದೆ.
ವಿಧಾನಸಭೆಯಲ್ಲಿ ಇವತ್ತು ರಸ್ತೆ ಸುರಕ್ಷತಾ ವಿಚಾರಗಳಿಗೆ ಸಂಬಂಧಿಸಿದ ಸಿಎಜಿ ವರದಿ ಮಂಡನೆ ಮಾಡಲಾಯಿತು. ಕೆಟ್ಟ ದುರಸ್ಥಿಗಳು ಮತ್ತು ರಸ್ತೆಯಲ್ಲಿನ ಅಪಾಯದ ಗುಂಡಿಗಳು ರಸ್ತೆ ಅಪಘಾತಗಳಿಗೆ ಕಾರಣವಾಗಿವೆ ಎಂದು ಸಿಎಜಿ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
Advertisement
Advertisement
ವರದಿಯಲ್ಲಿ ಏನಿದೆ?
ರಸ್ತೆ ವಿಸ್ತರಣೆಗಳ ಅತಿಕ್ರಮಣವೂ ಸೇರಿದಂತೆ ವಿವಿಧ ರೀತಿಯ ರಸ್ತೆ ಅಪಾಯಗಳಲ್ಲಿ ಇವೆ. ಅದರಲ್ಲೂ ಬಿಬಿಎಂಪಿ ರಸ್ತೆಗಳಲ್ಲಿ ಹೆಚ್ಚಿನ ಅಪಾಯಗಳು ಎದುರಾಗುತ್ತಿವೆ. ಅಂದರೆ ಪ್ರತಿ ಕಿಲೋಮೀಟರ್‍ಗೆ 19 ರಿಂದ 20 ಅಪಾಯಗಳು ಎದುರಾಗುತ್ತಿವೆ. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ
Advertisement
Advertisement
ರಾಜ್ಯದೆಲ್ಲೆಡೆ ಹೆಚ್ಚಿನ ಸಂಖ್ಯೆಯ ವಾಹನಗಳು ತಮ್ಮ ನೋಂದಣಿ ಪ್ರಮಾಣಪತ್ರ ಅಥವಾ ಅರ್ಹತಾ ಪ್ರಮಾಣಪತ್ರಗಳನ್ನು ನವೀಕರಿಸದೇ ರಸ್ತೆಗಳಲ್ಲಿ ಸಂಚರಿಸುತ್ತಿವೆ. 22 ಜಿಲ್ಲೆಗಳಲ್ಲಿ ಆಘಾತ ಆರೈಕೆ ಕೇಂದ್ರಗಳನ್ನು (ಟಿಸಿಸಿ) ಸ್ಥಾಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ. ಇದನ್ನೂ ಓದಿ: ಹಿಜಬ್ ವಿವಾದ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್ – ಹೋಳಿ ರಜೆ ಬಳಿಕ ವಿಚಾರಣೆ
ಅಂಬುಲೆನ್ಸ್‍ಗಳ ಮೂಲ ಸ್ಥಳವು ದೂರದಲ್ಲಿದ್ದುದರಿಂದ ಅಥವಾ ಪ್ರೀ-ಟ್ರಿಪ್ ವಿಳಂಬ 30 ನಿಮಿಷಗಳಿಗಿಂತ ಹೆಚ್ಚಾಗಿದ್ದರಿಂದ ಅಪಘಾತಗೊಂಡವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸುಮಾರು 90,000 ಪ್ರಕರಣಗಳಲ್ಲಿ ಸಮಯೋಚಿತ ವೈದ್ಯಕೀಯ ಆರೈಕೆಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಪಘಾತಗಳನ್ನ, ಸಾವುಗಳನ್ನ ಕಡಿಮೆ ಮಾಡುವ ರಸ್ತೆ ಸುರಕ್ಷತಾ ಕ್ರಮಗಳು ಸಾಕಾರವಾಗಿಲ್ಲ.
ಶಿಫಾರಸು ಏನು?
– ಯಾವುದೇ ವಿಳಂಬವಿಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ-2017 ರ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಬೇಕು
– ಎಲ್ಲಾ ರಸ್ತೆ ಬಳಕೆದಾರರಿಗಾಗಿ ವಿವಿಧ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಬಹುದು.
– ಅಪಘಾತಕ್ಕೊಳಗಾದವರು ಗೋಲ್ಡನ್ ಅವರ್‍ನಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ತಜ್ಞರನ್ನೊಳಗೊಂಡಂತೆ ಅಪಘಾತ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು.
– ರಸ್ತೆ ಬಳಕೆದಾರರ ಅಗತ್ಯತೆಗಳನ್ನು ಪೂರೈಸಲು ಹೆದ್ದಾರಿ ಗಸ್ತು ವ್ಯವಸ್ಥೆಯನ್ನು ಬಲಪಡಿಸಬೇಕು.
– ಆರ್‍ಟಿಒಗಳನ್ನು ಬಲಪಡಿಸಲು ಕ್ರಮ ತೆಗೆದುಕೊಳ್ಳಬೇಕು, ವೈಜ್ಞಾನಿಕ ಪರೀಕ್ಷಾ ಟ್ರ್ಯಾಕ್‍ಗಳನ್ನು ಒದಗಿಸಬೇಕು.
– ವಿಳಂಬವನ್ನ ತಪ್ಪಿಸಲು ಅಂಬುಲೆನ್ಸ್‍ಗಳ ಮೂಲ ಸ್ಥಳಗಳನ್ನು ಸಮರ್ಪಕವಾಗಿ ಗುರುತಿಸಬೇಕು. ಅಂಬುಲೆನ್ಸ್ ಸಂಖ್ಯೆ ಹೆಚ್ಚಿಸಬೇಕು.