ಬೆಂಗಳೂರು: ಮೂರು ಪಕ್ಷಗಳ ನಡುವೆ ಪೈಪೋಟಿ ಇದೆ. ಕೆಲವು ಭಾಗಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗು ಕೆಲವು ಭಾಗಗಳಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ಇದೆ. ಕುಮಾರಸ್ವಾಮಿ ನಾನೇ ಕಿಂಗ್ ಅಂತಿದ್ದಾರೆ. ಆದರೆ ಎರಡು ಪಕ್ಷಗಳ 2 ವರ್ಷಗಳ ಕಾರ್ಯ ವೈಖರಿ ನೋಡಿದರೆ ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಜೊತೆ ಪ್ರೆಸ್ ಕ್ಲಬ್ ನಲ್ಲಿ ಸಂವಾದ ನಡೆಯಿತು.
Advertisement
ಸಂವಾದದಲ್ಲಿ ಸಿಎಂ ಮಾತು
* ಯಡಿಯೂರಪ್ಪ ಅವರನ್ನ ಸಿಎಂ ಅಭ್ಯರ್ಥಿ ಮಾಡಿರುವುದೇ ನನಗೆ ಪ್ಲಸ್ ಪಾಯಿಂಟ್. ಇದು ಸಿದ್ದರಾಮಯ್ಯ ವರ್ಸಸ್ ಮೋದಿ ಅಲ್ಲ. ಸಿದ್ದರಾಮಯ್ಯ ಆಂಡ್ ಯಡಿಯೂರಪ್ಪ ನಡುವಿನ ಫೈಟ್. ಕರ್ನಾಟಕದಲ್ಲಿ ಮೋದಿ ಯಾವುದೇ ಮ್ಯಾಜಿಕ್ ಮಾಡೋದಕ್ಕೆ ಆಗಲ್ಲ. ನನ್ನ ಕ್ಯಾಂಪ್ ಮೋದಿ ಕ್ಯಾಂಪೇನ್ ಗಿಂತ ಹೆಚ್ಚು.
Advertisement
* 24 ಜನ ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ ಅಂತ ಮೋದಿ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಹೇಳಿದ್ದಾರೆ. 12 ಜನ ಮಾತ್ರ ಪಿಎಫ್‍ಐ ಮತ್ತು ಎಸ್‍ಡಿಪಿಐ ಕಾರ್ಯಕರ್ತರಿಂದ ಹಿಂದು ಕಾರ್ಯಕರ್ತರ ಕೊಲೆ ಆಗಿದೆ. ಉಳಿಕೆ ವೈಯುಕ್ತಿಕ ಕಾರಣಗಳಿಂದ ಕೊಲೆ ಆಗಿದೆ. ಬೇರೆ ಬೇರೆ ಕಾರಣಗಳಿಂದ ಕೊಲೆ ಆಗಿದೆ. ಹಿಂದು ಸಂಘಟನೆ ಗಳಿಂದಲೂ ಹತ್ತು ಕೊಲೆಯಾಗಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರ ಕೊಲೆಗೆ ಬಿಜೆಪಿ ಕಾರ್ಯಕರ್ತರೇ ಕಾರಣರಾಗಿದ್ದಾರೆ.
Advertisement
* ಕಳೆದ ಬಾರಿ ಮೈಸೂರು, ಚಾಮರಾಜನಗರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ 7 ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಾಧಿಸಿದೆ. ಈ ಬಾರಿ ಸಹ ಯಾವುದೇ ಬದಲಾವಣೆ ಆಗಿಲ್ಲ. ಆದರೂ ನಾವು ಗೆಲ್ಲುತ್ತೇವೆಂದು ಬಿಜೆಪಿ ಹೇಳುತ್ತಿದೆ.
