ನವದೆಹಲಿ: ಯುದ್ಧ, ಆರ್ಥಿಕ ಅಸ್ಥಿರತೆ, ಭಯೋತ್ಪಾದನೆ, ಧಾರ್ಮಿಕ ಉಗ್ರವಾದ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳಿಗೆ ಭಗವಾನ್ ಬುದ್ಧನ (Buddha) ಆಲೋಚನೆಗಳು ಪರಿಹಾರವನ್ನು ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಹೇಳಿದ್ದಾರೆ.
ದೆಹಲಿಯಲ್ಲಿ (Delhi) ನಡೆದ ಜಾಗತಿಕ ಬೌದ್ಧ ಶೃಂಗಸಭೆಯ (Global Buddhist Summit) ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, ಕೆಲವು ದೇಶಗಳು ಮುಂಬರುವ ಪೀಳಿಗೆಯ ಬಗ್ಗೆ ಯೋಚಿಸದ ಕಾರಣ ಜಗತ್ತು ಈಗ ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ನಾನೇ ಎಂಬ ಅಭಿಮಾನಿಗಳ ಮಾತು ಕೇಳಿ ಖುಷಿಯೂ ಆಗುತ್ತೆ, ನೋವು ಆಗುತ್ತೆ: ಸೋಮಣ್ಣ
Advertisement
ಶ್ರೀಮಂತ ರಾಷ್ಟ್ರಗಳು ದಶಕಗಳ ಕಾಲ ಅವರು ಪ್ರಕೃತಿಯೊಂದಿಗೆ ಮಧ್ಯ ಪ್ರವೇಶಿಸಿ ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಯೋಚಿಸುತ್ತಿದ್ದರು. ಆದರೆ ಈಗ ಅವರು ಅದನ್ನು ಇತರರ ಮೇಲೆ ಹಾಕುತ್ತಿದ್ದಾರೆ. ಭಗವಾನ್ ಬುದ್ಧ ತೋರಿಸಿದ ಮಾರ್ಗವು ಭವಿಷ್ಯ ಮತ್ತು ಸುಸ್ಥಿರತೆಯ ಹಾದಿ ಎಂದು ಒತ್ತಿ ಹೇಳಿದ ಅವರು, ಜಗತ್ತು ಅವರ ಬೋಧನೆಗಳನ್ನು ಅನುಸರಿಸಿದ್ದರೆ, ಅದು ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸುತ್ತಿರಲಿಲ್ಲ ಎಂದಿದ್ದಾರೆ.
Advertisement
Advertisement
ಭಗವಾನ್ ಬುದ್ಧನ ಬೋಧನೆಗಳನ್ನು ಅರಿತು ಬುದ್ಧನ ತತ್ತ್ವಶಾಸ್ತ್ರದಿಂದ ಸ್ಫೂರ್ತಿ ಪಡೆಯುವ ಮೂಲಕ ತಮ್ಮದೇ ಆದ ಜಾಗತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದು ಈ ಸಮಯದ ಅಗತ್ಯವಾಗಿದೆ. ಇದೊಂದೆ ಸಂತೋಷ ಮತ್ತು ಸ್ಥಿರ ಜಗತ್ತಿಗೆ ದಾರಿಯಾಗಿದೆ. ಅಲ್ಲದೆ ಬಡವರು ಮತ್ತು ಸಂಪನ್ಮೂಲಗಳ ಕೊರತೆಯಿರುವ ದೇಶಗಳ ಬಗ್ಗೆ ಜಗತ್ತು ಯೋಚಿಸಬೇಕು ಎಂದು ಕರೆ ಕೊಟ್ಟಿದ್ದಾರೆ.
Advertisement
ಭಗವಾನ್ ಬುದ್ಧನ ಬೋಧನೆಗಳಿಂದ ಪ್ರೇರಿತವಾಗಿರುವ ಭಾರತವು ಜಾಗತಿಕ ಕಲ್ಯಾಣಕ್ಕಾಗಿ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತವು ಬುದ್ಧ ತೋರಿಸಿದ ಮಾರ್ಗವನ್ನು ಅನುಸರಿಸುತ್ತಿದೆ. ಟರ್ಕಿ (Turkey) ಭೂಕಂಪ ಸೇರಿದಂತೆ ಇತರೆ ದೇಶಗಳಿಗೆ ಸಹಾಯವನ್ನು ನೀಡುತ್ತಿರುವ ವಿಚಾರವನ್ನು ಉಲ್ಲೇಖಿಸಿ ಭಾರತವು ಎಲ್ಲರ ನೋವನ್ನು ತನ್ನದೇ ಎಂದು ಪರಿಗಣಿಸಿದೆ ಎಂದು ಹೇಳಿದ್ದಾರೆ.
ಎರಡು ದೇಶಗಳು ಯುದ್ಧದಲ್ಲಿವೆ. ಪ್ರಪಂಚವು ಆರ್ಥಿಕ ಅಸ್ಥಿರತೆಯ ಮೂಲಕ ಸಾಗುತ್ತಿದೆ. ಭಯೋತ್ಪಾದನೆ ಮತ್ತು ಧಾರ್ಮಿಕ ಉಗ್ರವಾದವು ಮಾನವೀಯತೆಯ ಆತ್ಮದ ಮೇಲೆ ಆಕ್ರಮಣ ಮಾಡುತ್ತಿದೆ. ಹವಾಮಾನ ಬದಲಾವಣೆಯ ಕ್ರೂರತೆ ಜಗತ್ತಿನ ಮೇಲೆ ಸುಳಿದಾಡುತ್ತಿದೆ. ಹಿಮನದಿಗಳು ಕರಗುತ್ತಿವೆ, ಪರಿಸರ ನಾಶವಾಗುತ್ತಿದೆ. ಇದಕ್ಕೆಲ್ಲ ಬುದ್ಧನ ಆಲೋಚನೆಗಳು ಪರಿಹಾರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾಷಣದಲ್ಲಿ ಕೆಲವು ವರ್ಷಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ನೆನಪಿಸಿಕೊಂಡ ಅವರು, ಭಾರತವು ಜಗತ್ತಿಗೆ ಯುದ್ಧವನ್ನು ನೀಡಲಿಲ್ಲ. ಅದು ಬುದ್ಧನನ್ನು ನೀಡಿದೆ ಎನ್ನುವುದನ್ನು ಪುನರ್ ಉಚ್ಚರಿಸಿದ್ದಾರೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ಅವಧಿ ಅಂತ್ಯ – ಕಣದಲ್ಲಿ 4 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು