4 ರಾಜ್ಯಗಳ ವಿಚಿತ್ರ ಫಲಿತಾಂಶ ಜನರಿಗೆ ಆಘಾತವುಂಟು ಮಾಡಿದೆ: ಮಾಯಾವತಿ

Public TV
1 Min Read
Mayawati

ಲಕ್ನೋ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ ಹಾಗೂ ತೆಲಂಗಾಣ ಈ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (Election Results) ಭಾನುವಾರ ಹೊರಬಿದ್ದಿದೆ. ಈ ಚುನಾವಣಾ ಫಲಿತಾಂಶದ ಕುರಿತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ (Mayawati) ವಿಶ್ಲೇಷಣೆ ಮಾಡಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿತೆ ಬರೆದುಕೊಂಡಿದ್ದಾರೆ. ಇಡೀ ಚುನಾವಣೆಯ ವಾತಾವರಣವನ್ನು ಅವಲೋಕಿಸಿದಾಗ ಅನುಮಾನ, ಆಶ್ಚರ್ಯ, ಆತಂಕ ಕಾಡುವುದು ಸಹಜ. ಈ ವಿಚಿತ್ರ ಫಲಿತಾಂಶವು ಜನರಿಗೆ ಆಘಾತವನ್ನುಂಟು ಮಾಡಿತು ಎಂದಿದ್ದಾರೆ.

ಎಕ್ಸ್ ನಲ್ಲಿ ಏನಿದೆ..?: ಇತ್ತೀಚೆಗಷ್ಟೇ ನಡೆದ ದೇಶದ ನಾಲ್ಕು ರಾಜ್ಯಗಳ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಏಕಪಕ್ಷೀಯವಾಗಿದ್ದು, ಇಡೀ ಚುನಾವಣೆಯ ವಾತಾವರಣವನ್ನು ಅವಲೋಕಿಸಿದಾಗ ಜನರೆಲ್ಲರಿಗೂ ಅನುಮಾನ, ಆಶ್ಚರ್ಯ, ಆತಂಕ ಕಾಡುವುದು ಸಹಜ. ಇಂತಹ ವಿಚಿತ್ರ ಫಲಿತಾಂಶವು ಜನರಿಗೆ ಆಘಾತವನ್ನುಂಟು ಮಾಡಿತು ಎಂದಿದ್ದಾರೆ. ಇದನ್ನೂ ಓದಿ: ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ

ಇಡೀ ಚುನಾವಣೆಯ ವಾತಾವರಣ ಸಂಪೂರ್ಣ ಭಿನ್ನವಾಗಿದ್ದು, ಆಪ್ತ ಹೋರಾಟದಂತೆ ಕುತೂಹಲ ಮೂಡಿಸಿದೆ. ಆದರೆ ಚುನಾವಣಾ ಫಲಿತಾಂಶ ಅದಕ್ಕಿಂತ ಸಂಪೂರ್ಣ ಭಿನ್ನವಾಗಿದ್ದು, ಸಂಪೂರ್ಣ ಏಕಪಕ್ಷೀಯವಾಗಿದ್ದಾಗಿದೆ. ಗಂಭೀರ ಚಿಂತನೆ ಮತ್ತು ಪರಿಹಾರದ ಅಗತ್ಯವಿರುವಂತಹ ನಿಗೂಢ ವಿಷಯವಾಗಿದೆ. ಜನರ ನಾಡಿಮಿಡಿತವನ್ನು ಗ್ರಹಿಸುವಲ್ಲಿ ಒಂದು ಭಯಾನಕ ತಪ್ಪು ಚುನಾವಣಾ ಚರ್ಚೆಯ ಹೊಸ ವಿಷಯವಾಗಿದೆ ಎಂದರು.

ಬಿಎಸ್‍ಪಿಯ ಎಲ್ಲಾ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪೂರ್ಣ ಶಕ್ತಿಯಿಂದ ಹೋರಾಡಿದರು. ಆದರೆ ಅಂತಹ ವಿಚಿತ್ರ ಫಲಿತಾಂಶದಿಂದ ಅವರು ನಿರಾಶೆಗೊಳ್ಳಬಾರದು. ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟಗಳಿಂದ ಸ್ಪೂರ್ತಿ ಪಡೆದು ಮುನ್ನಡೆಯಲು ಪ್ರಯತ್ನಿಸುತ್ತಲೇ ಇರಬೇಕು. ಸೋಲಿನ ಪರಾಮರ್ಶೆಗೆ, ಲೋಕಸಭೆ ಚುನಾವಣೆಗೆ ಡಿಸೆಂಬರ್ 10 ರಂದು ಲಕ್ನೋದಲ್ಲಿ ಸಭೆ ನಡೆಸಲಾಗುವುದು ಎಂದು ಬರೆದುಕೊಂಡಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ ಹಾಗೂ ತೆಲಂಗಾಣ ರಾಜ್ಯಗಳ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು, ಇದರಲ್ಲಿ ತೆಲಂಗಾಣದ ಕಾಂಗ್ರೆಸ್, ಉಳಿದ ಮೂರು ಕಡೆ ಬಿಜೆಪಿ ಭರ್ಜರಿ ಗೆಲುವು ಕಂಡಿದೆ. ಇನ್ನೊಂದು ರಾಜ್ಯವಾದ ಮಿಝೋರಾಂ ಫಲಿತಾಂಶ ಇಂದು ಸಂಜೆ ಹೊರಬೀಳಲಿದೆ.

Share This Article