ಬೆಂಗಳೂರು: ಇತ್ತೀಚೆಗೆ ಜೆಸಿ ನಗರದಲ್ಲಿ ಹತ್ಯೆಗೀಡಾದ ಸಂತೋಷ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭೇಟಿ ನೀಡಿ ಸಾಂತ್ವನ ಹೇಳಿದ್ರು.
ಚಿನ್ನಪ್ಪ ಗಾರ್ಡನ್‍ನಲ್ಲಿರುವ ಸಂತೋಷ್ ಮನೆಗೆ ಮಾಜಿ ಮಂತ್ರಿ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಹಲವರ ಜೊತೆ ತೆರಳಿದ ಯಡಿಯೂರಪ್ಪ ಮೃತನ ಪತ್ನಿ, ತಾಯಿ ಮತ್ತು ಅಣ್ಣನಿಗೆ ಸಾಂತ್ವನ ಹೇಳಿ 1 ಲಕ್ಷ ರೂ. ಪರಿಹಾರ ನೀಡಿದ್ರು.
Advertisement
ಈ ವೇಳೆ ಬಿಎಸ್ ಯಡಿಯೂರಪ್ಪರನ್ನು ಭೇಟಿಯಾದ ಸ್ಥಳೀಯರು, ಇಲ್ಲಿ ಗಾಂಜಾ ಹೊಡೆಯುವವರ ಹಾವಳಿ ಜಾಸ್ತಿ ಆಗಿದೆ. ಹೆಣ್ಣು ಮಕ್ಕಳು ಓಡಾಟ ಮಾಡೋದು ಕಷ್ಟವಾಗಿದೆ. ಪುಂಡರ ಕಾಟಕ್ಕೆ ಕಡಿವಾಣ ಹಾಕಿ ಅಂತಾ ಮನವಿ ಮಾಡಿದ್ರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಸಾವಿನ ಮಧ್ಯೆ ರಾಜಕೀಯ- ಸಂತೋಷ್ ಮನೆ ಸಮೀಪದಲ್ಲೇ ಸಿಎಂ ಬಿರಿಯಾನಿ ಪಾರ್ಟಿ
Advertisement
Advertisement
ಬಳಿಕ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ತಮ್ಮ ಸ್ವಾರ್ಥಕ್ಕಾಗಿ ಕಾನೂನು ಸುವ್ಯವಸ್ಥೆ ಜೊತೆ ಆಟ ಆಡ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಹತ್ಯೆ ಸೇರಿದಂತೆ 24 ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಕೂಡ ಬೇಜಾವಾಬ್ದಾರಿ ಹೇಳಿಕೆ ನೀಡ್ತಾ ತಾವು ಗೃಹ ಸಚಿವ ಅನ್ನೋದನ್ನೇ ಮರೆತಿದ್ದಾರೆ. ಅನ್ಯಾಯದ ವಿರುದ್ಧ ಮಾತಾಡಿದ್ದಕ್ಕೆ ಸಂತೋಷ್ ಕೊಲೆಯಾಗಿದ್ದಾನೆ. ಇನ್ನೆಷ್ಟು ಕೊಲೆ ಆಗಬೇಕು ಅಂತ ಸಿಎಂ ಹಾಗೂ ಗೃಹ ಸಚಿವರ ಮನಸ್ಸಿನಲ್ಲಿ ಇದೆಯೋ ಗೊತ್ತಿಲ್ಲ. ಜನರೇ ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು ಅಂದ್ರು. ಇದನ್ನೂ ಓದಿ: ಬಿಜೆಪಿಯವರು ಸತ್ತ ಮೇಲೆ ಎಲ್ಲರನ್ನೂ ಪಕ್ಷಕ್ಕೆ ಸೇರಿಸುತ್ತಾರೆ: ರಾಮಲಿಂಗಾ ರೆಡ್ಡಿ ವ್ಯಂಗ್ಯ
Advertisement
ಸಚಿವ ಯುಟಿ ಖಾದರ್ ಮನೆಯಲ್ಲಿ ಸಿಎಂ ಇದ್ರೂ, ಸಂತೋಷ್ ಮನೆಗೆ ಭೇಟಿ ನೀಡಿಲ್ಲ. ಸಿದ್ದರಾಮಯ್ಯರಿಗೆ ಕನಿಕರ, ಸೌಜನ್ಯ ಎಲ್ಲಾ ಮರೆತು ಹೋಗಿದೆ. ಸಿದ್ದರಾಮಯ್ಯ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಅನ್ನೋದು ಮರೆತಿದ್ದಾರೆ. ಪಕ್ಕದಲ್ಲೇ ಇದ್ರೂ ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳುವ ಸಮಯ ಅವರಿಗಿಲ್ಲ. ಸಿದ್ದರಾಮಯ್ಯ ನಡವಳಿಕೆ ಜನರು ನೋಡ್ತಿದ್ದಾರೆ. ಬೇಜಾವಾಬ್ದಾರಿ ಮುಖ್ಯಮಂತ್ರಿ ರಾಜ್ಯ ಆಳ್ತಿದ್ದಾರೆ. ಇನ್ನು ಮೂರು ತಿಂಗಳು ಇದನ್ನ ಸಹಿಸಿಕೊಳ್ಳಬೇಕು. ಜನರೇ ಇವರಿಗೆ ಮುಂದೆ ಪಾಠ ಕಲಿಸ್ತಾರೆ ಅಂತ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಬಂಟಿಂಗ್ಸ್ ಗಲಾಟೆಗೆ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ: ಪ್ರತಾಪ್ ಸಿಂಹ
ಜೆ.ಸಿ. ನಗರದ ನಿವಾಸಿಯಾಗಿರೋ 28 ವರ್ಷದ ಸಂತೋಷ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಬಿಜೆಪಿ ಪರ ಓಡಾಡಿಕೊಂಡಿದ್ದರು. ಬುಧವಾರ ರಾತ್ರಿ ಸುಮಾರು 7:30 ರ ಹೊತ್ತಿಗೆ ಸಂತೋಷ್ ತಮ್ಮ ಮನೆ ಬಳಿ ಇದ್ದ ಬೇಕರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಅದೇ ಏರಿಯಾದ ವಾಸಿಮ್, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಎಂಬವರು ಕೂಡ ಅಲ್ಲೇ ಟೀ ಕುಡಿಯುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದು ವಾಸಿಮ್ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಇರಿದಿದ್ದ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದರು. ಸದ್ಯ ಪ್ರಕರಣ ಸಂಬಂಧ ವಾಸಿಂ, ಫಿಲಿಪ್ಸ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ – ಗಾಂಜಾ ಸೇದಬೇಡಿ ಅಂದಿದ್ದಕ್ಕೆಯೇ ಹತ್ಯೆ!
https://www.youtube.com/watch?v=WeYiwlokXEU