ಸಾಮಾನ್ಯವಾಗಿ ಹುರುಳಿ ಕಾಳಿನ ಸಾರು, ಪಲ್ಯಾ, ಚಟ್ನೆ ರುಚಿ ಹೇಗಿರುತ್ತೆ ಅಂತ ಸವಿದು ತಿಳಿದಿರುತ್ತೀರಾ. ಆದರೆ ಹುರುಳಿ ಕಾಳಿನಿಂದ ಟೀ ಕೂಡ ಮಾಡುವ ವಿಚಾರ ಕೆಲವರಿಗೆ ಗೊತ್ತಿರಲ್ಲ. ಅಷ್ಟೇ ಅಲ್ಲದೆ ಈ ವಿಶೇಷ ಹುರುಳಿ ಟೀ ಹರ್ಬಲ್ ಟೀ ರೀತಿಯೇ ಆರೋಗ್ಯಕರವಾಗಿದ್ದು, ಹುರುಳಿ ಕಾಳು ಅಥವಾ ಹುರುಳಿ ಎಲೆಯಿಂದಲೂ ಟೀ ತಯಾರಿಸಿ ಸವಿಯಬಹುದಾಗಿದೆ.
ಹುರುಳಿ ಟೀ ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಲಾಭವಿದೆ. ಇದು ಮಹುಮೇಹ ನಿಯಂತ್ರಿಸುತ್ತದೆ, ತೂಕ ಇಳಿಸುತ್ತದೆ, ಕಿಡ್ನಿ ಸಮಸ್ಯ ನಿವಾರಿಸಲು ಮದ್ದಾಗಿ ಕೆಲಸ ಮಾಡುತ್ತದೆ, ಹೃದಯದ ಆರೋಗ್ಯ, ಜೀರ್ಣ ಶಕ್ತಿ ವೃದ್ಧಿಸುತ್ತದೆ. ಇದರಲ್ಲಿರುವ ಫ್ಲೇವೋನಾಯ್ಡ್ ಅಂಶ ಆರೋಗಕ್ಕೆ ತುಂಬಾ ಒಳ್ಳೆಯದಾಗಿದೆ.
Advertisement
Advertisement
ಹುರುಳಿ ಟೀ ಮಾಡಲು ಬೇಕಾದ ಸಾಮಾಗ್ರಿ:
Advertisement
* ನೀರು- 3 ಕಪ್
* ಹುರುಳಿ ಕಾಳು- 2 ಚಮಚ
* ಜೇನು ತುಪ್ಪ- 1 ಚಮಚ
Advertisement
ಮಾಡುವ ವಿಧಾನ:
ಮೊದಲು ಸ್ಟವ್ ಹಚ್ಚಿ ಒಂದು ತವಾದಲ್ಲಿ ಹುರುಳಿ ಕಾಳುಗಳನ್ನು ಹುರಿದುಕೊಂಡು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಬಳಿಕ ಚಹಾ ತಯಾರಿಸಲು ಪಾತ್ರೆಯಲ್ಲಿ ನೀರು ಕುದಿಯಲು ಇಡಿ.
ಬಳಿಕ ಕುದಿಯುತ್ತಿರುವ ನೀರಿಗೆ ಹುರಿಡಿಟ್ಟುಕೊಂಡ ಹುರುಳಿ ಕಾಳನ್ನು ಹಾಕಿ 1ರಿಂದ 3 ನಿಮಿಷ ಕುದಿಯಲು ಬಿಡಿ. ಬೇಕಾದರೆ ಹುರಿದ ಹುರುಳಿ ಕಾಳನ್ನು ಪುಡಿ ಮಾಡಿ ಕೂಡ ಚಹಾ ತಯಾರಿಸಬಹುದು. ಅಷ್ಟೇ ಅಲ್ಲದೆ ಹುರುಳಿ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ ಅದನ್ನು ಕೂಡ ಚಹಾ ಮಾಡಲು ಬಳಸಬಹುದು.
