ನವದೆಹಲಿ: ರಿಲಯನ್ಸ್ ಜಿಯೋಗೆ ಫೈಟ್ ನೀಡಲು ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಲ್ 36 ರೂ. ಗೆ 1 ಜಿಬಿ ಡೇಟಾ ನಿಡಲು ಮುಂದಾಗಿದೆ.
ಪ್ರಿಪೇಯ್ಡ್ ಗ್ರಾಹಕರು 28 ದಿನ ವ್ಯಾಲಿಡಿಟಿ ಹೊಂದಿರುವ ವಿಶೇಷ ಟ್ಯಾರಿಫ್ ವೋಚರ್(ಎಸ್‍ಟಿವಿ) 291 ರೂ. ರಿಚಾರ್ಜ್ ಮಾಡಿದ್ದರೆ ಇಲ್ಲಿಯವರೆಗೆ 4 ಜಿಬಿ ಡೇಟಾ ಸಿಗುತಿತ್ತು. ಆದರೆ ಇನ್ನು ಮುಂದೆ ನೀವು 8 ಜಿಬಿ ಡೇಟಾವನ್ನು ಪಡೆಯಬಹುದು.
Advertisement
ಇದರ ಜೊತೆಯಲ್ಲೇ 78 ರೂ. ಎಸ್‍ಟಿವಿ ರಿಚಾರ್ಜ್ ಮಾಡಿದರೆ 4 ಜಿಬಿ ಡೇಟಾವನ್ನು ಪಡೆಯಬಹುದು. ಈ ಹಿಂದೆ ಈ ಆಫರ್‍ನಲ್ಲಿ ರಿಚಾರ್ಜ್ ಮಾಡಿದ್ದರೆ 2 ಜಿಬಿ ಡೇಟಾ ಸಿಗುತಿತ್ತು.
Advertisement
36ರೂಪಾಯಿಗೆ 1 ಜಿಬಿ ನೀಡುವುದು ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತೀ ಕಡಿಮೆ ಬೆಲೆ ಆಫರ್ ಎಂದು ಬಿಎಸ್‍ಎನ್‍ಎಲ್ ಹೇಳಿದೆ. ಬಿಎಸ್‍ಎನ್‍ಎಲ್ ನಿರ್ದೇಶಕ ಆರ್‍ಕೆ ಮಿತ್ತಲ್ ಹೇಳಿಕೆಯನ್ನು ಬಿಡುಗಡೆಗೊಳಿಸಿ ಈ ಹೊಸ ಆಫರ್ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದಿನಿಂದ(ಫೆ.6ರಿಂದ) ಈ ಆಫರ್ ಲಭ್ಯವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Advertisement
ಹ್ಯಾಪಿ ನ್ಯೂ ಈಯರ್ ಪ್ಲಾನ್ ನಲ್ಲಿರುವ ಗ್ರಾಹಕರಿಗೆ ರಿಲಯನ್ಸ್ ಜಿಯೋ ಜನವರಿ 1ರಿಂದ ಮಾರ್ಚ್ 31ರವರೆಗೆ ಪ್ರತಿ ದಿನ 1ಜಿಬಿ 4 ಜಿ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. 1ಜಿಬಿ ಡೇಟಾ ಮುಗಿದ ಮೇಲೆ 128 ಕೆಬಿಪಿಎಸ್ ವೇಗದಲ್ಲಿ ಡೇಟಾ ಸಿಗುತ್ತಿದೆ.