ಬೆಂಗಳೂರು: ನಗರದ ಅರಮೆನೆ ಮೈದಾನದಲ್ಲಿ ನಡೆಯುತ್ತಿರೋ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ತಮ್ಮ ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.
ಪ್ರಧಾನಿ ಮೋದಿ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯ ಪರಿವರ್ತನಾ ಯಾತ್ರೆಗೆ ದೊಡ್ಡ ಜನರನ್ನ ಸೇರಿಸಲು ಸಾಧ್ಯವಾಯ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತಾ ಸಂಕಲ್ಪ ತೊಟ್ಟು ಜನರು ಬಂದಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಚಾರ ಮುಚ್ಚಿಹಾಕಲು ಎಸಿಬಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳು ನಡೆದಿವೆ. 3,500 ರೈತರು ಆತ್ಮಹತ್ಯೆ ಮಾಡಿಕೊಂಡರು ಸಿಎಂ ಸಿದ್ದರಾಮಯ್ಯ ಗಾಢ ನಿದ್ರೆಯಲ್ಲಿದ್ದಾರೆ. ಪ್ರಧಾನಿ ಮೋದಿ ದೇಶವನ್ನ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ಮೋದಿ ಕಾರ್ಯಸಾಧನೆಯನ್ನು ಇಡೀ ವಿಶ್ವವೇ ಮೆಚ್ಚಿದೆ. ಜಗತ್ತೇ ಒಂದು ಕುಟುಂಬ ಎಂಬುದು ಪ್ರಧಾನಿ ಮನಸ್ಥಿತಿ. ಕಾಂಗ್ರೆಸ್ ಸರ್ಕಾರ ರೈತರಿಗೆ ದ್ರೋಹ ಎಸಗಿದೆ. ಕೃಷ್ಣ ಯೋಜನೆ ಪೂರ್ಣಗೊಳಿಸುವ ಭರವಸೆಯನ್ನ ನೀಡುತ್ತೇವೆ. ಮೋದಿ ಜೊತೆ ಹೆಜ್ಜೆ ಹಾಕಲು ರಾಜ್ಯದಲ್ಲಿ ಸರ್ಕಾರ ಬೇಕಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ ಅಂದ್ರು.
Advertisement
Advertisement
ಕೊಡುವ ಕೈ ಮೋದಿ ಇರುವಾಗ ತೆಗೆದುಕೊಳ್ಳುವ ಕೈ ಇಲ್ಲ. ಪ್ರಧಾನಿ ಮೋದಿಯವರ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ಮಾಂಸ ತಿಂದ್ರು ಅಂತಾ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್‍ಗೆ ಭಾರತ ರತ್ನ ನೀಡಲು ಬಾರದ ಕಾಂಗ್ರೆಸ್‍ಗೆ ಧಿಕ್ಕಾರ. ಹೀಗಾಗಿ ದೀನ ದಲಿತರು ಒಂದೇ ಒಂದು ಮತವನ್ನು ಕಾಂಗ್ರೆಸ್ ಗೆ ಕೊಡಬಾರದು ಎಂದು ಹೇಳಿದರು.
ನಮ್ಮ ಸರ್ಕಾರ ಬೆಂಗಳೂರಿಗೆ ಸಬ್ ಅರ್ಬನ್ ಕೊಟ್ಟ ಸರ್ಕಾರವಾಗಿದೆ. ಸೂಲಿಗಿತ್ತಿ ನರಸಮ್ಮನವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರೋದು ಹೆಮ್ಮೆಯ ಸಂಗತಿಯಾಗಿದೆ. ಪ್ರಧಾನಿ ಕನಸನ್ನ ನನಸು ಮಾಡುತ್ತೇನೆಂಬ ಭರವಸೆ ಕೊಟ್ಟಿದ್ದೇನೆ. ಕಾಂಗ್ರೆಸ್ ಮುಕ್ತ ಭಾರತಬನ್ನಾಗಿ ಮಾಡೇ ಮಾಡುತ್ತೇವೆ. 3 ತಿಂಗಳಲ್ಲಿ ಮನೆಮಠ ಬಿಟ್ಟು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮ ಪಡುತ್ತೇನೆ. ಬಿಜೆಪಿ 150 ಸೀಟ್ ಗೆಲ್ಲಿಸಲು ಕೈ ಜೋಡಿಸಿ ಎಂದು ಬಿಎಸ್ ವೈ ಇದೇ ವೇಳೆ ಮನವಿ ಮಾಡಿಕೊಂಡರು ಅಂದ್ರು.
ಕಾರ್ಯಕ್ರಮಕ್ಕೆ ಮೋದಿಯವರ ಆಗಮನವಾಗುತ್ತಿದ್ದಂತೆಯೇ ಕಾರ್ಯಕರ್ತರು ಜೈಕಾರ ಹಕಿದ್ರು. ಮೋದಿ ವೇದಿಕೆ ಹತ್ತುತ್ತಿದ್ದಂತೆಯೇ ಹಿಂದೆ ಇದ್ದ ಎಸ್.ಎಂ.ಕೃಷ್ಣರನ್ನು ಬಿಸೆ ವೈ ಅವರು ಕೈ ಹಿಡಿದು ಮುಂದೆ ಕರೆತಂದ್ರು. ಅದನ್ನು ಗಮನಿಸಿದ ಮೋದಿಯವರು ಮೊದಲು ಕೃಷ್ಣರಿಗೆ ನಮಸ್ಕರಿಸಿ ಮಾತನಾಡಿಸಿದ್ರು. ಬಳಿಕ ಮೋದಿಯವರಿಗೆ ಬಿಸೆ ವೈ ಹೂವಿನ ಹಾರ, ಶಾಲು ಹೊದಿಸಿ, ಕೆಂಪೇಗೌಡ ಸ್ಮರಣಿಕೆ ನೀಡಿ ಗೌರವಿಸಿದ್ರು.