ನವದೆಹಲಿ: ದೇಶದ ಗಡಿ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ರಕ್ಷಣೆಗೆ ಹೆಚ್ಚುವರಿ ಅನುದಾನ ನೀಡುವಾಗಿ ಪಿಯೂಷ್ ಗೋಯಲ್ ತಿಳಿಸಿದ್ದು, ರಕ್ಷಣಾ ಬಜೆಟನ್ನು 3 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿದ್ದಾರೆ.
ಕಳೆದ ವರ್ಷದ ಬಜೆಟ್ ನಲ್ಲಿ 2,95,511 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದರೆ ಈ ವರ್ಷ ಅದನ್ನು ಮತ್ತಷ್ಟು ಹೆಚ್ಚಳ ಮಾಡಿದ್ದಾರೆ. ದೇಶದ ರಕ್ಷಣೆ ಮಾಡುವುದು ಸೈನಿಕರು ನಮ್ಮ ಹೆಮ್ಮೆ ಆಗಿದ್ದು, ನಾವು 3 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದೇವೆ. ಒಂದೊಮ್ಮೆ ಹೆಚ್ಚುವರಿ ಅನುದಾನ ಬೇಕಾದರೂ ನಾವು ನೀಡುತ್ತೇವೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.
Advertisement
1. Defence Budget of 3 lakh crores;
2.We have disbursed 35,000 crore rupees under #OROP scheme in the last few years;
FM : Piyush Goyal#Budget2019 pic.twitter.com/I8jWCU2ukV
— PIB India (@PIB_India) February 1, 2019
Advertisement
ಕಳೆದ 40 ವರ್ಷಗಳಿಂದ ಜಾರಿಯಾಗದೇ ಇದ್ದ ಒನ್ ರ್‍ಯಾಂಕ್ ಒನ್ ಪೆನ್ಷನ್ ಯೋಜನೆ ಜಾರಿ ಮಾಡಿದ್ದು, ಇದಕ್ಕಾಗಿ 35 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಗೋಯಲ್ ತಿಳಿಸಿದರು. ಅಲ್ಲದೇ ಬಜೆಟ್ ಮಂಡನೆ ವೇಳೆ ಈ ಹಿಂದಿನ ಯುಪಿಎ ಸರ್ಕಾರದ ಅನುದಾನವನ್ನು ಪ್ರಸ್ತಾಪ ಮಾಡಿ, ಕೇವಲ 500 ಕೋಟಿ ರೂ.ಗಳನ್ನು ಯೋಜನೆಗೆ ನೀಡಿದ್ದರು ಎಂದು ತಿಳಿಸಿದ್ದಾರೆ. ಯುಪಿಎ ಬಜೆಟ್ ಮಂಡನೆ ವೇಳೆ ಕೇವಲ ಒನ್ ರ್‍ಯಾಂಕ್ ಒನ್ ಪೆನ್ಷನ್ ಯೋಜನೆ ಕುರಿತು ಭರವಸೆಯನ್ನು ಮಾತ್ರ ನೀಡಲಾಗಿತ್ತು. ಆದರೆ ನಾವು ಅದನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv