– ಕೇಂದ್ರ ಬಜೆಟ್ ಮಂಡನೆ: ಬಿಜೆಪಿ ಸಂಸದರು ಹೇಳಿದ್ದೇನು?
ನವದೆಹಲಿ: ಎರಡನೇ ಬಾರಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಸಿದ ಬಜೆಟ್ ಸುಧಾರಣೆಗೆ ಹೆಚ್ಚು ಒತ್ತು ನೀಡಿದೆ. ಎಲ್ಲಾ ವರ್ಗಕ್ಕೂ ಉತ್ತೇಜನ ನೀಡುವಂಥ ಬಜೆಟ್ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕೃಷಿಗೆ ಪೂರಕವಾದ ಕಿಸಾನ್ ರೈಲ್ ಪರಿಚಯಿಸಲಾಗುತ್ತಿದೆ. ಐಟಿ ಕ್ಷೇತ್ರದ ಬದಲಾವಣೆ ಮಧ್ಯಮ ವರ್ಗದ ಪ್ರಗತಿಗೆ ಪೂರಕವಾಗಿದ್ದು, ಮುನ್ನೊಟ ಹೊಂದಿರುವಂಥ ಬಜೆಟ್ ಇದಾಗಿದೆ ಎಂದರು. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ
Advertisement
Advertisement
ಮೂಲಸೌಕರ್ಯ ಕ್ಷೇತ್ರಕ್ಕೆ 100 ಲಕ್ಷ ಕೋಟಿ ರೂ. ಹೂಡಲಾಗುತ್ತದೆ. ಉದ್ಯೋಗ ಸೃಷ್ಟಿ ಬಗ್ಗೆ ವಾಕ್ಯ ಬರೆದಿಲ್ಲ. ಅಷ್ಟೇ ಪೂರಕವಾದ ಯೋಜನೆಗಳನ್ನು ರೂಪಿಸಲಾಗಿದೆ. ಎಲ್‍ಐಸಿ ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣ ಮಾಡಲ್ಲ. ಬೆಂಗಳೂರಿಗೆ ವಿಶೇಷವಾಗಿ ಸಬ್ ಅರ್ಬನ್ ರೈಲು ಯೋಜನೆ ನೀಡಿದಕ್ಕೆ ನಿರ್ಮಲ ಸೀತರಾಮನ್ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಉದ್ಯೋಗ ಸೃಷ್ಟಿಸುವ ಪ್ರಮುಖ ನಾಲ್ಕು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಹೆಚ್ಚಿನ ಒತ್ತು: ಮೋದಿ
Advertisement
ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಈ ಬಜೆಟ್ ಭಾರತಕ್ಕೆ ಹೊಸ ದಿಕ್ಕನ್ನು ಕೊಟ್ಟಂತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.
Advertisement
2020ರ ಬಜೆಟ್ ಮೂಲಸೌಕರ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಆದ್ಯತೆ ನೀಡಿದೆ. ರಾಜ್ಯವಾರು ಆದ್ಯತೆ ವಲಯಗಳನ್ನು ಗುರುತಿಸಿ ಅಭಿವೃದ್ಧಿಗೆ ಮುಂದಾಗಿದೆ. ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡಿದೆ. ಸಮಾನತೆ ಹಾದಿಯಲ್ಲಿ ಎಸ್‍ಸಿ, ಎಸ್‍ಟಿ ಮತ್ತು ಮಹಿಳೆಯರಿಗೆ ಹೆಚ್ಚು ಅನುದಾನ ನೀಡಿದೆ ಎಂದರು.
ಜಮ್ಮು ಕಾಶ್ಮೀರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ನಾನು ರೈಲು ಸಚಿವ ಆಗಿದ್ದಾಗ ವಿಶೇಷ ಕಾಳಜಿ ತೋರಿಸಿದ್ದ ಕರ್ನಾಟಕದಲ್ಲಿ ಸಬ್ ಅರ್ಬನ್ ರೈಲ್ವೆ ಯೋಜನೆ ಅನುದಾನ ನೀಡಿದೆ ಚೆನೈ ಬೆಂಗಳೂರು ಕಾರಿಡಾರ್ ಕಾಮಗಾರಿಗೆ ವೇಗ ಸಿಕ್ಕಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ ಮೀನುಗಾರರಿಗೆ ಆದ್ಯತೆ ನೀಡಿದ್ದು, ದೇಶದ ಸಮಗ್ರ ಅಭಿವೃದ್ಧಿ ಪೂಕರ ಬಜೆಟ್ ಇದು ಶ್ಲಾಘಿಸಿದರು ಎಂದು ಹೇಳಿದರು.
ಹಿಂದೆದೂ ಕಾಣದ ಬಜೆಟ್ ಅನ್ನು ಈ ಬಾರಿ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಸಂಸದ ಜಿ.ಎಸ್ ಬಸವರಾಜ್ ಹೇಳಿದ್ದಾರೆ. ರೈತರಿಗೆ ಅತ್ಯುತ್ತಮ ಬಜೆಟ್ ನೀಡಿದ್ದು ಮೋದಿಯವರ ಬದ್ಧತೆ ಬಜೆಟ್ ಮೂಲಕ ಕಾಣುತ್ತಿದೆ ಉತ್ತಮ ಬಜೆಟ್ ಗಾಗಿ ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸರ್ವ ವ್ಯಾಪಿ, ಸರ್ವ ಶ್ರೇಷ್ಠ ಬಜೆಟ್ ಇದು ಸಬ್ ಅರ್ಬನ್ ರೈಲು ಯೋಜನೆಗೆ ವಿಶೇಷ ಕೊಡುಗೆ ಸಿಕ್ಕಿದೆ. ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ ಕ್ಷೇತ್ರಕ್ಕೆ ಕೊಟ್ಟಿರುವ ಆದ್ಯತೆಯಲ್ಲಿ ಬೆಂಗಳೂರಿಗೆ ಹೆಚ್ಚು ಫಲಿತಾಂಶ ಸಿಗಲಿದೆ. ಹೊಸ ಶಿಕ್ಷಣ ವ್ಯವಸ್ಥೆ ಜಾರಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿ ವಿನಾಯತಿ ಉತ್ತಮವಾಗಿದೆ ಎಂದು ಮುಚ್ಚುಗೆ ವ್ಯಕ್ತಪಡಿಸಿದರು.