ಬೆಂಗಳೂರು: ರಾಜ್ಯದಲ್ಲಿ 12 ನೂತನ ಪೊಲೀಸ್ ಠಾಣೆ (Police Station) ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ದಾಖಲೆಯ 17ನೇ ಬಜೆಟ್ (Karnataka Budget 2026) ಮಂಡಿಸಿದ ಸಿಎಂ ಸಿದ್ದರಾಮಯ್ಯ (Siddaramaiah) ಹೊಸದಾಗಿ ಆರಂಭವಾಗುವ ಪೊಲೀಸ್ ಠಾಣೆಯ ವಿವರವನ್ನು ಘೋಷಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ 2 ಹೊಸ ಪೊಲೀಸ್ ಠಾಣೆಯನ್ನು ಘೋಷಿಸಲಾಗಿದೆ. ಹೊಸದಾಗಿ ಪ್ರಾರಂಭವಾಗುವ ಪೊಲೀಸ್ ಠಾಣೆಗಳ ವಿವರ ಇಲ್ಲಿದೆ.
* ದಕ್ಷಿಣ ಕನ್ನಡ – ಮಾಣಿ ಪೊಲೀಸ್ ಠಾಣೆ
* ದಕ್ಷಿಣ ಕನ್ನಡ – ಸಜಿಪನಡು ಪೊಲೀಸ್ ಠಾಣೆ
* ಬೆಂಗಳೂರು ಗ್ರಾಮಾಂತರ – ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ
* ಬೆಳಗಾವಿ – ಯರಗಟ್ಟಿ ಪೊಲೀಸ್ ಠಾಣೆ
* ಯಾದಗಿರಿ – ಕಕ್ಕೇರಾ ಪೊಲೀಸ್ ಠಾಣೆ
* ಚಿತ್ರದುರ್ಗ – ಹಿರಿಯೂರು ಸಂಚಾರ ಪೊಲೀಸ್ ಠಾಣೆ
* ದಾವಣಗೆರೆ – ಆನಗೋಡು ಪೊಲೀಸ್ ಠಾಣೆ
* ಹಾವೇರಿ – ತಿಳುವಳ್ಳಿ ಪೊಲೀಸ್ ಠಾಣೆ
* ಮೈಸೂರು – ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ
* ವಿಜಯಪುರ – ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ
* ಕೋಲಾರ – ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ
* ಚಾಮರಾಜನಗರ – ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆ

