Budget 2025 | ಉದ್ಯಮ ಆರಂಭಿಸುವ 5 ಲಕ್ಷ SC, ST ಮಹಿಳೆಯರಿಗೆ ಆರ್ಥಿಕ ನೆರವು: ನಿರ್ಮಲಾ ಸೀತಾರಾಮನ್‌

Public TV
2 Min Read
Women Entrepreneurs

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತಮ್ಮ 8ನೇ ಬಜೆಟ್‌ನಲ್ಲಿ, ರೈತರು ಹಾಗೂ ಮಹಿಳೆಯರಿಗೆ ಬಂಪರ್‌ ಉಡುಗೊರೆಗಳನ್ನ ಘೋಷಣೆ ಮಾಡಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಹೊಸ ಯೋಜನೆಯೊಂದನ್ನ ಘೋಷಿಸಿದ್ದಾರೆ.

03

ಮೊದಲ ಬಾರಿಗೆ ಉದ್ಯಮ ಆರಂಭಿಸುವ 5 ಲಕ್ಷ ಎಸ್‌ಸಿ, ಎಸ್ಟಿ ಮಹಿಳಾ ಉದ್ಯಮಿಗಳಿಗೆ (Women Entrepreneurs) ಸಾಲ ಸೌಲಭ್ಯ ನೀಡಲು ಉದ್ದೇಶಿಸಿದ್ದು, ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ 2 ಕೋಟಿ ರೂ.ವರೆಗೆ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: Budget 2025| ಕಿತ್ತಾಟ ನಡೆಸಿದ್ರೂ ಮಾಲ್ಡೀವ್ಸ್‌ಗೆ ಅನುದಾನ ಹೆಚ್ಚಳ,ಬಾಂಗ್ಲಾಗೂ ಸಹಾಯ- ಯಾವ ದೇಶಕ್ಕೆ ಎಷ್ಟು ಕೋಟಿ?

05

ಇನ್ನೂ ದೇಶದ 1 ಕೋಟಿಗೂ ಅಧಿಕ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ʻಧನ್ ಧಾನ್ಯ ಕೃಷಿʼ ಯೋಜನೆಯನ್ನು ಘೋಷಿಸಲಾಗಿದೆ. ಇದರೊಂದಿಗೆ ಕಿಸಾನ್‌ ಕ್ರೆಡಿಡ್‌ ಸಾಲದ ಮಿತಿಯನ್ನು 3 ರಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಜೊತೆಗೆ ಉದ್ಯೋಗ ಸೃಷ್ಟಿಸುವ ಗುರಯೊಂದಿಗೆ 3 ಯೂರಿಯಾ ಪ್ಲ್ಯಾಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯೂರಿಯಾ ಪ್ಲ್ಯಾಂಟ್‌ ಸ್ಥಾಪನೆಯಿಂದ 7.5 ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

nirmala sitharama farmers

ಅಲ್ಲದೇ ನಮ್ಮ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ʻಧನ್ ಧಾನ್ಯʼ ಕೃಷಿ ಯೋಜನೆಯನ್ನು ಕೈಗೊಳ್ಳಲಿದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳ ಒಮ್ಮುಖದ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಇದು ಸಾಂಸ್ಕೃತಿಕ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ. ಇದನ್ನೂ ಓದಿ: ಎತ್ತುಗಳಿಗೆ ಸ್ನಾನ ಮಾಡಿಸಲು ಕೆರೆಗೆ ಹೋಗಿದ್ದ ರೈತನ ಮೇಲೆ ಮೊಸಳೆ ದಾಳಿ

ತರಕಾರಿಗಳು, ಹಣ್ಣುಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಲಾಭದಾಯಕ ಬೆಲೆಗಳನ್ನು ಒದಗಿಸಲು ಸಮಗ್ರ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಕೃಷಿಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ಇದರಿಂದ ವಲಸೆ ತಡೆಯಬಹುದು. ಯುವಕರನ್ನು ಕೃಷಿಯತ್ತ ಸೆಳೆಯುವ ಉದ್ದೇಶ ಹೊಂದಿದೆ. ಎನ್‌ಸಿಸಿಎಫ್ ಕಡೆಯಿಂದ ಧಾನ್ಯಗಳ ಸಂಗ್ರಹಣೆ ಮಾಡಲಾಗುವುದು. ಹಣ್ಣು ಮತ್ತು ತರಕಾರಿಯನ್ನು ಬೆಳೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: Union Budget 2025: 77 ನಿಮಿಷಗಳ ಕಾಲ 8ನೇ ಬಜೆಟ್ ಮಂಡಿಸಿದ ಸೀತಾರಾಮನ್

Share This Article