ಫೆ.1ಕ್ಕೆ ಕೇಂದ್ರ ಹಣಕಾಸು ಬಜೆಟ್‌ – ಅಂದೇ ಬಜೆಟ್‌ ಮಂಡನೆ ಯಾಕೆ?

Public TV
1 Min Read
nirmala sitharaman budget

ನವದೆಹಲಿ: ನರೇಂದ್ರ ಮೋದಿ (Narendra Modi) ಸರ್ಕಾರದ ಎರಡನೇ ಅವಧಿಯ  ಮಧ್ಯಂತರ ಬಜೆಟ್‌ (Budget) ಫೆ.1ರ ಬೆಳಗ್ಗೆ 11 ಗಂಟೆಗೆ ಮಂಡನೆಯಾಗಲಿದೆ

17ನೇ ಲೋಕಸಭೆಯ (Lok Sabha Election) ಕೊನೆಯ ಅಧಿವೇಶನ ಇದೇ ಮಾಸಾಂತ್ಯದಿಂದ ಆರಂಭಗೊಳ್ಳಲಿದೆ. ಜನವರಿ 31ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಗೌರವಾನ್ವಿತ ರಾಷ್ಟ್ರಪತಿ ಭಾಷಣದೊಂದಿಗೆ ಆರಂಭಗೊಳ್ಳುವ ಅಧಿವೇಶನದಲ್ಲಿ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್ ಅವರು ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ 4 ಮಾರ್ಗ – ರಾಮನೂರಿಗೆ ಬರುವ ಭಕ್ತರಿಗಿದು ಮೋಕ್ಷದ ಹಾದಿ

ಫೆ.1 ಯಾಕೆ?
ಈ ಮೊದಲು ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್‌ ತಿಂಗಳ ಒಂದು ದಿನ ಹಣಕಾಸು ಬಜೆಟ್‌ ಮಂಡನೆಯಾಗುತ್ತಿತ್ತು. ಆದರೆ 2017-18 ಹಣಕಾಸು ವರ್ಷದ ಬಜೆಟ್‌ ಅನ್ನು ಅರುಣ್‌ ಜೇಟ್ಲಿ (Arun Jaitley) ಫೆ.1 ರಂದು ಮಂಡನೆ ಮಾಡಿದ್ದರು. 2017 ರಿಂದ ಈ ಸಂಪ್ರದಾಯ ಮುಂದುವರಿಯುತ್ತಾ ಬಂದಿದೆ. 2015 ರಲ್ಲಿ ಫೆ.28, 2016ರಲ್ಲಿ ಫೆ.29 ರಂದು ಜೇಟ್ಲಿ ಮಂಡನೆ ಮಾಡಿದ್ದರು. 2019 ರಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

 

ಈ ಮೊದಲು ಹಣಕಾಸು ಬಜೆಟ್‌ ಮತ್ತು ರೈಲ್ವೇ ಬಜೆಟ್‌ ಎರಡು ಪ್ರತ್ಯೇಕವಾಗಿ ಮಂಡನೆಯಾಗುತ್ತಿತ್ತು. ರೈಲ್ವೇ ಬಜೆಟ್‌ನಲ್ಲಿ ಘೋಷಣೆ ಮಾತ್ರ ಆಗುತ್ತಿದ್ದರೆ ಅದು ಜಾರಿ ಆಗುತ್ತಿರಲಿಲ್ಲ. ರೈಲ್ವೇ ಬಜೆಟ್‌  ರಾಜಕೀಯ ಪಕ್ಷಗಳ ಚುನಾವಣಾ ಘೋಷಣೆಯಾಗುತ್ತಿತ್ತೇ ಹೊರತು ಕಾರ್ಯರೂಪಕ್ಕೆ ಬರುತ್ತಿರಲಿಲ್ಲ ಎಂದು ಹೇಳಿ  ಅರುಣ್‌ ಜೇಟ್ಲಿ ರೈಲ್ವೇ ಬಜೆಟ್‌ ಅನ್ನು ಹಣಕಾಸು ಬಜೆಟ್‌ನಲ್ಲೇ ವಿಲೀನಗೊಳಿಸಿದ್ದರು.

Share This Article