Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

Latest

ವಿಶ್ವದಲ್ಲಿ ಆರಂಭಗೊಂಡಾಗ ಭಾರತದಲ್ಲೂ ಬಿಎಸ್‍ಎನ್‍ಎಲ್‍ನಿಂದ ಸಿಗಲಿದೆ 5ಜಿ ಸೇವೆ!

Public TV
Last updated: July 17, 2018 2:02 pm
Public TV
Share
2 Min Read
5G BSNL
SHARE

ನವದೆಹಲಿ: ಜಗತ್ತಿನಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗಲೇ ಭಾರತದಲ್ಲೂ ಈ ಸೇವೆಯನ್ನು ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಿದ್ಧವಾಗಿದೆ. ದೇಶದಲ್ಲಿ ಯಾವುದೇ ಟೆಲಿಕಾಂ 5ಜಿ ಸೇವೆಯನ್ನು ಆರಂಭಿಸುವ ಮುನ್ನವೇ  ಬಿಎಸ್‍ಎನ್‍ಎಲ್ ಭಾರತದಲ್ಲಿ 5ಜಿ ಸೇವೆ ನೀಡಲಿದೆ.

ವಿಶ್ವದ ಯಾವುದೇ ದೇಶದಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗ ಭಾರತದಲ್ಲೂ ಈ ಸೇವೆ ಆರಂಭವಾಗಲಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಬಿಎಸ್‍ಎನ್‍ಎಲ್‍ಗಿಂತ ಮೊದಲು ಯಾರು 5ಜಿ ಸೇವೆ ನೀಡಲು ಸಾಧ್ಯವಿಲ್ಲ ಎಂದು ಬಿಎಸ್‍ಎನ್‍ಎಲ್‍ನ ಪ್ರಧಾನ ವ್ಯವಸ್ಥಾಪಕ ಅನಿಲ್ ಜೈನ್ ಹೇಳಿದ್ದಾರೆ.

ಯಾವಾಗ ಈ ಸೇವೆ ಆರಂಭಗೊಳ್ಳಬಹುದು ಎನ್ನುವ ಪ್ರಶ್ನೆಗೆ, ಈ ಸೇವೆ ಆರಂಭಗೊಳ್ಳುವ ಬಗ್ಗೆ ಇನ್ನೂ ಸಮಯ ನಿಗದಿಯಾಗಿಲ್ಲ. ಜೂನ್ 2020ರ ವೇಳೆ 5ಜಿ ಆರಂಭಗೊಳ್ಳಬಹುದು ಎನ್ನುವ ಮಾತು ವಿಶ್ವದೆಲ್ಲೆಡೆ ಕೇಳಿ ಬರುತ್ತಿದೆ. ಈ ಮಧ್ಯೆ ಜೂನ್ 2019ರ ವೇಳೆಗೆ 5ಜಿ ಸೇವೆ ಆರಂಭಗೊಂಡರು ಅಚ್ಚರಿಯಿಲ್ಲ ಎಂದು ಉತ್ತರಿಸಿದರು.

ಹಿಂದೆ ವಿಶ್ವದಲ್ಲಿ 4ಜಿ ಸೇವೆ ಆರಂಭಗೊಂಡಿದ್ದಾಗ ಭಾರತಕ್ಕೆ ಈ ಅವಕಾಶ ತಪ್ಪಿತ್ತು. ಆದರೆ 5ಜಿಯಲ್ಲಿ ಹೀಗೆ ಆಗುವುದಿಲ್ಲ. ಈಗಾಗಲೇ 5ಜಿ ಸೇವೆ ನೀಡಲು ಪರೀಕ್ಷೆಗಳು ಆರಂಭಗೊಂಡಿದ್ದು ಅಂತರಾಷ್ಟ್ರೀಯ ಕಂಪೆನಿಗಳಾದ ನೋಕಿಯಾ, ಎನ್‍ಟಿಟಿ ಜೊತೆ ಉನ್ನತ ತಂತ್ರಜ್ಞಾನ ಸಂಬಂಧ ಒಪ್ಪಂದಗಳು ನಡೆದಿದೆ. ಸದ್ಯ ಜರ್ಮನಿ, ಅಮೆರಿಕ, ಚೀನಾ ಮತ್ತು ಭಾರತದಲ್ಲಿ 5ಜಿ ಸಂಬಂಧ ಹಲವು ಪರೀಕ್ಷೆಗಳು ನಡೆಯುತ್ತಿವೆ ಎಂದು ವಿವರಿಸಿದರು.

5g internet

2020ರ ವೇಳೆಗೆ ದೇಶದಲ್ಲಿ 5ಜಿ ತಂತ್ರಜ್ಞಾನ ಸೇವೆ ಆರಂಭಗೊಳ್ಳಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2017ರ ಆಗಸ್ಟ್ ನಲ್ಲಿ ಸಮಿತಿ ರಚಿಸಿತ್ತು. 3ಜಿ ಮತ್ತು 4ಜಿ ಮಾನದಂಡವನ್ನು ನಿರ್ಧರಿಸುವ ಸಂದರ್ಭದಲ್ಲಿ ನಾವು ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದೇವು. ಆದರೆ ವಿಶ್ವದಲ್ಲಿ 5ಜಿ ಮಾನದಂಡ ಸಿದ್ಧತೆ ಮಾಡುವ ಸಂದರ್ಭದಲ್ಲಿ ಭಾರತವೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದರು.