Advertisement
* ಕೊಡಗು ಜಿಲ್ಲೆಯ ಎರಡು ಕ್ಷೇತ್ರ ಬಿಟ್ಟರೆ ಉಳಿದ ಎಲ್ಲ ಕಡೆ ಕಾಂಗ್ರೆಸ್ ಐದು ಆರು ಸ್ಥಾನ ಗಳನ್ನ ಗೆದ್ದಿದೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಾವು ಅಧಿಕಾರಕ್ಕೆ ಬರುತ್ತೇವೆಂದು ಹೇಳಿಕೊಂಡು ತಿರುಗುತ್ತಿರುವುದು ವ್ಯರ್ಥ.
* ಪ್ರಧಾನಿ ನರೇಂದ್ರ ಮೋದಿ ಅವರದ್ದು ಕೀಳು ಅಭಿರುಚಿಯ ಪ್ರಚಾರ. ನನಗೆ ಮಾತ್ರ ವಂಶಪಾರಂಪರ್ಯ ರಾಜಕಾರಣ ಅಂತಾರೆ. ಬಿಜೆಪಿ ಅವರಲ್ಲಿಯೂ ನಿಂತಿಲ್ಲವಾ.? ಮೋದಿ ಪ್ರಧಾನಿ ರೀತಿಯಲ್ಲಿ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಹಾಗೇ ಮೋದಿ ಅವರು ಮಾತಾಡಲೇ ಇಲ್ಲ.
* ನಾವೆಲ್ಲಾ ಬಿಜೆಪಿಯವರು ಸುಸಂಸ್ಕೃತರು ಅಂತಾ ಅಂದುಕೊಂಡಿದ್ದೆವು. ಆದರೆ ನರೇಂದ್ರ ಮೋದಿ ಸೇರಿ ಎಲ್ಲ ಬಿಜೆಪಿ ಮುಖಂಡರು ಕೆಟ್ಟದ್ದಾಗಿ, ವೈಯಕ್ತಿಕವಾಗಿ ಮಾತನಾಡುತ್ತಾರೆ. ಯಡಿಯೂರಪ್ಪ, ಕುಮಾರಸ್ವಾಮಿ ಆಧಾರವಿಲ್ಲದ ಆರೋಪ ಮಾಡಿದಾಗ, ಅನಿವಾರ್ಯವಾಗಿ ನಾವು ಮಾತಾಡಲೇ ಬೇಕು.
* ಸೀದಾರೂಪಯ್ಯ ಅಂದ್ರೆ ಏನು ಹೇಳೋದು, 10% ಸರ್ಕಾರ ಅಂದರೆ ಸುಮ್ನೆ ಇರೋಕಾಗುತ್ತಾ? ಅವರಿಗೆ ಮಾಹಿತಿ ನೀಡಲಿಕ್ಕೆ ಸಾಕಷ್ಟು ಎಜೆನ್ಸಿಗಳಿವೆ. ಅವುಗಳಿಂದ ಮಾಹಿತಿ ಪಡೆದಾದರೂ ಮಾತಾಡಬಹುದಿತ್ತು. ಸಿದ್ದರಾಮಯ್ಯ 2+1 ಅಂತೆ, ಇದರಲ್ಲಿ ಯಾವುದಾದರೂ ಲಾಜಿಕ್ ಇದೆಯಾ? ಯಡಿಯೂರಪ್ಪ + ಮಗ, ಶಶಿಕಲಾ ಜೊಲ್ಲೆ + 1, ಗೋವಿಂದ ಕಾರಜೋಳ + ಮಗ, ರಾಮಚಂದ್ರೇಗೌಡ + ಮಗ. ಹೀಗಿರುವಾಗ ನಮ್ಮ ಬಗ್ಗೆ ಮಾತನಾಡುತ್ತಾರೆ.
