ನೆಲಮಂಗಲ: ಭಾರತ ಮಾತೆಯ ಹೆಮ್ಮೆಯ ಪುತ್ರ ಬಿಎಸ್‍ಎಫ್ ಪಿಎಸ್‍ಐ ತೀವ್ರ ಹೃದಯಾಘಾತದಿಂದ ವೀರ ಮರಣವನ್ನ ಹೊಂದಿದ್ದಾರೆ.
ಶ್ರೀನಿವಾಸಮೂರ್ತಿ (55) ಕೆಲಸದ ಸಮಯದಲ್ಲಿ ಎರಡು ದಿನದ ಹಿಂದೆ ತೀವ್ರ ಹೃದಯಾಘಾತದಿಂದ ವೀರ ಮರಣವನ್ನಪ್ಪಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಗೋಪಾಲಪುರದ ನಿವಾಸಿಯಾಗಿರುವ ಇವರು ಪಶ್ಚಿಮ ಬಂಗಾಳದಲ್ಲಿ ಗಡಿಭಾಗದ ಭದ್ರತೆಯ ಪಿಎಸ್‍ಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
Advertisement
Advertisement
ಮೃತರ ಪಾರ್ಥೀವ ಶರೀರ ನಿನ್ನೆ ರಾತ್ರಿ ಸ್ವ-ಗ್ರಾಮ ಗೋಪಾಲಪುರಕ್ಕೆ ಆಗಮಿಸಿದ್ದು, ಕುಟುಂಬಸ್ಥರು ಹಾಗೂ ಗ್ರಾಮದ ಜನರಿಗಾಗಿ ಕೆಲಕಾಲ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಅವರ ಜಮೀನಿನಲ್ಲಿ ಸೇನಾಪಡೆಯ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ರಾಷ್ಟ್ರ ಧ್ವಜವನ್ನ ಇಡಲಾಯಿತು. ಬಳಿಕ ಕುಟುಂಬಸ್ಥರಿಗೆ ಧ್ವಜವನ್ನು ಹಸ್ತಾಂತರಿಸಿ ಗೌರವದೊಂದಿಗೆ ವೀರ ಸೇನಾನಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ದೋಖಾ – ಆರೋಪಿ ಅರೆಸ್ಟ್
Advertisement
Advertisement
ಈ ವೇಳೆ ಕುಟುಂಬಸ್ಥರು, ಸೇನಾ ಅಧಿಕಾರಿಗಳು ಹಾಗೂ ಮಾದನಾಯಕನಹಳ್ಳಿ ಪೊಲೀಸರು ಉಪಸ್ಥಿತರಿದ್ದರು.