ವಿಜಯಪುರ: ಮೇ 17ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ನಿಡಿರುವ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಯುವಂತೆ ಮಾಡುತ್ತಿದ್ದಾರೆ. ಬಿಎಸ್‍ವೈ ಅವರನ್ನು ನೋಡಿದ್ರೆ ಪಾಪ ಕೆಟ್ರು ಅನಿಸುತ್ತದೆ ಎಂದರು.
ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರಿಗೆ ಅರಳು ಮರಳು ಆಗಿ, ಹತಾಶರಾಗಿದ್ದಾರೆ. ಅಲ್ಲದೇ, ಅವರು ಮುಖ್ಯಮಂತ್ರಿ ಆಗುವುದಿಲ್ಲ. ಅವರ ಮುಂದಿನ ದಿನಗಳ ಬಗ್ಗೆ ದೇವರಲ್ಲಿ ಕೇಳಿಕೊಳ್ತೇನೆ. ಅವರ ನಿವೃತ್ತಿ ಜೀವನ ಸುಖಕರವಾಗಿ 100 ವರ್ಷ ಬಾಳಲಿ. ಹಾಗೇ ನನ್ನ ಹಾಗೇ ಅವರಿಗೂ ಬಿಪಿ ಜಾಸ್ತಿ ಇದೆ. ಅದಕ್ಕಾಗಿಯೇ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡಿ ಆರಾಮಾಗಿರಲಿ ಎಂದು ಸಲಹೆ ನೀಡಿದರು.