* ಮಹದಾಯಿ ವಿಚಾರದಲ್ಲಿ ಜವಾಬ್ದಾರಿ ಬೇರೆಯವರ ಮೇಲೆ ಹಾಕುತ್ತಾರೆ. ಸೋನಿಯಾ ಗಾಂಧಿ ಪ್ರಧಾನಿಯಾಗಿರಲಿಲ್ಲ. ನಾಲ್ಕು ವರ್ಷ ಆಡಳಿತ ಮಾಡಿರುವವರು ಇವರು ತಾನೇ? ಸೋನಿಯಾ ಗಾಂಧಿ ಪ್ರಧಾನಿಯಾಗಿದ್ರಾ? ದಾರಿತಪ್ಪಿಸುವ ಹೇಳಿಕೆಗಳಿಂದ ವಾಕರಿಕೆ ಬರುತ್ತಿದೆ. ರಾಜ್ಯದ ಜನ ಇದನ್ನ ಒಪ್ಪಿಕೊಳ್ಳುವುದಿಲ್ಲ.
* ಸಾಲ ಮನ್ನಾ ಮಾಡಿ ಅಂದರೆ ಮಾಡಲ್ಲ. ರಾಜ್ಯದವರೇ ಮಾಡಿಕೊಳ್ಳಿ ಅಂತಾರೆ, ರಾಜ್ಯ ಬಿಜೆಪಿ ಅವರು ಹಂಗೆ ಕುಣಿತಾರೆ. ಪ್ರಧಾನಿ ಬಳಿ ನಿಯೋಗ ಹೋದರೆ ತುಟಿ ಬಿಚ್ಚಲ್ಲ. ಅಚ್ಛೇ ದಿನ ಯಾವಾಗ ಬರುತ್ತೆ? ಬರಲೇ ಇಲ್ಲ. ನಿಮ್ ಮಾತಿಗೂ, ಆರ್ಥಿಕ ಪರಿಸ್ಥಿತಿಗೂ ಏನಾದರೂ ಸಂಬಂಧ ಇದೆಯಾ?
* ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ನರೇಂದ್ರ ಮೋದಿ ಕರೆದುಕೊಂಡು ಬಂದು ಮ್ಯಾಜಿಕ್ ಮಾಡೋದು ಭ್ರಮೆ ಅಷ್ಟೇ. ಜೆಡಿಎಸ್ ಪಾಪ 8 ಜಿಲ್ಲೆಯಲ್ಲಿ ಫೈಟ್ ಮಾಡುತ್ತಾರೆ ಅಷ್ಟೇ. ಹಾಗಾಗಿಯೇ ನಾವೇ ಅಧಿಕಾರಕ್ಕೆ ಬರುತ್ತೇವೆ.
* ಬಿಜೆಪಿಯದ್ದು ಯೂ ಟರ್ನ್ ಗೌರ್ನಮೆಂಟ್. ನಮ್ಮ ಅನ್ನ ಭಾಗ್ಯ ಕಾಪಿ ಮಾಡಿ ಅನ್ನಪೂರ್ಣ ಮಾಡುತ್ತಾರಂತೆ. ಅವರು ಅಧಿಕಾರಕ್ಕೆ ಬರಲ್ಲ, ಮಾಡೋದು ಇಲ್ಲ. ನರೇಂದ್ರ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಅಂದಾಕ್ಷಣ ನಂಬಿ ಬಿಡ್ತಾರಾ?
* ನಾವು ಪಕ್ಷದ ಎಲ್ಲಾ ಭರವಸೆ ಈಡೇರಿಸಿದ್ದೇವೆ. ನಮ್ಮ ಅನ್ನಭಾಗ್ಯದ ಬಗ್ಗೆ ಆರೋಪ ಮಾಡಿದ್ರು, ಅನ್ನಭಾಗ್ಯ ತಂದು ಜನರನ್ನ ಸೋಮಾರಿ ಮಾಡಿದ್ರು ಅಂದ್ರು. ಈಗ ಅವರು ಏನ್ಮಾಡಿದ್ರು, ಅನ್ನಪೂರ್ಣ ಯೋಜನೆ ತರುತ್ತೇವೆ ಅಂತಿದ್ದಾರೆ. ಇದು ಜನರನ್ನ ಸೋಮಾರಿ ಮಾಡುವುದಿಲ್ಲವೇ?
