ಚಂಡೀಗಢ: ಭಾರತದ ಗಡಿ ಭದ್ರತಾ ಪಡೆ (BSF) ಭಯೋತ್ಪಾದನಾ ಚಟುವಟಿಕೆಗಳ ಮೇಲಿನ ತನ್ನ ದಮನವನ್ನು ಮುಂದುವರಿಸಿದೆ. ಪಾಕಿಸ್ತಾನದಿಂದ (Pakistan) ಭಾರತಕ್ಕೆ (India) ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಡ್ರೋನ್ (Drone) ಒಂದನ್ನು ಬಿಎಸ್‌ಎಫ್ ಅಧಿಕಾರಿಗಳು ಹೊಡೆದುರುಳಿಸಿದ್ದಾರೆ. ಕೇವಲ 2 ದಿನಗಳ ಹಿಂದೆಯೂ ಇಂತಹುದೇ ಘಟನೆ ನಡೆದಿತ್ತು.
ಚಹರ್‌ಪುರ್ ಗ್ರಾಮದ ಬಳಿ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದ ಡ್ರೋನ್ ಅನ್ನು ಗಮನಿಸಿದ ಸೈನಿಕರು ಅದರ ಮೇಲೆ ಗುಂಡು ಹಾರಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಮತ್ತೊಂದು ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಡ್ರೋನ್‌ನ ಶಬ್ಧ ಕೇಳಿ ಬಿಎಸ್‌ಎಫ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ಗುಂಡು ಶಂಕಿತ ಡ್ರೋನ್‌ಗೆ ಬಡಿದು, ಅದು ನೆಲಕ್ಕೆ ಉರುಳಿದೆ. ತಕ್ಷಣ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಸಂಬAಧಪಟ್ಟ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ತಡರಾತ್ರಿ ಎಟಿಎಂಗೆ ಪೂಜೆ – ಕಳ್ಳತನಕ್ಕೆ ಯತ್ನವೋ, ವಾಮಾಚಾರವೋ!?
Advertisement
ಸೈನಿಕರು ಹೊಡೆದುರುಳಿಸಿದ ಡ್ರೋನ್ ಚಹರ್‌ಪುರ್ ಗ್ರಾಮದಲ್ಲಿ ಗಡಿ ಬೇಲಿಯ ಬಳಿ ದೊರಕಿದೆ. ಡ್ರೋನ್ ಪತ್ತೆಯಾದಾಗ ಅದು ಭಾಗಶಃ ಹಾನಿಯಾದ ಸ್ಥಿತಿಯಲ್ಲಿತ್ತು. ಡ್ರೋನ್ ಕೆಳಗಡೆ ಬಿಳಿ ಬಣ್ಣದ ಪಾಲಿಥಿನ್‌ನಲ್ಲಿ ಶಂಕಿತ ವಸ್ತುವನ್ನು ಅಳವಡಿಸಲಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Advertisement
ನವೆಂಬರ್ 26ರಂದು ಪಂಜಾಬ್‌ನ ಅಮೃತಸದರದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್ ಸೈನಿಕರು ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದೆ. ಅದೇ ದಿನ ಪಂಜಾಬ್‌ನ ಪಠಾಣ್‌ಕೋಟ್ ಗಡಿ ಬಳಿ ಭಾರತವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಶಂಕಿತರನ್ನು ತಡೆಹಿಡಿಯಲಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಫುಟ್‍ಬಾಲ್ ಫಿವರ್ – ಫಿಫಾ ಮಾದರಿ ಆ್ಯಂಥಮ್ ಸಾಂಗ್ ಮಾಡಿದ ವಿದ್ಯಾರ್ಥಿಗಳು