ಸೋಷಿಯಲ್ ಮೀಡಿಯಾದಲ್ಲಿ ನಟಿ ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ (Arjun Kapoor) ಟ್ರೆಂಡಿಂಗ್ ನಲ್ಲಿದ್ದಾರೆ. ಬಿಟೌನ್ ನಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಮಲೈಕಾ ಮತ್ತು ಅರ್ಜುನ್ ನಡುವೆ ಬ್ರೇಕ್ ಅಪ್ (Breakup) ಆಗಿದೆಯಂತೆ. ಪರಸ್ಪರ ಇಬ್ಬರೂ ಒಪ್ಪಿಗೆ ಪಡೆದುಕೊಂಡೇ ದೂರವಾಗಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲಿಗೆ ಆರು ವರ್ಷದ ಡೇಟಿಂಗ್ ಸಮಾಚಾರಕ್ಕೆ ಕೊನೆ ಮೊಳೆ ಹೊಡೆದಿದ್ದಾರೆ.
Advertisement
ಬಿಟೌನ್ ಅಂಗಳದ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕೂಡ ಒಬ್ಬರಾಗಿದ್ದರು. ಸಾಕಷ್ಟು ವರ್ಷಗಳಿಂದ ಲಿಪ್ ಇನ್ ರಿಲೇಷನ್ ಶಿಪ್‌ನಲ್ಲಿರೋ ಈ ಜೋಡಿ, ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಸಾಕಷ್ಟು ಬಾರಿ ಹೇಳಿಕೊಂಡಿದ್ದರು.
Advertisement
Advertisement
ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು, ಇವರ ಲವ್ವಿ ಡವ್ವಿ ನೋಡಿರೋ ನೆಟ್ಟಿಗರು ಅದೆಷ್ಟೋ ಬಾರಿ ಇವರಿಬ್ಬರದ್ದು ಟೈಮ್ ಪಾಸ್ ಲವ್ ಎಂದು ಹೇಳಿದ್ದು ಇದೆ. ಆದರೆ ಈ ಹಿಂದೆ ಮಲೈಕಾ ತಮ್ಮ ಪ್ರೀತಿಯ ಜೀವನದ ಕುರಿತು ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾನಾಡಿದ್ದರು.
Advertisement
ಪ್ರತಿಯೊಂದು ರಿಲೇಶನ್‌ಶಿಷ್‌ನಲ್ಲಿಯೂ ತನ್ನದೇ ಆದ ರೀತಿ ನೀತಿಗಳಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯುವ ವಿಚಾರ ನಮಗೆಷ್ಟೇ ತಿಳಿದಿರಬೇಕು ಎಂದು ಇನಿಯನ ಜತೆ ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಕೆಲ ದಿನಗಳ ಹಿಂದೆ ಇವರಿಬ್ಬರ ಬ್ರೇಕ್ ಅಪ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಮಲೈಕಾರ ಈ ಮಾತು ಬ್ರೇಕ್ ಅಪ್ ಕಥೆಗೂ ಅಂತ್ಯ ಹಾಡಿತ್ತು.
ನಾವು ಬಹಳಷ್ಟು ವಿಷಯಗಳನ್ನು ಒಟ್ಟಿಗೆ ಚರ್ಚಿಸುತ್ತೇವೆ. ನಾವು ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದೇವೆ ಮತ್ತು ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತೇವೆ. ನಾವು ಭವಿಷ್ಯದಲ್ಲಿ ಒಟ್ಟಿಗೆ ಇರಲು ಬಯಸುತ್ತೇವೆ. ಸಂಬಂಧದಲ್ಲಿ ಯಾವಾಗೂ ನಾವು ಸೇಫ್ ಮತ್ತು ಪಾಸಿಟಿವ್ ಎಂಬ ಭಾವನೆ ಇರಬೇಕು ಎಂದು ಹೇಳಿಕೊಂಡಿದ್ದರು. ಈಗ ನೋಡಿದರೆ ಎಲ್ಲವೂ ಉಲ್ಟಾ ಆಗಿದೆ.