ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿ ಮಹಿಳೆಯರಿಗೆ ಶಾಕ್ ನೀಡಿದ್ದಾರೆ.
ಬಜೆಟ್‍ನಲ್ಲಿ ಬಂಗಾರದ ಮೇಲಿನ ಆಮದು ಸುಂಕವನ್ನು ಶೇ.10ರಿಂದ 12.5ಕ್ಕೆ ಏರಿಸಲಾಗಿದೆ. ಹೀಗಾಗಿ ಬಜೆಟ್ ಅಧಿಕೃತವಾಗಿ ಜಾರಿಯಾದ ಬಳಿಕ ಚಿನ್ನದ ದರ ಏರಿಕೆಯಾಗಲಿದೆ.
Finance Minister Nirmala Sitharaman: It is also proposed to increase custom duty on gold & other precious metals from 10% to 12.5%. #Budget2019 pic.twitter.com/b3aS6GHBHO
— ANI (@ANI) July 5, 2019
ಎಷ್ಟು ಏರಿಕೆಯಾಗಲಿದೆ?
10 ಸಾವಿರ ರೂ. ಮೌಲ್ಯದ ಚಿನ್ನದ ಆಭರಣಕ್ಕೆ 1 ಸಾವಿರ ರೂ. ಹಣ ಆಮದು ಸುಂಕವಾಗಿ ಪಾವತಿಯಾಗುತ್ತಿತ್ತು. ಈಗ ಶೇ.12.5 ರಷ್ಟು ಏರಿಕೆಯಾಗಿರುವ ಕಾರಣ 1,250 ರೂ. ಹಣವನ್ನು ಪಾವತಿಸಬೇಕಿದೆ.