500 ಕೋಟಿ ಮೂಲನಿಧಿಯೊಂದಿಗೆ 5ಜಿ ಸಂಬಂಧಿತ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯಲಿದ್ದು, ಈ ಸಮಿತಿಯಲ್ಲಿ ಟೆಲಿಕಾಂ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಇರಲಿದ್ದಾರೆ.

5ಜಿ ಬಂದರೆ ನಗರ ಪ್ರದೇಶದಲ್ಲಿ 10 ಗಿಗಾ ಬೈಟ್ಸ್ ಪರ್ ಸೆಕೆಂಡ್ ಬ್ರಾಡ್‍ಬ್ಯಾಂಡ್ ಸಂಪರ್ಕ ಸಿಕ್ಕಿದರೆ, ಗ್ರಾಮಾಂತರ ಪ್ರದೇಶದಲ್ಲಿ 1 ಗಿಗಾ ಬೈಟ್ಸ್ ಪರ್ ಸೆಕೆಂಡ್ ಸಿಗಲಿದೆ.

ಈ ಹಿಂದೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) 5ಜಿ ಸೇವೆಗೆ 3300- 3400 Mhz ಮತ್ತು 3400- 3600 Mhz ಬ್ಯಾಂಡ್ ಬಳಸಲು ಸಮಯ ನಿಗದಿ ಪಡಿಸಿ ಎಂದು ಟೆಲಿಕಾಂ ಕಂಪೆನಿಗಳಿಗೆ ಹೇಳಿತ್ತು.  ಕೇಂದ್ರ ಸರ್ಕಾರ 5ಜಿ ಸೇವೆ ಆರಂಭಿಸಲು ಉತ್ಸುಕವಾಗಿದ್ದರೂ ಭಾರತೀಯ ಟೆಲಿಕಾಂ ಕಂಪೆನಿ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕಾರಣ 2021-2022ರ ವೇಳೆಗೆ 5ಜಿ ಭಾರತದಲ್ಲಿ ಆರಂಭವಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

ಇಂಟರ್ ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯುನಿಯನ್(ಐಟಿಯು) 5ಜಿ ಮಾನದಂಡವನ್ನು ಸಿದ್ಧಪಡಿಸಲಿದ್ದು, ಈಗಾಗಲೇ ಪ್ರಸ್ತಾವನೆ ಸಿದ್ದಪಡಿಸಿದೆ. ಫೆಬ್ರವರಿಯಲ್ಲಿ ಪ್ರಸ್ತಾಪಗೊಂಡ ಪ್ರಕಾರ 5ಜಿ ಡೌನ್‍ಲಿಂಕ್ ಸ್ಪೀಡ್ 20 ಗಿಗಾಬೈಟ್ಸ್ ಪರ್ ಸೆಕೆಂಡ್ ಇರಬೇಕೆಂದು ಹೇಳಿದೆ.

TAGGED:5G5ಜಿbsnlindiainternettechworldಟೆಲಿಕಾಂಬಿಎಸ್‍ಎನ್‍ಎಲ್ಬ್ರಾಡ್‍ಬ್ಯಾಂಡ್ಭಾರತ
Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ತುಳುನಾಡಿನ ದೈವಕ್ಕೆ ಅಪಮಾನ – ಕೇಸ್ ರದ್ದಿಗೆ ರಣವೀರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾ.9ಕ್ಕೆ ಮುಂದೂಡಿಕೆ
Cinema Latest Top Stories
Rashmika Mandanna Vijay Deverakonda
ತೆಲಂಗಾಣದ ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ವಿಜಯ್‌-ರಶ್ಮಿಕಾ
Cinema Latest South cinema Top Stories
Rashmika Mandanna Vijay Devarakonda 1
ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್
Cinema Latest South cinema Top Stories
Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood

You Might Also Like

donald trump 2
Latest

4-5 ವಾರಗಳವರೆಗೆ ಮುಂದುವರಿಯುತ್ತೆ – ಅರಬ್‌ ರಾಷ್ಟ್ರಗಳು ನಮ್ಮ ಜೊತೆ ಸೇರಲು ಬಯಸುತ್ತಿವೆ: ಟ್ರಂಪ್‌

Public TV
By Public TV
6 hours ago
MLC Bhojegowda
Chikkamagaluru

ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭೋಜೇಗೌಡ ಸೇಫ್ – ಸ್ವತಃ ವಿಡಿಯೋ ಮಾಡಿ ಕಳಿಸಿರುವ MLC

Public TV
By Public TV
6 hours ago
Sabarimala Temple
Latest

ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಣಯ

Public TV
By Public TV
7 hours ago
Khamenei Wife
Latest

ಖಮೇನಿ ಹತ್ಯೆಯಾದ ಎರಡು ದಿನಗಳ ಬಳಿಕ ಪತ್ನಿ ಮನ್ಸೌರೆ ಸಾವು

Public TV
By Public TV
7 hours ago
gold price hike
Latest

Iran War| ಹೂಡಿಕೆದಾರರಿಗೆ 8 ಲಕ್ಷ ಕೋಟಿ ಲಾಸ್‌ – 2 ಲಕ್ಷ ದಾಟುತ್ತಾ ಚಿನ್ನದ ದರ?

Public TV
By Public TV
8 hours ago
Narendra Modi Ayatollah Ali Khamenei
Latest

ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯನ್ನು ಭಾರತ ಖಂಡಿಸಿಲ್ಲ ಯಾಕೆ?

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?