ಚಮಕ್, ಅಯೋಗ್ಯ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಟಿ.ಆರ್ ಚಂದ್ರಶೇಖರ್, ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಮತ್ತೊಂದು ಬಹುನಿರೀಕ್ಷಿತ ಚಿತ್ರ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ರಿಯಲ್ ಸ್ಟಾರ್ ಉಪೇಂದ್ರ (Upendra) ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರ ‘ಬುದ್ದಿವಂತ 2’. (Buddhivanta 2) ನಿರ್ಮಾಣ ಪೂರ್ಣಗೊಂಡಿದ್ದು ಇದೀಗ ಬಿಡುಗಡೆ ಸಮಯವನ್ನು ಚಿತ್ರದ ನಿರ್ಮಾಪಕರು ಬಹಿರಂಗಗೊಳಿಸಿದ್ದಾರೆ.
ಈ ಬಾರಿಯ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಉಡುಗೊರೆಯಾಗಿ ಚಿತ್ರವನ್ನು ಬೃಹತ್ ಪ್ರಮಾಣದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಹಾಗೂ ಬುದ್ದಿವಂತ -2 ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಟೀಸರ್ ಮೂಲಕವೇ ಚಿತ್ರದ ಬಿಡುಗಡೆಯ ದಿನಾಂಕ ಕೂಡ ಘೋಷಣೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್ ಮಾಡಲ್ಲ- ಪ್ರಿಯಾಮಣಿ ಖಡಕ್ ಉತ್ತರ
ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜಯರಾಮ್ ಮಾಧವನ್ ಬುದ್ಧಿವಂತ 2 ಚಿತ್ರದ ನಿರ್ದೇಶಕರು. ಗುರುಕಿರಣ್ ಸಂಗೀತ ನೀಡಿದ್ದಾರೆ. ಎಸ್ ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಜಾಗೂ ರವಿವರ್ಮ, ವಿಕ್ರಮ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಉಪೇಂದ್ರ ಅವರಿಗೆ ನಾಯಕಿಯರಾಗಿ ಸೋನಾಲ್ (Sonal) ಮೊಂಟೆರೊ ಹಾಗೂ ಮೇಘನಾ ರಾಜ್ (Meghana Raj) ನಟಿಸಿದ್ದಾರೆ. ಶ್ರೀನಗರ ಕಿಟ್ಟಿ (Srinagar Kitty) ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಹೊಸ ಬಗೆಯ ಪಾತ್ರ ಮಾಡಿದ್ದು, ಆ ಪಾತ್ರವೇ ಸಿನಿಮಾದ ವಿಶೇಷತೆಗಳಲ್ಲಿ ಒಂದು ಅಂತಾರೆ ನಿರ್ದೇಶಕರು.
Web Stories