ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ – BSF ಯೋಧ ಹುತಾತ್ಮ

Public TV
1 Min Read
BSF Sub Inspector Mohammed Imteyaz

– 7 ಮಂದಿ ಯೋಧರಿಗೆ ಗಾಯ

ಶ್ರೀನಗರ: ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ (International Boundary) ಭಾರತದ ವಿರುದ್ಧ ಪಾಕಿಸ್ತಾನ (Pakistan) ನಡೆಸಿದ ಶೆಲ್ ದಾಳಿಯಲ್ಲಿ (Shell Attack) ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದಾರೆ.

ಬಿಎಸ್‌ಎಫ್ ಸಬ್-ಇನ್ಸ್ಪೆಕ್ಟರ್ ಮೊಹಮ್ಮದ್ ಇಮ್ತೆಯಾಜ್ ಹುತಾತ್ಮರಾದ ಯೋಧ. ಶೆಲ್ ದಾಳಿಯಲ್ಲಿ ಇನ್ನೂ 7 ಮಂದಿ ಯೋಧರು ಗಾಯಗೊಂಡಿದ್ದಾರೆ. ಆರ್‌ಎಸ್ ಪುರ ವಲಯದಲ್ಲಿ ಈ ದಾಳಿ ನಡೆದಿದೆ. ಇಮ್ತೆಯಾಜ್ ಗಂಭೀರ ಗಾಯಗೊಂಡು ಸಾವನ್ನಪ್ಪಿದರೆ, ಇತರೆ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕದನ ವಿರಾಮಕ್ಕೆ ಏನಾಯಿತು?: ಶ್ರೀನಗರದಲ್ಲಿ ಸ್ಫೋಟದ ಸದ್ದು ಕೇಳಿ ಜಮ್ಮು ಸಿಎಂ ಆತಂಕ

ಮೇ 10ರಂದು ಜಮ್ಮು ಜಿಲ್ಲೆಯ ಆರ್‌ಎಸ್ ಪುರ ಪ್ರದೇಶದಲ್ಲಿ ಶೆಲ್ ದಾಳಿಯ ಸಮಯದಲ್ಲಿ, ರಾಷ್ಟ್ರದ ಸೇವೆಗಾಗಿ ಬಿಎಸ್‌ಎಫ್ ಸಬ್-ಇನ್‌ಸ್ಪೆಕ್ಟರ್ ಎಂಡಿ ಇಮ್ತೆಯಾಜ್ ಹುತಾತ್ಮರಾಗಿದ್ದಾರೆ ಎಂದು ಜಮ್ಮು ಫ್ರಾಂಟಿಯರ್ ಎಕ್ಸ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮತ್ತೆ ಕದನ ವಿರಾಮ ಉಲ್ಲಂಘಿಸಿ ಬಾಲ ಬಿಚ್ಚಿದ ಪಾಕ್‌ – ಜಮ್ಮು, ರಾಜಸ್ಥಾನದ ಹಲವೆಡೆ ಸ್ಫೋಟದ ಸದ್ದು

ಬಿಎಸ್‌ಎಫ್ ಮಹಾನಿರ್ದೇಶಕರು ಮತ್ತು ಎಲ್ಲಾ ಅಧಿಕಾರಿಗಳು ಹುತಾತ್ಮರಾದ ಯೋಧನಿಗೆ ಸಂತಾಪ ಸೂಚಿಸಿದ್ದಾರೆ. ಇಮ್ತೆಯಾಜ್ ಅವರನ್ನು ಗೌರವಿಸಲು ಭಾನುವಾರ ಪಲೌರಾದಲ್ಲಿರುವ ಬಿಎಸ್‌ಎಫ್‌ನ ಜಮ್ಮು ಫ್ರಾಂಟಿಯರ್‌ನಲ್ಲಿ ಮಾಲಾರ್ಪಣೆ ಸಮಾರಂಭ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಕದನ ವಿರಾಮ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ

Share This Article