* 2012 ರಲ್ಲಿ ಅಭಿವೃದ್ಧಿಯಲ್ಲಿ 13 ನೇ ಸ್ಥಾನದಲ್ಲಿದ್ದೆವು. ಇವತ್ತು ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ರೈತರ ಸಾಲ ಮನ್ನಾ ಮಾಡಲಿಲ್ಲ. ರಾಜ್ಯಕ್ಕೆ ಕೊಡಬೇಕಾದ ಅನುದಾನ ಸರಿಯಾಗಿ ಕೊಟ್ಟಿಲ್ಲ. ಅಮಿತ್ ಶಾ ಲೆಕ್ಕ ಬೇರೆ ಕೇಳುತ್ತಾರೆ. ಪ್ರಧಾನಿ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ?
* ಇವನು ಯಾವ ಚಾಣಕ್ಯ ಅಂತಾ ನನಗೆ ಗೊತ್ತಿಲ್ಲ. ನಾನಂತೂ ಚಾಣಕ್ಯನನ್ನ ನೋಡಿಲ್ಲ. ಇವನು ಸುಳ್ಳು ಹೇಳುವ ಚಾಣಕ್ಯ. ಏನ್ ಮ್ಯಾಜಿಕ್ ಮಾಡಿದರೂ ಆಟ ನಡೆಯಲ್ಲ. ನಾನು ಜೈನ್ ಅಲ್ಲ ಅಂತಾರೆ, ಇದಕ್ಕಿಂತ ಸುಳ್ಳು ಬೇಕಾ? ರಾಜ್ಯಸಭಾ ನಾಮಿನೇಶನ್ ನಲ್ಲಿ ಜೈನ್ ಅಂತಾ ಬರೆದುಕೊಂಡಿದ್ದಾರೆ. ನಾನು ಪಕ್ಕಾ ಹಿಂದೂ, ಆದರೆ ಅಮಿತ್ ಶಾ ಹಿಂದೂ ಅಲ್ಲ.
* ಜೆಡಿಎಸ್ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಅವರ ಬಗ್ಗೆ ನಮಗೆ ಸಾಫ್ಟ್ ಕಾರ್ನರ್ ಇಲ್ಲವೇ ಇಲ್ಲ. ರಾಜಕಾರಣದಲ್ಲಿ ನಮ್ಮ ಪ್ರತಿಸ್ಪರ್ಧಿ. ಪೂರ್ವನೂ ಇಲ್ಲ, ಆಶ್ರಮನೂ ಇಲ್ಲ. ನಮ್ಮ ಪೂರ್ವಾಶ್ರಮ ಸೊಶಿಯಲಿಸ್ಟ್ ಪಾರ್ಟಿ.
* ಇದೇ ದೇವೇಗೌಡ ನರೇಂದ್ರ ಮೋದಿ ಪಿಎಂ ಆದರೆ ಪಾರ್ಲಿಮೆಂಟ್ ಗೆ ಹೋಗಲ್ಲ ಅಂದಿದ್ದರು. ಇದೇ ಮೋದಿ ದೇವೇಗೌಡರನ್ನ ವೃದ್ಧಾಶ್ರಮಕ್ಕೆ ಕಳುಹಿಸಬೇಕು ಅಂತೇಳಿದ್ದರು. ಆದರೆ ಈಗ ಇಬ್ಬರು ಹೊಗಳಿಕೊಳ್ಳುತ್ತಾರೆ. ಅಡ್ವಾಣಿ ಅವರಿಗೆ ಗೌರವ ಕೊಡಲಿಲ್ಲ ಇವರು, ನಮಗೇನು ಹೇಳೋದು?
* ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. 224 ಕ್ಷೇತ್ರದಲ್ಲಿ ಒಬ್ಬ ಮುಸ್ಲಿಂಗೆ ಟಿಕೆಟ್ ಕೊಟ್ಟಿಲ್ಲ. ಒಬ್ಬ ಕ್ರಿಶ್ಚಿಯನ್ ಗೆ ಟಿಕೆಟ್ ಕೊಟ್ಟಿಲ್ಲ. ಇವರೇನು ಮಾತಾಡೋದು?
* ನನ್ನ, ಪರಮೇಶ್ವರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತೆ. ಮೋದಿಯವರ ಆಡಳಿತದಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ. ಶೇ.38 ರಷ್ಟು ದಲಿತರ ಮೇಲೆ ಹಲ್ಲೆ ಪ್ರಕರಣಗಳು ಬಿಜೆಪಿ ಅವಧಿಯಲ್ಲಿ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಮತ್ತೆ ಅಧಿಕಾರ ಪಡೆಯಲಿದೆ. ಅಂತಂತ್ರ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗುವುದಿಲ್ಲ. ಇದೇ ವಾಸ್ತವ.
* ಐಟಿ ದಾಳಿ ಬಗ್ಗೆ ಭಯವಿಲ್ಲ. ನನ್ನ ಬಳಿ ಏನೂ ಇಲ್ಲ, ದಾಳಿ ಮಾಡಲಿ ನನಗೇನು ಚಿಂತೆ ಇಲ್ಲ. ಐಟಿ ದಾಳಿ ವಿರೋಧಿಯಲ್ಲ, ದಾಳಿ ಮಾಡಲಿ ಅದಕ್ಕೆ ಆಕ್ಷೇಪಣೆ ಇಲ್ಲ. ಆ ಇಲಾಖೆ ಇರುವುದೇ ಅದಕ್ಕೆ, ಆದರೆ ಚುನಾವಣಾ ವೇಳೆ ದಾಳಿ ಮಾಡಿ ಹೆದರಿಸುತ್ತಿದ್ದಾರೆ. ಇದರ ಹಿಂದ ಮೋದಿ ಶಾ ಇದ್ದಾರೆ. ಸೋಮಶೇಖರ ರೆಡ್ಡಿ ಜಡ್ಜ್ ಗೆ ಲಂಚ ಕೊಡೋಕೆ ಹೋಗಿ ಜೈಲಿಗೆ ಹೋಗಿರಲಿಲ್ಲವೇ? ಅದು ಅಮಿತ್ ಶಾಗೆ ಗೊತ್ತಿಲ್ಲವೇ?
* ನಾನು ಬಿಜೆಪಿ ಸೇರಲು ಹೋಗಿದ್ದೆ ಅನ್ನೋದು ಸುಳ್ಳು. ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಡ್ವಾಣಿ ಅವರು ನನಗೆ ಚೆನ್ನಾಗಿಯೇ ಗೊತ್ತು. ಬಿಜೆಪಿ ಜತೆ ಅಧಿಕಾರ ಮಾಡಿದರೆ ನನ್ ಹೆಣದ ಮೇಲೆ ಅಂತಾ ದೇವೇಗೌಡರು ಹೇಳಿದ್ರು. ಈಗ ನನ್ ಮನೆಗೆ ಸೇರಿಸಲ್ಲ ಅಂತ ಹೇಳಿದ್ದಾರೆ ದೇವೇಗೌಡರು. ಇದಕ್ಕೇನು ಹೇಳೋದು?
* ಯೋಗಿ ಆದಿತ್ಯನಾಥ್ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ. 307 ಕೇಸ್ ಅವರ ಮೇಲಿದೆ. ಇಂತವರು ರಾಜ್ಯದಲ್ಲಿ ಪ್ರಚಾರ ಮಾಡುತ್ತಾರೆ. ಇದು ಹಾಸ್ಯಾಸ್ಪದವಾಗಿದೆ.