ಬಳಿಕ ಹುರುಳಿ ಕಾಳಿನ ಅಂಶ ನೀರಿನಲ್ಲಿ ಬೆರೆತ ಬಳಿಕ ಸ್ಟವನ್ನು ಆಫ್ ಮಾಡಿ. ಲೋಟದಲ್ಲಿ ಚಹಾ ಸೋಸಿ ಕುಡಿಯಿರಿ. ಈ ಚಹಾವನ್ನು ಹಾಗೆ ಕುಡಿಯಬಹುದು, ಇಲ್ಲವಾದರೇ ಇದಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಸೇವಿಸಬಹುದು.
ಆರೋಗ್ಯಕರ ಲಾಭವೇನು?
1. ಕಿಡ್ನಿ ಸಮಸ್ಯೆಗೆ ಮದ್ದು
ಹುರುಳಿ ಕಾಳಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಹಾಗೂ ರುಟಿನ್ ಅಂಶ ಕಿಡ್ನಿ ಸಮಸ್ಯೆಗೆ ರಾಮಬಾಣ. ಪ್ರತಿನಿತ್ಯ ಹುರುಳಿ ಟೀ ಸೇವನೆ ಮಾಡಿದರೆ ಕಿಡ್ನಿ ಸಮಸ್ಯೆ ನಿಧಾನವಾಗಿ ಗುಣವಾಗುತ್ತದೆ.
2. ಮಧುಮೇಹ ನಿಯಂತ್ರಣಕ್ಕೆ ಸಹಕಾರಿ:
ಮಧುಮೇಹಿಗಳು ಹುರುಳಿ ಟೀ ಕುಡಿದರೆ ಅವರ ದೇಹದಲ್ಲಿ ಸಕ್ಕರೆಯಂಶವನ್ನು ಅದು ನಿಯಂತ್ರಿಸುತ್ತದೆ. ಈ ಟೀ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಾಪಾಡಿ, ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಯುತ್ತದೆ.
3. ಹೃದಯದ ಆರೋಗ್ಯಕ್ಕೆ ಉತ್ತಮ:
ಹುರುಳಿ ಟೀ ಪ್ರತಿದಿನ ಕುಡಿಯುವುದರಿಂದ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಇದರಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ಇದು ತಡೆಗಟ್ಟುತ್ತದೆ. ಪಾಶ್ರ್ವವಾಯು, ಹೃದಯಾಘಾತ ಆಗದಂತೆ ನೋಡಿಕೊಳ್ಳುತ್ತದೆ.
4. ಜೀರ್ಣಕ್ರಿಯೆಗೆ ಒಳ್ಳೆದು:
ಹುರುಳಿ ಕಾಳಿನಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಆಗಾಗ ಹೊಟ್ಟೆ ಉಬ್ಬುವ ಸಮಸ್ಯೆ ಇರುವವರು ಹುರುಳಿ ಟೀ ಸೇವಿಸಿದರೆ ಒಳ್ಳೆದು.
5. ತೂಕ ಇಳಿಸುತ್ತದೆ:
ಹುರುಳಿಕಾಳು ತೂಕ ಇಳಿಕೆಯಲ್ಲಿ ಉತ್ತಮ ಕಾರ್ಯ ನಿರ್ವಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಧಿಕ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಮೆಟಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ನೀರಿನ ಅಂಶ ಹೆಚ್ಚಿಸಿ ಬೇಡದ ಪೌಂಡ್ಸ್ ಗಳನ್ನು ನಾಶ ಮಾಡುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.
6. ಕ್ಯಾನ್ಸರ್ ತಡೆಗಟ್ಟುತ್ತದೆ:
ಹುರುಳಿ ಕಾಳಿನಲ್ಲಿರುವ ರುಟಿನ್ ಅಂಶ ಇರುತ್ತದೆ. ಈ ರುಟಿನ್ ಅಂಶ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಫ್ಲೇವೋನಾಯ್ಡ್ ಅಂಶವಿರುವ ಆಹಾರ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕಿಡ್ನಿ, ಗರ್ಭಕೋಶದ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುವುದಿಲ್ಲ.