ಪಾಟ್ನಾ: ಬಿಹಾರದ ಬೋಧ್ ಗಯಾದಲ್ಲಿ 15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಬೌದ್ಧ ಸನ್ಯಾಸಿಯನ್ನು ಬುಧವಾರ ಪೋಲಿಸರು ಬಂಧಿಸಿದ್ದಾರೆ.
ಬೋಧ್‍ಗಯಾದಲ್ಲಿನ ಮಾಸ್ತಿಪುರ್ ಗ್ರಾಮದಲ್ಲಿ ಸನ್ಯಾಸಿ, ಪ್ರಸನ್ನ ಜ್ಯೋತಿ ಬೌದ್ಧ ಶಾಲೆ ಮತ್ತು ಧ್ಯಾನ ಕೇಂದ್ರ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದನು. ಆ ಕೇಂದ್ರದಲ್ಲಿ ಅಸ್ಸಾಂನ ಕರ್ಬಿ ಆಂಗ್ಲೋಂಗ್ ಜಿಲ್ಲೆಯ ಮಕ್ಕಳು ಅಧ್ಯಯನ ಮಾಡುತ್ತಿದ್ದರು. ಸನ್ಯಾಸಿ ಈ ಬಾಲಕರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಡೆಪ್ಯೂಟಿ ಎಸ್ಪಿ ರಾಜ್ಕುಮಾರ್ ಷಾ ಅವರು ಈ ಘಟನೆ ಕುರಿತು ಸನ್ಯಾಸಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಹೇಳಿದ್ದಾರೆ.
Advertisement
6 ರಿಂದ 12 ವರ್ಷದ ಚಿಕ್ಕ ಮಕ್ಕಳನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಸನ್ಯಾಸಿ ಒತ್ತಡ ಹಾಕುತ್ತಿದ್ದ ಎಂದು ಬಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬೌದ್ಧ ಶಾಲೆ ಮತ್ತು ಧ್ಯಾನ ಕೇಂದ್ರವನ್ನು ನಡೆಸುತ್ತಿದ್ದ.
Advertisement
#Bihar: A Buddhist monk of Bodh Gaya's Prajna Jyoti Buddhist School & Meditation Centre was taken into police custody y'day for allegedly sexually abusing children of the school. DSP Gaya says 'Children told us they were thrashed,mistreated&sexually abused. We are investigating.' pic.twitter.com/PyvLtQzZwY
— ANI (@ANI) August 29, 2018
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv