ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದ್ಕಡೆ, ಸಿಎಂ ಕುಮಾರಸ್ವಾಮಿ ಮತ್ತೊಂದು ಕಡೆ, ಅವರೇ ಬಡಿದಾಡಿಕೊಂಡು ಸಾಯ್ತಿದ್ದಾರೆ. ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತೆ ಬಸವರಾಜ್ ಬೊಮ್ಮಾಯಿ ಅವರನ್ನು ಅಮಿತ್ ಶಾ ಅವರನ್ನು ಭೇಟಿಯಾಗಲು ಹೋಗಿದ್ದೆವು. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಇದೇ ತಿಂಗಳ 29ರಂದು ರಾಜ್ಯ ಕಾರ್ಯಕಾರಣಿ ಸಭೆ ಕರೆಯಲಿದ್ದೇವೆ. ಹೀಗಾಗಿ ಅದಕ್ಕಾಗಿ ಪೂರ್ವಭಾವಿ ಸಿದ್ಧತೆ ಹಾಗೂ ಇತರ ಕೆಲವೊಂದಷ್ಟು ವಿಚಾರಗಳ ಕುರಿತು ಚರ್ಚಿಸಿದ್ದೇವೆ. ಮಾತ್ರವಲ್ಲದೇ ಸಾಧ್ಯವಾದ್ರೆ ಕಾರ್ಯಕ್ರಮಕ್ಕೆ ತಾವೇ ಬರಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಅಂತ ಹೇಳಿದ್ರು.
Advertisement
Advertisement
ಒಂದು ವೇಳೆ ಅವರು ಬರದೇ ಇದ್ರು ಯಾರದ್ರು ಪ್ರಮುಖರನ್ನು ಕಳುಹಿಸಿಕೊಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ರಾಜಕೀಯ ಜಂಜಾಟಕ್ಕೂ ನಮಗೂ ಸಂಬಂಧವಿಲ್ಲ. ಇನ್ನು ಮಾಧ್ಯಮದಲ್ಲಿ ಬರುತ್ತಿರುವ ವಿಚಾರಗಳಿಗೆ ಕವಡೆ ಕಾಸಿನಷ್ಟೂ ಕಿಮ್ಮತ್ತಿಲ್ಲ. ಅವರವರೇ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಅಧಿವೇಶನ ಕರೆಯಲು 15 ದಿವಸ ಸಮಯ ಕೊಡಬೇಕು. ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವಂತಹ ಸಂಪ್ರದಾಯ ಅದಾಗಿದೆ ಅಂದ್ರು.
Advertisement
ಯಾವುದೇ ಸ್ಪಷ್ಟತೆ ಇಲ್ಲದಿರುವಂತಹ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅವರು ಒಂದು ಹೇಳಿಕೆ ಕೊಟ್ಟಿದ್ದಾರೆ. ಇತ್ತ ಕುಮಾರಸ್ವಾಮಿ ಅವರು ಒಂದು ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಗೊಂದಲದ ರಾಜಕೀಯದ ಮಧ್ಯೆ ನಾವು ಮಧ್ಯಪ್ರವೇಶಿಸಲು ಇಷ್ಟಪಡಲ್ಲ. ನಮ್ಮ ಬಿಜೆಪಿ ನಾಯಕರುಗಳಿಗೆ ವಿನಂತಿ ಮಾಡಿಕೊಂಡಿದ್ದೇನೆ. ಇಂತಹ ಸಂದರ್ಭದಲ್ಲಿ ಯಾವುದೇ ಮಾತನಾಡದೇ ಮೌನವಾಗಿದ್ದುಕೊಂಡು ರಾಜಕೀಯ ಬೆಳವಣಿಗೆಗಳನ್ನು ಗಮನಿಸುವಂತೆ ಹೇಳಿದ್ದೇನೆ. ಪ್ರತಿಪಕ್ಷವಾಗಿ ನಮ್ಮ ಕೆಲಸವನ್ನು ಗೌರವಯುತವಾಗಿ ಮಾಡೋಣ ಅಂತ ಹೇಳಿರುವುದಾಗಿ ಬಿಎಸ್‍ವೈ ತಿಳಿಸಿದ್ದಾರೆ.
Advertisement
ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಅಪೇಕ್ಷೆಯಂತೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶದಿಂದ ಈಗಿಂದ್ಲೇ ಸಿದ್ಧತೆಗಳನ್ನು ಮಾಡುತ್ತೇವೆ ಅಂದ್ರು.
https://www.youtube.com/watch?v=tqPsB0VO3ek