ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕ್ಯಾನ್ಸರ್ ರೋಗಿಗಳಿಗೆ (Cancer Patients) ಬಂಪರ್ ಆಫರ್ ಘೋಷಿಸಿದ್ದಾರೆ.ಇದನ್ನೂ ಓದಿ: Budget 2025: ಮಧ್ಯಮ ವರ್ಗಕ್ಕೆ ಬಂಪರ್; 12 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ಕಟ್ಟುವಂತಿಲ್ಲ
Advertisement
ಶನಿವಾರ ವಿತ್ತ ಸಚಿವೆ ಮಂಡಿಸಿದ 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಔಷಧೀಯ ಕಂಪನಿಗಳು ನಡೆಸುವ ರೋಗಿ ನೆರವು ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡಿದರೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ, 37 ಹೊಸ ಔಷಧಿಗಳು ಮತ್ತು 13 ಹೊಸ ರೋಗಿ ನೆರವು ಕಾರ್ಯಕ್ರಮಗಳನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.
Advertisement
ಕ್ಯಾನ್ಸರ್ ರೋಗಿಗಳು, ಅಪರೂಪದ ಕಾಯಿಲೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪರಿಹಾರ ಒದಗಿಸಲು, 36 ಜೀವ ಉಳಿಸುವ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುವುದು ಹಾಗೂ 6 ಜೀವ ಉಳಿಸುವ ಔಷಧಿಗಳಿಗೆ ಕಸ್ಟಮ್ಸ್ ಸುಂಕದಲ್ಲಿ 5% ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.ಇದನ್ನೂ ಓದಿ: ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಕೊನೆಗೆ ಧರ್ಮಕ್ಕೆ ಗೆಲುವು: ಕಾಶಿಯಲ್ಲಿ ಪವಿತ್ರಾ ಗೌಡ