ನವದೆಹಲಿ: ತನ್ನ ಜೊತೆ ಕಿತ್ತಾಟ ನಡೆಸಿದರೂ ಬಾಂಗ್ಲಾದೇಶ (Bangladesh), ಮಾಲ್ಡೀವ್ಸ್‌ಗೆ (Maldives) ಭಾರತ ಅನುದಾನ ನೀಡುವುದನ್ನು ಮುಂದುವರಿಸಿದೆ.
ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂಬ ನೀತಿಯನ್ನು ಅಳವಡಿಸಿರುವ ಭಾರತ ತನ್ನ ಬಜೆಟ್‌ನಲ್ಲಿ (Union Budget) ನೆರೆಯ ದೇಶಗಳಿಗೆ ಪ್ರತಿ ವರ್ಷ ಅನುದಾನವನ್ನು ನೀಡುತ್ತಾ ಬಂದಿದೆ.
ಪಟ್ಟಿಯಲ್ಲಿ ಭೂತನ್ ಮೊದಲ ಸ್ಥಾನದಲ್ಲಿದ್ದು 2025-26ರ ಬಜೆಟ್‌ನಲ್ಲಿ 2,150 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷದ ಅನುದಾನಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಕಳೆದ ಬಾರಿ 2,543 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇದನ್ನೂ ಓದಿ: Union Budget 2025: ಯಾವುದು ಅಗ್ಗ, ಯಾವುದು ದುಬಾರಿ?
ಚೀನಾದ ಪರ ವಾಲಿರುವ ಮಾಲ್ಡೀವ್ಸ್‌ಗೆ ಅನುದಾನ ಏರಿಕೆಯಾಗಿದೆ. ಕಳೆದ ಬಾರಿ 470 ಕೋಟಿ ರೂ. ನೀಡಿದ್ದರೆ ಈ ಬಾರಿ 600 ಕೋಟಿ ರೂ. ನೀಡಲಾಗಿದೆ.
ಅಫ್ಘಾನಿಸ್ತಾನಕ್ಕೆ ನೀಡುವ ಅನುದಾನ ಡಬಲ್ ಆಗಿದೆ. ಕಳೆದ ಬಾರಿ 50 ಕೋಟಿ ರೂ. ನೀಡಿದ್ದರೆ ಈ ಬಾರಿ 100 ಕೋಟಿ ರೂ.ಗೆ ಏರಿಕೆಯಾಗಿದೆ. 2 ವರ್ಷದ ಹಿಂದೆ 207 ಕೋಟಿ ರೂ. ಅನುದಾನ ನೀಡಲಾಗಿತ್ತು.
ಮ್ಯಾನ್ಮರ್‌ಗೆ ಕಳೆದ ಬಾರಿ 400 ಕೋಟಿ ರೂ. ನೀಡಲಾಗಿತ್ತು. ಈ ಬಾರಿ 350 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಇದನ್ನೂ ಓದಿ: Union Budget 2025 | ಯಾವ ವರ್ಷ ಎಷ್ಟು ಲಕ್ಷ ತೆರಿಗೆ ವಿನಾಯಿತಿ ಸಿಕ್ಕಿತ್ತು? – ಇಲ್ಲಿದೆ ಪೂರ್ಣ ವಿವರ
ಬಾಂಗ್ಲಾ ಸರ್ಕಾರದ ಜೊತೆ ಭಿನ್ನಮತ ಇದ್ದರೂ ಬಜೆಟ್‌ನಲ್ಲಿ ಅನುದಾನ ನಿಲ್ಲಿಸಿಲ್ಲ. ಬಾಂಗ್ಲಾದೇಶಕ್ಕೆ 120 ಕೋಟಿ ರೂ. ನೇಪಾಳ 700 ಕೋಟಿ ರೂ., ಶ್ರೀಲಂಕಾಗೆ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ಇಷ್ಟೇ ಪ್ರಮಾಣದ ಹಣವನ್ನು ಹಂಚಿಕೆ ಮಾಡಲಾಗಿತ್ತು.
ಇರಾನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಬಹಾರ್ ಬಂದರು ಕಾಮಗಾರಿಗೆ ಕಳೆದ ವರ್ಷದಂತೆ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಆಫ್ರಿಕಾದ ದೇಶಗಳಿಗೆ ಕಳೆದ ವರ್ಷ 200 ಕೋಟಿ ರೂ. ನೀಡಲಾಗಿತ್ತು. ಈ ಬಜೆಟ್‌ನಲ್ಲಿ 225 ಕೋಟಿ ರೂ.ಗೆ ಏರಿಕೆಯಾಗಿದೆ. 2023 ರಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಆಫ್ರಿಕನ್ ಒಕ್ಕೂಟ ಜಿ20 ಗ್ರೂಪಿಗೆ ಸೇರ್ಪಡೆಯಾಗಿತ್ತು.