ಬೆಂಗಳೂರು: ಹೆಚ್‌ಎಎಲ್ ಪೊಲೀಸ್ (HAL Police) ಠಾಣೆ ವ್ಯಾಪ್ತಿಯ ಪಿಜಿಯೊಂದರಲ್ಲಿ ತಿಗಣೆ ಔಷಧಿ ವಾಸನೆಗೆ ಬಿಟೆಕ್ ವಿದ್ಯಾರ್ಥಿ (BTech Student ) ಸಾವನ್ನಪ್ಪಿದ್ದಾನೆ.
ಮೃತನನ್ನು ತಿರುಪತಿ (Tirupati) ಮೂಲದ ಪವನ್ ಎಂದು ಗುರುತಿಸಲಾಗಿದೆ. ಆತ ಒಂದು ವಾರದ ಹಿಂದೆ ಊರಿಗೆ ಹೋಗಿದ್ದ. ಈ ಸಮಯದಲ್ಲಿ ತಿಗಣೆ ಔಷಧ ಸಿಂಪಡಿಸಿ ರೂಮ್ ಬಂದ್ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಇಲ್ಲದೇ ಪವನ್ ರೂಮ್‌ಗೆ ಪ್ರವೇಶಿಸಿ ಮಲಗಿದ್ದ. ಇದನ್ನೂ ಓದಿ: ಸೈಟ್ ಕೊಟ್ರೆ ಮಾತ್ರ ಸಂಸಾರ, ಮಗು ಬೇಕಿದ್ರೆ ಮೈದುನನ ಜೊತೆ ಮಲಗು – ಗಂಡ, ಅತ್ತೆಯ ಟಾರ್ಚರ್‌ಗೆ ಉಪನ್ಯಾಸಕಿ ಆತ್ಮಹತ್ಯೆ
ಬೆಳಗ್ಗೆ ವೇಳೆಗೆ ಆತ ಅಸ್ವಸ್ಥನಾಗಿದ್ದ. ಪರಿಶೀಲಿಸಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹೆಚ್ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗಂಡನ ಮನೆಯಲ್ಲಿ ಕಿರುಕುಳ ಆರೋಪ – ನದಿಗೆ ಹಾರಿ ಪ್ರಾಣಬಿಟ್ಟ ತಾಯಿ, ಮಗಳು