– ಆಡಿಯೋ ಬಗ್ಗೆ ಪ್ರತಿಕ್ರಿಯಿಸಲು ಬಿಎಸ್‍ವೈ ನಕಾರ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕ ಶಿವನಗೌಡ ಅವರು ಮಾತನಾಡಿರುವ ಆಡಿಯೋ ಸದ್ಯ ಸುದ್ದಿಯಲ್ಲಿದ್ದು, ಈ ಆಡಿಯೋವನ್ನು ರಾಜಕೀಯ ಲಾಭಕ್ಕಾಗಿ ಸಿಎಂ ಕುಮಾರಸ್ವಾಮಿಯವರು ತಿರುಚಿದ್ದಾರೆ ಎಂದು ಬಿಎಸ್‍ವೈ ಪುತ್ರ ವಿಜಯೇಂದ್ರ ಆರೋಪಿಸಿದ್ದಾರೆ.
ಆಪರೇಷನ್ ಕಂಪ್ಲೀಟ್ ಆಡಿಯೋ ಕುರಿತು ಪಬ್ಲಿಕ್ ಟಿವಿ ಜೊತೆ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನಾನು ಆಪರೇಷನ್ ಕಮಲದಲ್ಲಿ ತೊಡಗಿಲ್ಲ. ಇಡೀ ಆಡಿಯೋವನ್ನು ತಿರುಚಲಾಗಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಕಿಡಿಕಾರಿದ್ದಾರೆ.
Advertisement
Advertisement
ಈ ಆಡಿಯೋಗೆ ಸಿಎಂ ಕುಮಾರಸ್ವಾಮಿಯವರೇ ಸೂತ್ರದಾರಿ. ಈ ಪ್ರಕರಣದಲ್ಲಿ ಅವರ ಪಾತ್ರ ಎಷ್ಟಿದೆ ಎಂದು ತನಿಖೆ ನಂತರ ಗೊತ್ತಾಗಲಿದೆ. ಮಾಧ್ಯಮದಲ್ಲಿ ನನ್ನ ಹೆಸರು ಪದೇ ಪದೇ ಪ್ರಸ್ತಾಪ ಆಗುತ್ತಿದೆ. ನಮ್ಮ ತಂದೆ ಯಡಿಯೂರಪ್ಪ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದೆ. ನಾನು ಅವರ ಮಗನಾಗಿರುವುದರಿಂದ ನಾನು ಈ ಪ್ರಕರಣದಲ್ಲಿ ಭಾಗಿಯಾಗಿದ್ದೇನೆ ಎಂದು ಎಲ್ಲರು ಮಾತನಾಡೋದು ಸಹಜ. ಆದ್ರೆ ನಾನು ಯಾವುದರಲ್ಲೂ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುಡುಗಾಟಿಕೆ ಆಡ್ಬಿಟ್ರಿ ನೀವು- ಬಿಎಸ್‍ವೈ ಆಡಿಯೋಗೆ ಹೈಕಮಾಂಡ್ ಕೆಂಡಾಮಂಡಲ
Advertisement
Advertisement
ಈ ಆಡಿಯೋ ಕೇಳಿದಾಕ್ಷಣ ಕೊಲೆಯಾಗಿದೆ ಎಂದು ತೀರ್ಮಾನ ಮಾಡಲು ಆಗಲ್ಲ. ಸಿಎಂ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಸಿಎಂ ಅವರ ಸ್ಥಾನವನ್ನು ಉಳಿಸಿಕೊಳ್ಳಲು ಆಡಿಯೋವನ್ನು ತಿರುಚಿದ್ದಾರೆ. ಈ ಪ್ರಕರಣ ಎದುರಿಸಲು ನಾವು ರೆಡಿ ಆಗಿದ್ದೇವೆ. ಹೈಕಮಾಂಡ್ ಈ ಬಗ್ಗೆ ಕ್ಲಾಸ್ ತಗೊಂಡಿದ್ದಾರೆ ಎನ್ನುವ ಬಗ್ಗೆ ಗೊತ್ತಿಲ್ಲ ಎಂದು ಸಿಎಂ ವಿರುದ್ಧ ವಿಜಯೇಂದ್ರ ಹರಿಹಾಯ್ದಿದ್ದಾರೆ.
ಆದ್ರೆ ಕಂಪ್ಲೀಟ್ ಆಡಿಯೋ ಕುರಿತು ಬಿಎಸ್‍ವೈ ಮಾತ್ರ ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಯಾವುದೇ ಮಾತನಾಡದೇ ತಮ್ಮ ಕಾರು ಹತ್ತಿ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv