ಮೈಸೂರು: ಯೋಧರ ಬಲಿದಾನವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ರಾಜಕಾರಣಕ್ಕೆ ಬಳಸಿಲ್ಲ. ಅವರ ಹೇಳಿಕೆಯನ್ನು ಕೆಲವರು ತಿರುಚಿ ಅಪಾರ್ಥ ಮಾಡಿಕೊಂದಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಅವರು ತಮ್ಮ ತಂದೆಯ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 22 ಸೀಟನ್ನು ಗೆಲ್ಲುತ್ತೇವೆ ಎನ್ನುವ ಮಾತನ್ನು ಬಿಎಸ್‍ವೈ ಅವರು ನಿನ್ನೆ ಮೊನ್ನೆಯಿಂದ ಹೇಳುತ್ತಿಲ್ಲ. ಸಮ್ಮಿಶ್ರ ಸರ್ಕಾರ ಬರುವ ಮೊದಲು ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಾಗಲು ಬಿಜೆಪಿ ರಾಜ್ಯದಲ್ಲಿ 22 ಸೀಟು ಗೆದ್ದು ಪ್ರಧಾನಿ ಮೋದಿಯವರಿಗೆ ಮತ್ತೆ ಪ್ರಧಾನಿಯಾಗಲು ಸಹಾಯ ಮಾಡಬೇಕು ಎಂದಿದ್ದರು. ಆದ್ರೆ ಬಿಎಸ್‍ವೈ ಅವರ ಹೇಳಿಕೆಯನ್ನು ಕೆಲವರು ತಿರುಚಿ, ಅದಕ್ಕೆ ಬೇರೆ ಅರ್ಥವನ್ನೇ ಕಲ್ಪಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.
ಸುಮಲತಾ ಅವರು ಮಂಡ್ಯದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ಅಭ್ಯರ್ಥಿಯೇ ಮಂಡ್ಯದಲ್ಲಿ ಸ್ಪರ್ಧೆ ಮಾಡ್ತಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ 2 ಲಕ್ಷದಷ್ಟು ಮತ ಪಡೆದಿದೆ. ಈ ಬಾರಿ ಮಂಡ್ಯದಲ್ಲಿ ಗೆಲ್ಲುವ ವಿಶ್ವಾಸ ಇದೆ. ನಾನು ಎಲ್ಲಿಯೂ ಲೋಕಸಭಾ ಅಭ್ಯರ್ಥಿ ಅಲ್ಲ. ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಮಾಡ್ತಿನಿ ಎಂದು ಬಿಜೆಪಿಯಿಂದ ಸುಮಲತಾ ಅವರನ್ನು ಬೆಂಬಲಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv