ಬೆಂಗಳೂರು: ಬಹು ನಿರೀಕ್ಷಿತ ಸಮ್ಮಿಶ್ರ ಸರ್ಕಾರದ ಬಜೆಟ್ ನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡಿಸಿದರು. 34 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು, ಒಂದೆಡೆ ಕೆಲವರಿಗೆ ಖುಷಿಯನ್ನು ತಂದಿದ್ರೆ, ಒಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿದ ಪರಿಣಾಮ ಅವುಗಳ ಬೆಲೆ ಏರಿಕೆಯಾಗಲಿದೆ.
1. ಪೆಟ್ರೋಲ್ ಮತ್ತು ಡಿಸೇಲ್:
ಇತ್ತ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸಂಪನ್ಮೂಲಗಳ ಕ್ರೋಡಿಕರಣಕ್ಕಾಗಿ ಪಟ್ರೋಲ್, ಡೀಸೆಲ್, ಮದ್ಯ, ಸಾರಿಗೆ ತೆರಿಗೆ ಮತ್ತು ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರಸ್ತುತ ಶೇ.30 ರಿಂದ ಶೇ.32 ಮತ್ತು ಡೀಸೆಲ್ ತೆರಿಗೆ ದರವನ್ನು ಪ್ರಸ್ತುತ ಶೇ.19ರಿಂದ 21ಕ್ಕೆ ಏರಿಗೆ ಮಾಡಲಾಗಿದೆ. ಒಟ್ಟಾರೆಯಾಗಿ ಲೀಟರ್ ಒಂದಕ್ಕೆ ಪೆಟ್ರೋಲ್ ಮೇಲಿನ ಬೆಲೆಯಲ್ಲಿ 1.14 ರೂ. ಮತ್ತು ಡೀಸೆಲ್ ಮೇಲಿನ ಬೆಲೆಯಲ್ಲಿ ರೂ.1.12 ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.
Advertisement
2. ಅಬಕಾರಿ:
ಮದ್ಯ ಎಲ್ಲಾ 18 ಫೋಷಿತ ಬೆಲೆ ಸ್ಲಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ-ಅರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇಕಡ 4ರಷು ಹೆಚ್ಚಿಸಲಾಗಿದೆ.
Advertisement
Advertisement
3. ಸಾರಿಗೆ:
ಮೋಟಾರು ವಾಹನ ತೆರಿಗೆಯನ್ನು ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಳದ ಪ್ರಸ್ತಾವನೆಯನ್ನು ಉಲ್ಲೇಖಿಸಲಾಗಿದೆ. ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್ ಗೆ ಶೇ.50ರಂತೆ ಹೆಚ್ಚಳ. ಅಂದರೆ ಈಗಿರುವ ರೂ.1,100, 1,200, 1,300 ಮತ್ತು 1,500ಗಳನ್ನು ಕ್ರಮವಾಗಿ ರೂ. 1650, 1800, 1950 ಮತ್ತು 2250 ಗಳಿಗೆ ಏರಿಕೆ ಮಾಡಲಾಗುವುದು ಎಂದು ಬಜೆಟ್‍ನಲ್ಲಿ ತಿಳಿಸಲಾಗಿದೆ.
Advertisement
4. ವಿದ್ಯುತ್:
ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಚಾಲ್ತಿಯಲ್ಲಿರುವ ಶೇ.6 ರಿಂದ ಶೇ.9ಕ್ಕೆ ಹೆಚ್ಚಿಸಲಾಗಿದೆ. ಸ್ವಂತ ಬಳಕೆಯ ವಿದ್ಯುತ್ (Taxation On Captive Consumption) ಮೇಲಿನ ತೆರಿಗೆ ದರವನ್ನು ಪ್ರತಿ ಯೂನಿಟ್ ದರ 10 ಪೈಸೆಯಿಂದ 20 ಪೈಸೆಗೆ ಏರಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಸದನದಲ್ಲಿ ಚೊಚ್ಚಲ ಬಜೆಟ್ ಮಂಡಿಸಿದರು. ಅದರ ಚಿತ್ರ ಸಂಪುಟ ಇಲ್ಲಿದೆ.#HDKbudget #MaitriBudget #karnatakabudget2018 pic.twitter.com/jzVpavxZ6a
— CM of Karnataka (@CMofKarnataka) July 5, 2018