ನವದೆಹಲಿ: ಗಡಿ ಭದ್ರತಾ ಪಡೆಯ (ಬಿಎಸ್‍ಎಫ್) ಇಬ್ಬರು ಯೋಧರು ಏಣಿ ಅಳವಡಿಸಿದ ಮೋಟಾರ್ ಬೈಕ್ ಮೇಲೆ ನಿಂತು ನಿರಂತರವಾಗಿ 10 ಗಂಟೆ 37 ನಿಮಿಷ 27 ಸೆಕೆಂಡ್ ಬೈಕ್ ಓಡಿಸಿ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.
ಮಂಗಳವಾರ ಬಿಎಸ್‍ಎಫ್‍ನ `ಜನ್ಬಾಜ್’ ತಂಡದ ಇನ್ಸ್ ಸ್ಪೆಕ್ಟರ್ ಅವದೇಶ್ ಕುಮಾರ್ ಸಿಂಗ್ ಮತ್ತು ಹೆಡ್ ಕಾನ್ಸ್ ಸ್ಟೆಬಲ್ ದುರ್ವೇಶ್ ಕುಮಾರ್ ಈ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.
Advertisement
ಈ ಇಬ್ಬರು ಯೋಧರು 350 ಸಿಸಿ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕಿಗೆ 16.5 ಅಡಿ ಎತ್ತರದ ಏಣಿಯನ್ನು ಅಳವಡಿಸಿ ಸಾಹಸ ಮಾಡಿದ್ದಾರೆ. ನಂತರ ತಾವು ಅಳವಡಿಸಿದ ಏಣಿ ಮೇಲೆ ನಿಂತು ಸತತವಾಗಿ ಬೈಕ್ ಓಡಿಸಿ ಲಿಮ್ಕಾ ದಾಖಲೆ ಮಾಡಿದ್ದಾರೆ.
Advertisement
Advertisement
ಈ ಹಿಂದೆ ಭಾರತದ ಸೇನಾ ಪಡೆ ನಿರಂತರವಾಗಿ ಬೈಕ್ ಓಡಿಸಿ 9 ಗಂಟೆ 04 ನಿಮಿಷ, 05 ಸೆಕೆಂಡ್ ಓಡಿಸಿ ದಾಖಲೆ ಮಾಡಿದ್ದರು. ಈಗ ಆ ದಾಖಲೆಯನ್ನು ಈ ಇಬ್ಬರು ಯೋಧರು ಮುರಿದಿದ್ದಾರೆ. ಏಪ್ರಿಲ್ 13 ರಲ್ಲಿ ಮೂರು ಬೈಕ್ ಗಳಲ್ಲಿ 36 ಯೋಧರು ಇದ್ದು, ಕೇವಲ 55.52 ಸೆಕೆಂಡ್‍ಗಳಲ್ಲಿ ಒಂದು ಕಿ.ಮೀ. ದೂರವನ್ನು ಕ್ರಮಿಸಿದ್ದರು ಎಂದು ಬಿಎಸ್‍ಎಫ್ ತಿಳಿಸಿದೆ.
Advertisement
1990ರಲ್ಲಿ `ಜನ್ಬಾಜ್’ ತಂಡ ರಚನೆಯಾಗಿದ್ದು, ಬೈಕ್ ಸ್ಟಂಟ್‍ಗಳನ್ನು ಮಾಡುವುದರಲ್ಲಿ ಈ ತಂಡ ಪ್ರಸಿದ್ಧಿ ಪಡೆದಿದೆ. ಈ ದಾಖಲೆಯನ್ನು ದೆಹಲಿಯ ಚಾವ್ಲಾ ಬಿಎಸ್‍ಎಫ್ ಶಿಬಿರದಲ್ಲಿ ನಿರ್ಮಿಸಲಾಗಿದೆ.
Inspector Awdhesh Kumar Singh and Head Constable Durvesh Kumar of BSF motorcycle trick riding team "Janbaz" set a new world record when they rode for 10 hours 34 minutes 27 seconds continuously on a 16 feet 5 inch tall ladder fitted to their motorcycles pic.twitter.com/uXp5qLwVQq
— ANI (@ANI) April 25, 2018