ನವದೆಹಲಿ: ದೇಶದಲ್ಲಿರುವ ಎರಡು ಲಕ್ಷ ಅಂಗನವಾಡಿಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‍ನಲ್ಲಿ ಘೋಷಿಸಿದರು.
ಕೇಂದ್ರ ಬಜೆಟ್‍ನಲ್ಲಿ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷ ಒತ್ತು ಕೊಡಲಾಗಿದ್ದು, ಇದಕ್ಕಾಗಿ ಬೇರೆ ಬೇರೆ ಯೋಜನೆಗಳನ್ನು ಬಜೆಟ್‍ನಲ್ಲಿ ರೂಪಿಸಲಾಗಿದೆ. ಭಾರತ@100 ಗೆ 25 ವರ್ಷಗಳ ಕಾಲ ಮುನ್ನಡೆಸುವ ಅಮೃತ ಕಾಲದ ಸಮಯದಲ್ಲಿ ನಾರಿ ಶಕ್ತಿಯು ದೇಶದ ಉಜ್ವಲ ಭವಿಷ್ಯದ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟಿದೆ. ಗೌರವಾನ್ವಿತ ಪ್ರಧಾನ ಮಂತ್ರಿಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭಾರತ@100ಗಾಗಿ ದೂರದೃಷ್ಟಿಯನ್ನು ರೂಪಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: Budget 2022: ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ
ನಾರಿ ಶಕ್ತಿಯ ಮಹತ್ವವನ್ನು ಗುರುತಿಸಿ, ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆಗಳನ್ನು ಸಮಗ್ರವಾಗಿ ಪರಿಷ್ಕರಿಸಿದೆ. ಅದರಂತೆ, ಮಹಿಳೆಯರು ಮತ್ತು ಮಕ್ಕಳಿಗೆ ಸಮಗ್ರ ಪ್ರಯೋಜನಗಳನ್ನು ಒದಗಿಸಲು ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಎಂಬ ಮೂರು ಯೋಜನೆಗಳನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ ಎಂದರು. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?
ಸಕ್ಷಮ್ ಅಂಗನವಾಡಿಗಳು ಹೊಸ ಪೀಳಿಗೆಯ ಅಂಗನವಾಡಿಗಳಾಗಿವೆ, ಅವುಗಳು ಉತ್ತಮ ಮೂಲಸೌಕರ್ಯ ಮತ್ತು ಶ್ರವಣ, ದೃಶ್ಯ ಸಾಧನಗಳನ್ನು ಹೊಂದಿವೆ. ಆರಂಭಿಕ ಮಗುವಿನ ಬೆಳವಣಿಗೆಗೆ ಸುಧಾರಿತ ವಾತಾವರಣವನ್ನು ಒದಗಿಸುತ್ತವೆ. ಈ ಯೋಜನೆಯಡಿ ಎರಡು ಲಕ್ಷ ಅಂಗನವಾಡಿಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: Budget 2022: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು