ನವದೆಹಲಿ: ಪಂಚರಾಜ್ಯಗಳ ಚುನಾವಣೆ, ಕೋವಿಡ್ ಸಂಕಷ್ಟದ ಮಧ್ಯೆ ಕೇಂದ್ರ ಸರ್ಕಾರ ಇವತ್ತು ದೂರಗಾಮಿ ಬಜೆಟ್ ಮಂಡಿಸಿದೆ. ಜನಪ್ರಿಯ ಯೋಜನೆಗಳ ಘೋಷಣೆ ಇಲ್ಲದಿದ್ದರೂ ಇದೊಂದು ನೀರಸ ಬಜೆಟ್ ಎನಿಸಿದ್ದರೂ, ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಬಜೆಟ್ ಮಂಡಿಸಿದೆ.
ಅಗತ್ಯ ವಸ್ತುಗಳು, ದೂರಸಂಪರ್ಕ, ಮೂಲಭೂತ ಸೌಕರ್ಯಕ್ಕೆ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಈ ಬಾರಿಯ ಬಜೆಟ್ ನಾಲ್ಕು ಸೂತ್ರಗಳನ್ನು ಆಧರಿಸಿದೆ. ಏಳು ವಲಯಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಬಜೆಟ್ ರೂಪಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್ 12:30ಕ್ಕೆ ಅಂದ್ರೆ 90 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ್ರು. ಬಜೆಟ್ ಪೇಪರ್ ಲೆಸ್ ಆಗಿತ್ತು. ಮೋದಿ ಸರ್ಕಾರವೂ ಡಿಜಿಟಲೈಸೇಷನ್ಗೆ ಬಜೆಟ್ನಲ್ಲಿ ಒತ್ತು ನೀಡಿತ್ತು. ಇದನ್ನೂ ಓದಿ: ಮಾನಸಿಕ ಆರೋಗ್ಯಕ್ಕೆ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮ – ಬೆಂಗಳೂರಿನ IIITB ತಾಂತ್ರಿಕ ಬೆಂಬಲ
ಬಜೆಟ್ `ರೂಪಾಯಿ’ ಲೆಕ್ಕಾಚಾರ:
ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂ. ಕಳೆದ ವರ್ಷದ ಬಜೆಟ್ ಗಾತ್ರ 34.83 ಲಕ್ಷ ಕೋಟಿ ರೂ. ಅಂದ್ರೆ 5.71 ಲಕ್ಷ ಕೋಟಿ ರೂ.ನಷ್ಟು ಹೆಚ್ಚು. ಇದು ಕೂಡ ವಿತ್ತೀಯ ಕೊರತೆ ಬಜೆಟ್ ಆಗಿದೆ. 6.9 ಕೋಟಿ ರೂ.ರಷ್ಟು ಕೊರತೆ ಬಜೆಟ್ ಆಗಿದೆ.
ಆದಾಯ ಹೇಗೆ?:
58 ಪೈಸೆ – ತೆರಿಗೆ ಆದಾಯ -(ನೇರ & ಪರೋಕ್ಷ ತೆರಿಗೆ) (ಜಿಎಸ್ಟಿಯಿಂದ 16 ಪೈಸೆ, ಕಾರ್ಪೋರೇಟ್ ತೆರಿಗೆಯಿಂದ 15 ಪೈಸೆ, ಕೇಂದ್ರ ಅಬಕಾರಿ ಸುಂಕದಿಂದ 5 ಪೈಸೆ, ಕಸ್ಟಮ್ಸ್ ಸುಂಕದಿಂದ 5 ಪೈಸೆ, ಆದಾಯ ತೆರಿಗೆಯಿಂದ 15 ಪೈಸೆ ಆದಾಯ). 35 ಪೈಸೆ – ಸಾಲ & ಇತರೆ, 5 ಪೈಸೆ – ಬಂಡವಾಳ ಹಿಂತೆಗೆದಿಂದ, 2 ಪೈಸೆ – ತೆರಿಗೆಯೇತರ ಆದಾಯವಾಗಿದೆ. ಇದನ್ನೂ ಓದಿ: Budget 2022: ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ
ಖರ್ಚು ಹೇಗೆ?:
20 ಪೈಸೆ – ಬಡ್ಡಿ, 17 ಪೈಸೆ – ರಾಜ್ಯಗಳ ತೆರಿಗೆ, ಸುಂಕ ಪಾಲು, 8 ಪೈಸೆ – ರಕ್ಷಣೆ, 15 ಪೈಸೆ – ಕೇಂದ್ರ ವಲಯ ಯೋಜನೆಗಳು. 9 ಪೈಸೆ – ಕೇಂದ್ರ ಪ್ರಾಯೋಜಿತ ಯೋಜನೆ. 10 ಪೈಸೆ – ಹಣಕಾಸು ಆಯೋಗ. 8 ಪೈಸೆ – ಸಬ್ಸಿಡಿ. 4 ಪೈಸೆ – ಪಿಂಚಣಿ. 9 ಪೈಸೆ – ಇತರೆ ಖರ್ಚುನಿಂದ ಕೂಡಿದ ಬಜೆಟ್ ಆಗಿದೆ. ಇದನ್ನೂ ಓದಿ: Budget: 2 ಲಕ್ಷ ಅಂಗನವಾಡಿಗಳನ್ನು ‘ಸಕ್ಷಮ್ ಅಂಗನವಾಡಿ’ಗಳಾಗಿ ಮಾರ್ಪಾಡು – ಮಹಿಳಾ ಸಬಲೀಕರಣಕ್ಕೆ ಒತ್ತು