ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ (Union Budget) ಬಾಂಗ್ಲಾದೇಶಕ್ಕೆ (Bangladesh) ನೀಡುವ ಅನುದಾನದಲ್ಲಿ ಅರ್ಧ ಕಡಿತವಾದರೆ ಇರಾನ್‌ನಲ್ಲಿನ (Iran) ಚಾಬಹಾರ್ ಬಂದರು ಯೋಜನೆಗೆ ಯಾವುದೇ ಹಣವನ್ನು ಹಂಚಿಕೆ ಮಾಡಿಲ್ಲ.
ಪ್ರತಿವರ್ಷ ದೇಶಗಳಿಗೆ ನೆರವು ಅಡಿ ಹಣವನ್ನು ಹಂಚಿಕೆ ಮಾಡುತ್ತದೆ. ಕಳೆದ ವರ್ಷ 5,483 ಕೋಟಿ ರೂ. ಹಂಚಿಕೆ ಮಾಡಿದ್ದರೆ ಈ ವರ್ಷ 4% ಏರಿಕೆಯಾಗಿದ್ದು ಒಟ್ಟು 5,686 ಕೋಟಿ ರೂ. ಹಣವನ್ನು ಹಂಚಿಕೆ ಮಾಡಿದೆ.
ಇರಾನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಾಬಹಾರ್ ಬಂದರು (Chabahar Port) ಯೋಜನೆಗೆ ಪ್ರತಿವರ್ಷ ಅನುದಾನ ನೀಡಲಾಗುತ್ತಿತ್ತು. ಕಳೆದ ವರ್ಷ 100 ಕೋಟಿ ರೂ. ನೀಡಿದ್ದರೆ ಈ ವರ್ಷ ಯಾವುದೇ ಅನುದಾನವನ್ನು ಪ್ರಕಟಿಸಿಲ್ಲ.

ಪಾಕಿಸ್ತಾನವನ್ನು ಬೈಪಾಸ್ ಮಾಡಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಭಾರತದ ಪ್ರವೇಶಕ್ಕೆ ಪ್ರಮುಖವೆಂದು ಪರಿಗಣಿಸಲಾದ ಯೋಜನೆಯಾದ ಚಾಬಹಾರ್‌ನಲ್ಲಿರುವ ಶಾಹಿದ್ ಬೆಹೆಶ್ಟಿ ಟರ್ಮಿನಲ್ ಅನ್ನು ನಿರ್ವಹಿಸಲು ಭಾರತ 2024 ರಲ್ಲಿ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಈ ನಿರ್ಧಾರ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ 25% ಸುಂಕ ವಿಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಕಾರಣಕ್ಕೆ ಭಾರತ ಈ ಬಜೆಟ್‌ನಲ್ಲಿ ಚಾಬಹಾರ್ ಯೋಜನೆಗೆ ಯಾವುದೇ ಅನುದಾನ ನೀಡಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಒಂದು ಚೊಂಬು ಕೊಟ್ಟಿದ್ದಾರೆ: ಬಜೆಟ್‌ನಿಂದ ಅನ್ಯಾಯ ಆಗಿದೆ ಎಂದ ಸಿದ್ದರಾಮಯ್ಯ
ಬಾಂಗ್ಲಾದೇಶದ ಹಂಚಿಕೆಯನ್ನು 120 ಕೋಟಿ ರೂ.ಗಳಿಂದ 60 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಭಾರತದ ಅತಿ ಹೆಚ್ಚು ಪ್ರಮಾಣದಲ್ಲಿ ಭೂತಾನ್‌ಗೆ ಈಗ ನೆರವು ನೀಡುತ್ತಿದೆ.ಭೂತಾನ್‌ನ ಹಂಚಿಕೆಯು ಸುಮಾರು 6% ರಷ್ಟು ಹೆಚ್ಚಾಗಿ 2,289 ಕೋಟಿ ರೂ.ಗಳಿಗೆ ತಲುಪಿದೆ. ನೇಪಾಳದ ಹಂಚಿಕೆಯು ಸುಮಾರು 14% ರಷ್ಟು ಹೆಚ್ಚಾಗಿ 800 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಶ್ರೀಲಂಕಾಗೆ 400 ಕೋಟಿ ರೂ. ಹಂಚಿಕೆಯಾಗಿದೆ
ಮಾಲ್ಡೀವ್ಸ್‌ಗೆ ನೀಡುವ ನೆರವು ಸುಮಾರು 8% ರಷ್ಟು ಕಡಿಮೆಯಾಗಿ 550 ಕೋಟಿ ರೂ.ಗಳಿಗೆ ತಲುಪಿದೆ. ಆದರೆ ಮಾರಿಷಸ್‌ಗೆ ನೀಡುವ ಅನುದಾನ 10% ಏರಿಕೆಯಾಗಿದ್ದು 550 ಕೋಟಿ ರೂ. ಹಂಚಿಕೆಯಾಗಿದೆ.
ಅಫ್ಘಾನಿಸ್ತಾನಕ್ಕೆ ಮಾನವೀಯ ನೆಲೆಗಾಗಿ ಕಳೆದ ವರ್ಷದಂತೆ ಈ ಬಾರಿಯೂ 150 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಮ್ಯಾನ್ಮಾರ್‌ನ ಹಂಚಿಕೆ ಸುಮಾರು 14% ರಷ್ಟು ಕಡಿತವಾಗಿದ್ದು 300 ಕೋಟಿ ರೂ.ಗಳಿಗೆ ತಲುಪಿದೆ. ಆಫ್ರಿಕನ್ ದೇಶಗಳಿಗೆ ಕಳೆದ ವರ್ಷದಂತೆ 225 ಕೋಟಿ ರೂ. ನೀಡಲಾಗುತ್ತದೆ.


