ಬೆಂಗಳೂರು: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗ್ಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಯಾರೊಬ್ಬರು ಸಮುದಾಯಗಳನ್ನು ಕೆರಳಿಸುವ ಹೇಳಿಕೆ ನೀಡಬಾರದು. ನಾನು ಅಂತಹ ಯಾವುದೇ ಹೇಳಿಕೆಗಳನ್ನು ಒಪ್ಪುವುದಿಲ್ಲ. ಅನಂತ ಕುಮಾರ್ ಹೆಗ್ಡೆಗೆ ನಾನು ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಲಾಗಿದೆ ಅಂತ ಖಾಸಗಿ ವಾಹಿನಿಯೊಂದರಲ್ಲಿ ಬಿಎಸ್‍ವೈ ಹೇಳಿದ್ದಾರೆ.
ಇತ್ತೀಚಿಗಷ್ಟೇ ಅನಂತ್ ಕುಮಾರ್ ಹೆಗ್ಡೆ ಎಲ್ಲಿವರೆಗೂ ಇಸ್ಲಾಂ ಬೇರುಗಳನ್ನು ಕೀಳುವುದಿಲ್ಲವೋ ಅಲ್ಲಿವರೆಗೂ ಭಯೋತ್ಪಾದನೆ ಬೇರ್ಪಡೆ ಅಸಾಧ್ಯ ಅಂತ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಗಳನ್ನು ನೀಡಬಾರದು. ಈ ಬಗ್ಗೆ ಸಂಸತ್‍ನಲ್ಲಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ ಅಂತ ಬಿಎಸ್‍ವೈ ಸ್ಪಷ್ಟಪಡಿಸಿದ್ರು.