ನವದೆಹಲಿ: ಕ್ಷಯ ರೋಗಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು 500 ರೂ. ಸಹಾಯ ಧನ ನೀಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಎಲ್ಲಾ ಟಿಬಿ ರೋಗಿಗಳ ಪೌಷ್ಠಿಕ ಆಹಾರ ನೀಡಲು 600 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಜೇಟ್ಲಿ ಬಜೆಟ್ ಭಾಷಣದಲ್ಲಿ ತಿಳಿಸಿದರು.
Advertisement
ಬಜೆಟ್ ಹೈಲೈಟ್ಸ್
– ಎಸ್‍ಸಿ ಗಳಿಗಾಗಿ- 279 ಕಾರ್ಯಕ್ರಮಗಳು, 52,719 ಕೋಟಿ ರೂ. ಮೀಸಲು
– ಎಸ್‍ಟಿ ಗಳಿಗಾಗಿ – 305 ಕಾರ್ಯಕ್ರಮಗಳು, 32,508 ಕೋಟಿ ರೂ. ಮೀಸಲು
– ಭಾರತದ ಆರ್ಥಿಕತೆ ಶೀಘ್ರದಲ್ಲೇ 5ನೇ ಅತೀ ದೊಡ್ಡದಾಗುವ ಆರ್ಥಿಕತೆಯಾಗುವ ದೇಶವಾಗಲಿದೆ.
Advertisement
– ರೈತರ ಆದಾಯ ಹೆಚ್ಚಿಸುವುದರ ಬಗ್ಗೆ ಆದ್ಯತೆ, ಕೃಷಿ ಮಾರುಕಟ್ಟೆ ಅಭೀವೃದ್ಧಿಗೆ 2 ಸಾವಿರ ಕೋಟಿ ರೂ.
– 473 ಎಪಿಎಮ್‍ಸಿ ಗಳು ಇ-ಎನ್‍ಎಎಮ್ (ರಾಷ್ಟ್ರೀಯ ಕೃಷಿ ಮಾರುಕಟ್ಟೆ ಪೋರ್ಟಲ್) ಜೊತೆ ಸಂಪರ್ಕಿಸಲಾಗುತ್ತದೆ. ಉಳಿದವನ್ನ ಮಾರ್ಚ್ 18ರೊಳಗೆ ಸಂಪಕಿಸಲಾಗುತ್ತದೆ.
Advertisement
– ಆಹಾರ ಸಂಸ್ಕರಣಾ ವಲಯಕ್ಕೆ 1400 ಕೋಟಿ ರೂ. ದುಪ್ಪಟ್ಟು ಹಣ ಮೀಸಲು
– ಆಪರೇಷನ್ ಗ್ರೀನ್‍ಗಾಗಿ 500 ಕೋಟಿ ರೂ.
– ಕಿಸಾನ್ ಕ್ರೆಡಿಟ್ ಕಾರ್ಡ್‍ಗಳು ಮೀನುಗಾರಿಕೆ ಹಾಗೂ ಪಶುಸಂಗೋಪನೆ ರೈತರಿಗೂ ವಿಸ್ತರಣೆ
Advertisement
– ಬಿದಿರು ವಲಯಕ್ಕೆ 1290 ಕೋಟಿ ರೂ.
– ಮೀನುಗಾರಕಾ ನಿಧಿ ಹಾಗೂ ಪಶುಸಂಗೋಪನೆ ನಿಧಿಗಾಗಿ 10 ಸಾವಿರ ಕೋಟಿ ರೂ.
– ರಾಷ್ಟ್ರ ರಾಜಧಾನಿಯಾದ ದೆಹಲಿಯ ಪ್ರದೇಶದ ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಯೋಜನೆ
-ಉಜ್ವಲಾ ಯೋಜನೆಯ ಮೂಲಕ 8 ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ
– ಕೈಗೆಟುಕುವ ಬೆಲೆಯಲ್ಲಿ ವಸತಿ ನಿಧಿ ಸ್ಥಾಪನೆ ನ್ಯಾಷನಲ್ ಲೈವ್ಲಿಹುಡ್ ಮಿಷನ್‍ಗಾಗಿ 5750 ಕೋಟಿ ರೂ.
– ಕೃಷಿ ಚಟುವಟಿಕೆಗಾಗಿ ಸಾಲ 10 ಲಕ್ಷ ಕೋಟಿಯಿಂದ 11 ಲಕ್ಷ ಕೋಟಿಗೆ ಹೆಚ್ಚಳ
– ಬುಡಕಟ್ಟು ಮಕ್ಕಳಿಗಾಗಿ ಏಕಲವ್ಯ ಶಾಲೆಗಳ ಸ್ಥಾಪನೆ, ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯಕ್ಕಾಗಿ ಪ್ರಸ್ತಾವನೆ
– ಆರೋಗ್ಯ ಕೇಂದ್ರಗಳಿಗೆ 1200 ಕೋಟಿ ರೂ.
– 10 ಕೋಟಿ ಬಡ ಕುಟುಂಬಗಳಿಗಾಗಿ ಆರೋಗ್ಯ ಸುರಕ್ಷಾ ಯೋಜನೆ
– ಬಡ ಹಾಗೂ ದುರ್ಬಲ ಕುಟುಂಬಗಳಿಗಾಗಿ ಒಂದು ವರ್ಷಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವಿಮೆ
– ನೀರಾವರಿ ಯೋಜನೆಗೆ ರೂ. 2600 ಕೋಟಿ ರೂ.
– 2022ರ ವೇಳೆಗೆ ಪ್ರತೀ ಬಡ ವ್ಯಕ್ತಿಯೂ ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ ಮನೆ ಹೊಂದಬೇಕು. ಈಗಾಗಲೇ 1 ಕೋಟಿ ಮನೆಗಳು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, 37 ಲಕ್ಷ ಮನೆಗಳು ನಗರ ಪ್ರದೇಶದಲ್ಲಿ ನಿರ್ಮಾಣವಾಗಿವೆ.
– ಮುಂದಿನ ಹಣಕಾಸು ಯೋಜನೆಯಲ್ಲಿ ಸುಮಾರು 2 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಾಣದ ಗುರಿ
– ಉಚಿತ ವಿದ್ಯುತ್ ಸಂಪರ್ಕಕ್ಕಾಗಿ 16,000 ಕೋಟಿ ರೂ. ಮೀಸಲು